Advertisement
ಶಾಸಕರು, ಸಂಸದರು, ಜಿ.ಪಂ ಮತ್ತು ತಾ.ಪಂ ಸದಸ್ಯರ ವಿರುದ್ಧ ಕ್ಷೇತ್ರದ ವಿವಿಧೆಡೆ ಅವಹೇಳಕಾರಿ ಫ್ಲೆಕ್ಸ್‍ಗಳನ್ನು ಅಳವಡಿಸಿರುವ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿ ಹನೂರು ಮತ್ತು ರಾಮಾಪುರ ಬ್ಲಾಕ್ ಕಾಂಗ್ರೆಸ್‍ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
Related Articles
Advertisement
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್ ದೊರೆರಾಜ್ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಶಾಸಕ ನರೇಂದ್ರ ಅವರ ಹೆಸರಿನಲ್ಲಿ ಬೆಳೆದು ಹಣದಾಸೆಗೆ ಇದೀಗ ಬೇರೆ ಪಕ್ಷಕ್ಕೆ ತೆರಳಿರುವ ಕೆಲವರು ಇವತ್ತು ದೊಡ್ಡ ನಾಯಕರಂತೆ ಮಾತನಾಡುತ್ತಾರೆ. ಇಂತಹವರು ಯಾವುದೇ ಕಾರಣಕ್ಕೂ ನಾಯಕರಾಗಲು ಸಾಧ್ಯವಿಲ್ಲ, ಇವರೆಲ್ಲಾ ಬಿಸ್ಕೆಟ್ ತಿನ್ನುವ ನಾಯಿಗಳಂತೆ ಎಂದು ಟೀಕಿಸಿದರು.
ಇದನ್ನೂ ಓದಿ :ಸರ್ಜಿಕಲ್ ದಾಳಿ ನಡೆದು 18 ತಿಂಗಳ ಬಳಿಕ ಬಾಲಾಕೋಟ್ ನಲ್ಲಿ ಮತ್ತೆ ತಲೆಎತ್ತಿದ ಉಗ್ರರ ಶಿಬಿರ
ಶೀಘ್ರ ಬಂಧನದ ಭರವಸೆ: ಇದೇ ವೇಳೆ ಪ್ರತಿಭಟನಾನಿರತ ಮುಖಂಡರು ಅವಹೇಳನಕಾರಿ ಫ್ಲೆಕ್ಸ್ ಹಾಕಿರುವ ಕಿಡಿಗೇಡಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಡಿವೈಎಸ್ಪಿ ನಾಗರಾಜು ಪ್ರಕರಣವನ್ನು ಈಗಾಗಲೇ ಗಂಭೀರವಾಗಿ ಪರಿಗಣಿಸಿ ಅಗತ್ಯ ಅನುಮತಿಗಳೊಂದಿಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳನ್ನು ಮುಂದಿನ 2-3 ದಿನಗಳಲ್ಲಿ ಪತ್ತೆಹಚ್ಚುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನಾ ಮೆರವಣಿಗೆ: ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸುವ ಮುನ್ನ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಭವನದಿಂದ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಪ್ರಕರಣದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳ ವಿರುದ್ಧ ಧಿಕ್ಕಾರಗಳನ್ನು ಮೊಳಗಿಸಲಾಯಿತು.
ಪ್ರತಿಭಟನೆಯಲ್ಲಿ ಜಿ.ಪಂ ಸದಸ್ಯೆ ಶಿವಮ್ಮ ಕೃಷ್ಣ, ಮರಗದಮಣಿ, ತಾ.ಪಂ ಸದಸ್ಯ ರಾಜೇಂದ್ರ, ಅರುಣ್‍ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಮುಖಂಡರಾದ ಪಾಳ್ಯ ಕೃಷ್ಣ, ಅಜ್ಜೀಪುರ ನಾಗರಾಜು, ಗುಂಡಾಪುರ ಜಯರಾಜು, ಕೌದಳ್ಳಿ ಚಾಂದ್‍ಪಾಷ, ಲೊಕ್ಕನಹಳ್ಳಿ ರವಿ, ಪೆದ್ದನಪಾಳ್ಯ ಸಿದ್ಧರಾಜು, ಸತ್ತೇಗಾಲ ಶಿವಶಂಕರ್, ಸಿಂಗನಲ್ಲೂರು ದೇವರಾಜು, ಯುವ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.