ತೀರ್ಥಹಳ್ಳಿ : ಪಟ್ಟಣದಲ್ಲಿ ಅಕ್ರಮ ಮರಳುಗಾರಿಗೆ ಹೆಚ್ಚಾಗಿದೆ ಎಂದು ಆರೋಪಿಸಿ ಪಟ್ಟಣ ಪಂಚಾಯಿತಿ ಸದಸ್ಯ ಯತಿರಾಜ್ (ನವೀನ) ಎಂಬುವರು ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಟ್ಟಮಕ್ಕಿ ಹೊದಲ ರಸ್ತೆಯಲ್ಲಿ ಕಿತ್ತಿನ ಗದ್ದೆ ,ನಂದ್ರೋಳ್ಳಿ,ಶಿರುಪತಿ ಸಂಕದಹೊಳೆ ಮುಂತಾದ ಭಾಗಗಳಲ್ಲಿ ನಾಡ್ತಿ ಸೇತುವೆ ಮತ್ತು ಸಂಕದಹೊಳೆ ಸೇತುವೆ ಪಕ್ಕಾ ನಡೆಯುವ ಭಾರಿ ಪ್ರಮಾಣದ ಅಕ್ರಮ ಮರಳು ಮಾಫಿಯಾವನ್ನು ತಡೆಗಟ್ಟಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಈ ನಡೆಸಿದ್ದಾರೆ.
ಸೋಮವಾರ ತಹಶೀಲ್ದಾರ್ ಕಚೇರಿ ಎದುರು ಪಟ್ಟಣ ಪಂಚಾಯಿತಿ.ಸದಸ್ಯ ಯತಿರಾಜ್ ( ನವೀನ್) ಮತ್ತು ಅವರೊಂದಿಗೆ ಅನೇಕ ಯುವಕರು ಸೇರಿಕೊಂಡು ಪ್ರತಿಭಟನೆ ನಡೆಸಿದ್ದು. ಹಗಲು ಹೊತ್ತೇ ರಾಜಾರೋಷವಾಗಿ ನಾಡ್ತಿ ಹಳ್ಳ ಮತ್ತು ಕುಶಾವತಿ ನದಿದಡದಲ್ಲಿ ಸಂಗ್ರಹವಾಗಿರುವ ಮರಳನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಅಕ್ರಮವಾಗಿ ಮರಳನ್ನು ತೆಗೆದು ಶಿವಮೊಗ್ಗಕ್ಕೆ ಲಾರಿಗಳಲ್ಲಿ ತುಂಬಿ ರಾಜರೊಷವಾಗಿ ಕಳುಹಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇದರ ಸಂಪೂರ್ಣ ಮಾಹಿತಿಯೊಂದಿಗೆ ಮನವಿಯನ್ನು ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್ ಮತ್ತು ದಂಡಾಧಿಕಾರಿಗಳಾದ ಡಾಕ್ಟರ್ ಶ್ರೀಪಾದ ರವರಿಗೆ ನೀಡಲಾಗಿದೆ .ಇಂದಿನಿಂದ ತಕ್ಷಣ ಈ ಮರಳು
ಮಾಫಿಯಾವನ್ನು ನಿಲ್ಲಿಸದೇ ಇದ್ದರೆ ಮುಂದಿನ ಸೋಮವಾರ ಪುನಃ ತಾಲ್ಲೂಕು ಕಚೇರಿಯ ಎದುರು ಆವರಣದಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುವುದಾಗಿ ಪಟ್ಟಣ ಪಂಚಾಯಿತಿ ಸದಸ್ಯ ಯತಿರಾಜ್( ನವೀನ್) ಎಚ್ಚರಿಸಿದ್ದಾರೆ.
ಬಿಜೆಪಿ ಯುವ ಮುಖಂಡ ಹೋರಾಟಗಾರ ಆರಗ ಜ್ಞಾನೇಂದ್ರರ ಬಲಗೈ ಬಂಟ ಪಟ್ಟಣ ಪಂಚಾಯ್ತಿ ನೂತನ ಸದಸ್ಯ ಯತಿರಾಜ್ ರವರು ಆಡಳಿತ ಪಕ್ಷದವರಾಗಿ ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆಸತ್ಯಾಗ್ರಹ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಕುತೂಹಲ ಹುಟ್ಟಿಸಿದೆ