Advertisement
ಪಾಲಿಕೆ ವಿಪಕ್ಷ ನಾಯಕ ಎಚ್.ಸಿ.ಯೋಗೀಶ್ ಮತ್ತು ಸದಸ್ಯರಾದ ನಾಗರಾಜ್ ಕಂಕಾರಿ ಹಾಗೂ ಕೆ.ರಂಗನಾಥ್ ಪ್ರತಿಭಟನೆಗೆ ಸಾಥ್ ನೀಡಿದರು. ಪ್ರತಿ ಬಾರಿ ಮಳೆಗಾಲದಲ್ಲೂ ಇಮಾಂಬಡಾದಲ್ಲಿರುವ ಸುಮಾರು 27ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುತ್ತದೆ. ಪ್ರತಿ ಬಾರಿ ಪ್ರವಾಹ ಬಂದಾಗ ಇಲ್ಲಿನ ನಿವಾಸಿಗಳಿಗೆ ಸಂಕಷ್ಟಎದುರಾಗುತ್ತದೆ. ಹೀಗಾಗಿ ಮಹಾನಗರಪಾಲಿಕೆಇವರಿಗೆ ಬೇರೆ ಕಡೆ ಜಾಗ ನೀಡಿ ಮನೆಗಳನ್ನು ತೆರವುಗೊಳಿಸಲು ಮುಂದಾಗಿದೆ. ಆದರೆ ಬೇರೆಡೆ ನೀಡಲಾದ ಸ್ಥಳದಲ್ಲಿ ಯಾವುದೇ ಸೌಕರ್ಯವಿಲ್ಲ ಹೀಗಾಗಿ ಮನೆ ತೆರವುಗೊಳಿಸಬಾರದು ಎಂದು ನಿವಾಸಿಗಳು ಒತ್ತಾಯಿಸಿದರು.
Related Articles
Advertisement
ಇಮಾಂಬಡಾದ ನಿವಾಸಿಗಳ ಸ್ಥಳಾಂತರ ಅನಿವಾರ್ಯ. ಇಲ್ಲಿನ ನಿವಾಸಿಗಳಿಗೆ ಈಗಾಗಲೇ ಬೇರೆ ಕಡೆ ಜಾಗ ಗುರುತಿಸಲಾಗಿದೆ. ಅಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಆದರೂ ಇವರು ಹೋಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರತಿ ಬಾರಿ ಪ್ರವಾಹ ಉಂಟಾದಾಗಲೂ ಇಲ್ಲಿನ ನಿವಾಸಿಗಳು ಪರಿಹಾರ ಪಡೆಯುತ್ತಾರೆಯೇ ಹೊರತು ಹೊಸ ಜಾಗಕ್ಕೆ ಹೋಗಲು ಒಪ್ಪುವುದಿಲ್ಲ. ಹೀಗಾದರೆ ಸಮಸ್ಯೆ ಬಗೆಹರಿಯುವುದಾದರೂ ಹೇಗೆ? ಹಾಯ್‌ಹೊಳೆ ಜಾಗದಲ್ಲಿ ಎಲ್ಲರಿಗೂ ನಿವೇಶನ ನೀಡಲಾಗಿದೆ. ಮನೆ ಕಟ್ಟಿಕೊಳ್ಳಲೆಂದೇ ಪ್ರತಿಯೊಬ್ಬರಿಗೂ 1.25 ಲಕ್ಷ ಹಣ ಪಾವತಿಸಲಾಗಿದೆ. ಆದರೂ ಕೂಡ ನಿವಾಸಿಗಳು ಹೊಸ ಜಾಗಕ್ಕೆ ತೆರಳುತ್ತಿಲ್ಲ. ಈಗಾಗಲೇ ಅವರಿಗೆಮನೆ ಖಾಲಿ ಮಾಡುವಂತೆ ತಿಳಿಸಿ 1 ವರ್ಷದ ಕಾಲಾವಕಾಶ ನೀಡಲಾಗಿದೆ. ಇವರು ಅಲ್ಲಿಗೆ ತೆರಳಿದ ಕೂಡಲೇ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಸದ್ಯ ಅನಿವಾರ್ಯವಾಗಿ ಇಲ್ಲಿನ ಮನೆಗಳನ್ನು ತೆರವುಗೊಳಿಸಬೇಕಾಗಿದೆ. ಇಲ್ಲದಿದ್ದರೆ ಈ ಸಮಸ್ಯೆ ಜೀವಂತವಾಗಿ ಉಳಿಯುತ್ತದೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.