Advertisement

ಡೈರಿ ಉತ್ಪನ್ನಗಳ ಜಿಎಸ್‌ಟಿ ಹೆಚ್ಚಳಕ್ಕೆ ಪ್ರತಿಭಟನೆ

05:37 PM Jul 22, 2022 | Team Udayavani |

ಶಹಾಬಾದ: ಲೇಬಲ್‌ ಹಾಕಿದ ಮೊಸರು, ಮಜ್ಜಿಗೆಗೆ ಜಿಎಸ್‌ಟಿ ವಿ ಧಿಸುವ ಹಾಗೂ ಡೈರಿ ಉತ್ಪನ್ನಗಳಿಗೆ ಜಿಎಸ್‌ಟಿ ಹೆಚ್ಚಿಸಿದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಬುಧವಾರ ಎಸ್‌ಯುಸಿಐ ಪಕ್ಷದ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಎಸ್‌ಯುಸಿಐ (ಸಿ) ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಗಣಪತರಾವ ಮಾನೆ ಮಾತನಾಡಿ, ಮೊದಲೇ ಲೇಬಲ್‌ ಹಚ್ಚಿದ ಮತ್ತು ಪ್ಯಾಕೇಟ್‌ ಮಾಡಿರುವ ಮೊಸರು, ಲಸ್ಸಿ, ಮಜ್ಜಿಗೆ ಮೇಲೆ ಶೇ.5 ಜಿಎಸ್‌ಟಿ ವಿಧಿ ಸಲು ಮತ್ತು ಡೈರಿ ಯಂತ್ರೋಪಕರಣ, ಹಾಲು ಕರೆಯುವ ಯಂತ್ರಗಳಿಗೆ ಶೇ.12ರಿಂದ ಶೇ.18ಕ್ಕೆ ಜಿಎಸ್‌ಟಿ ಏರಿಸಲು ಚಂಡೀಗಡದಲ್ಲಿ ನಡೆದ 47ನೇ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಎಸ್‌ಯುಸಿಐ ಉಗ್ರವಾಗಿ ಖಂಡಿಸುತ್ತದೆ. ಕೂಡಲೇ ಇದನ್ನು ವಾಪಸ್‌ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಎಸ್‌. ಇಬ್ರಾಹಿಂಪುರ ಮಾತನಾಡಿ, ಹೈನುಗಾರಿಕೆ ಮೇಲೆ ಲಕ್ಷಾಂತರ ಕುಟುಂಬಗಳು ಅವಲಂಬಿತವಾಗಿವೆ. ಇದರಲ್ಲಿ ಶೇ.71 ಮಹಿಳೆಯರು ಇದ್ದಾರೆ. ಅಲ್ಲದೇ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಹೈನುಗಾರಿಕೆಯೇ ಗ್ರಾಮೀಣ ಜನರ ಜೀವ ಉಳಿಸಿದೆ. ಇಂತಹದ್ದರಲ್ಲಿ ಜಿಎಸ್‌ಟಿ ಹೇರಿಕೆ ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಸದಸ್ಯರಾದ ರಾಘವೇಂದ್ರ ಎಂ.ಜಿ, ಜಗನ್ನಾಥ ಎಸ್‌.ಎಚ್‌. ಸಿದ್ಧು ಚೌಧರಿ, ಗುಂಡಮ್ಮ ಮಡಿವಾಳ, ರಾಜೇಂದ್ರ ಅತನೂರ, ಮಹಾದೇವಿ ಮಾನೆ, ಮಹಾದೇವಿ ಅತನೂರ, ಅಂಬಿಕಾ ಗುರುಜಾಲಕರ್‌, ರಮೇಶ ದೇವಕರ್‌. ಅಜಯ್‌ ಎ. ರಘು ಪವಾರ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next