ಮಳವಳ್ಳಿ: ಆಹಾರ ಬಳಸುವ ಹಾಗೂ ಬೆಳೆಯುವ ಜನ ಮತ್ತು ವ್ಯಾಪಾರ ವರ್ಗಕ್ಕೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಜನಾಂದೋಲನಗಳ ಮಹಾಮೈತ್ರಿ ಕೂಟದ ಸಂಚಾಲಕ ಉಗ್ರ ನರಸಿಂಹೇಗೌಡ ಒತ್ತಾಯಿಸಿದರು.
ಮೂರು ಕೃಷಿ ವಿರೋಧಿ ಕಾಯ್ದೆ ಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆ ಯುವಂತೆ ಆಗ್ರಹಿಸಿ ಜನಾಂದೋಲನಗಳ ಮಹಾಮೈತ್ರಿ ಕೂಟ ಮಾ.1ರಿಂದ ಮಲೆ ಮಹದೇಶ್ವರ ಬೆಟ್ಟದಿಂದ ಬೆಂಗಳೂರಿ ನವರೆಗೆ ಆರಂಭಿಸಿರುವ ಜನಜಾಗೃತಿ ಜಾಥಾ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಜಾಗೃತಿ ಜಾಥಾ:ಕೇಂದ್ರ ಸರ್ಕಾರ ರೈತರ ಐತಿಹಾಸಿಕ, ಅಹಿಂಸಾತ್ಮಕ, ಪ್ರಜಾಸತ್ತಾತ್ಮಕ ಹೋರಾಟಕ್ಕೆ ಮಣಿ ದು 3 ರೈತ ವಿರೋಧಿ ಕಾಯ್ದೆ ವಾಪಸ್ ಪಡೆದಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಕಾಯ್ದೆ ಹಿಂಪಡೆದಿಲ್ಲ. ಹೀಗಾಗಿ ಜಾಥಾ ಹಮ್ಮಿಕೊಂಡು ಜನರನ್ನು ಸಂಘಟಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ ಮಾತನಾಡಿ, ಕರ್ನಾಟಕ ಭೂ ಸುಧಾರಣಾ ಕಾಯ್ದೆ-2020ಯು ಉಳುವವನೇ ಭೂ ಒಡೆಯ ಆಶಯಕ್ಕೆ ವಿರುದ್ಧವಾಗಿದೆ. ಅಂತೆಯೇ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ, ಕರ್ನಾಟಕ ಜಾನು ವಾರು ಹತ್ಯಾ(ನಿಷೇಧ ಮತ್ತು ಸಂರಕ್ಷಣೆ)ಕಾಯ್ದೆ ರೈತರಿಗೆ ಮಾರಕವಾಗಿದೆ ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ದೇವಿ ಹಾಗೂ ಮುಖಂಡೆ ಸೀಮಾ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಜಿ.ರಾಮಕೃಷ್ಣ, ರೈತ ಸಂಘದ ಕೆಂಪೂಗೌಡ, ಎನ್.ಎಲ್.ಭರತ್‌ರಾಜ್, ಟಿ.ಎಲ್. ಕೃಷ್ಣೇಗೌಡ, ಎನ್.ಶಿವಕುಮಾರ್, ಜಯರಾಜು, ಶಿವಲಿಂಗಯ್ಯ, ಶ್ರೀನಿವಾಸ್, ದೇವರಾಜು, ಗುರುಸ್ವಾಮಿ, ಸುಶೀಲಾ, ಸುನೀತಾ, ಚಿಕ್ಕಸ್ವಾಮಿ ಇದ್ದರು.