ವಾಡಿ: ಮನೆ ಮನೆಗೆ ಗಂಗೆ ಯೋಜನೆಯ ಜಲಜೀವನ್ ಮಿಷನ್ ಗೆ ಕಮರವಾಡಿ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ ಘಟನೆ ಕಮರವಾಡಿ ಗ್ರಾಮದಲ್ಲಿ ನಡೆದಿದೆ.
ಜಲಜೀವನ್ ಮಿಷನ್ ಯೋಜನೆ ಬಹಳ ಜನೋಪಯೋಗಿಯಾಗಿದೆ ಎಂದ ಅಧಿಕಾರಿಗಳಿಗೆ ಗ್ರಾಮೀಣ ತರಾಟೆಗೆ ತೆಗೆದುಕೊಂಡಿದ್ದು, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕೊಟ್ಟು ನಾವು ಬಡವರ ಪರ ಎಂದು ಬೀಗಿದವರೇ ಇಂದು ಅನಿಲ ತುಂಬಿಸಲು ಡಬಲ್ ಹಣ ವಸೂಲಿ ಮಾಡುತ್ತಿದ್ದಾರೆ. ಅದರಂತೆ ಈಗ ಕುಡಿಯುವ ಶುದ್ಧ ನೀರು ಉಚಿತವಾಗಿ ಕೊಡುವುದಾಗಿ ನಂಬಿಸಿ ನಳಕ್ಕೆ ಮೀಟರ್ ಅಳವಡಿಸಲು ಮುಂದಾದರೆ ಉಗ್ರ ಹೋರಾಟ ಮಾಡುವುದಾಗಿ ಜನರ ಎಚ್ಚರಿಕೆ ನೀಡಿದ್ದಾರೆ.
ಉಚಿತವಾಗಿ ಕೊಡಬೇಕಾದ ಕುಡಿಯುವ ನೀರನ್ನು ಮಾರಾಟ ಮಾಡಲು ನಾವು ಬಿಡುವುದಿಲ್ಲ. ಬಣ್ಣ ಬಣ್ಣದ ಮಾತುಗಳನ್ನಾಡಿ ಯೋಜನೆ ಜಾರಿಗೆ ತರಲು ಯೋಚಿಸಿದರೆ ಜನರು ಧಂಗೆ ಏಳುತ್ತಾರೆ. ರೈತ ಕೃಷಿ ಕಾರ್ಮಿಕ ಸಂಘಟನೆಯ ಮುಖಂಡರಿಂದ ಎಚ್ಚರಿಸಿದ್ದಾರೆ.
ಗ್ರಾಮ ಸಭೆಯಲ್ಲಿ ಜಲಜೀವನ್ ಮಿಷನ್ ಯೋಜನೆ ವಿರೋಧಿಸಿ ಹೊರ ನಡೆದ ಗ್ರಾಮಸ್ಥರನ್ನು ಪಂಚಾಯಿತಿಯಲ್ಲೇ ಕೂಡಿ ಹಾಕಿದ ಪಿಡಿಯೋ ಭಾರತಿ ಮಣೂರ. ಜನರ ತೀವ್ರ ಆಕ್ರೋಶ. ನಂತರ ಗ್ರಾಮಸ್ಥರಿಗೆ ಕ್ಷಮೆಯಾಚಿಸಿ ಸಭೆಯ ನಡಾವಳಿಗೆ ಸಹಿ ಹಾಕಿಸಿಕೊಂಡರು.