Advertisement

ದಲಿತರ ಕಡೆಗಣನೆ ಖಂಡಿಸಿ ಪ್ರತಿಭಟನೆ

01:13 PM Jun 25, 2022 | Team Udayavani |

ಬೀದರ: ದಲಿತರು, ಬಡವರು ಮತ್ತು ಮಹಿಳೆಯರ ಸಮಸ್ಯೆಗಳನ್ನು ರಾಜ್ಯ ಕಡೆಗಣಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ರಾಜ್ಯ ಸಮಿತಿ ಸದಸ್ಯ ರಮೇಶ ಡಾಕುಳಗಿ, ವಿಭಾಗೀಯ ಸಂ.ಸಂಚಾಲಕ ರಾಜಕುಮಾರ ಬನ್ನೇರ್‌ ನೇತೃತ್ವದಲ್ಲಿ ನಗರದ ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದರು. ಬಳಿಕ ಸಿಎಂಗೆ ಬರೆದ ಮನವಿ ಪತ್ರವನ್ನು ಡಿಸಿಗೆ ಸಲ್ಲಿಸಿದರು.

ರೋಹಿತ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡಿರುವ ಪಠ್ಯ ಪುಸ್ತಕವನ್ನು ರದ್ಧುಗೊಳಿಸಿ, ಹಿಂದಿನ ಪ್ರೊ| ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡಿರುವ ಪಠ್ಯ ಪುಸ್ತಕವನ್ನು ಶಾಲೆಗಳಿಗೆ ಒದಗಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಕಾಯ್ದಿರಿಸಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣದ ದುರುಪಯೋಗ ತಆಡೆಗಟ್ಟಬೇಕು. ಕಾಯ್ದೆಯಲ್ಲಿರುವ ದಲಿತ ವಿರೋಧಿ ಸೆಕ್ಷನ್‌ 7 (ಡಿ) ರದ್ದುಗೊಳಿಸಬೇಕು. ಪಿಟಿಸಿಎಲ್‌ ಕಾಯಿದೆ ತಿದ್ದುಪಡಿ ಆಗಬೇಕು. ಈಗಾಗಲೇ ನ್ಯಾಯಾಲಯಗಳಲ್ಲಿ ಪರಿಶಿಷ್ಟರ ವಿರುದ್ಧ ನೀಡಿರುವ ತೀರ್ಪುಗಳು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ರಕ್ಷಣಾತ್ಮಕ ಅಧಿಕಾರ ನೀಡಬೇಕು. ಬೇಡ ಜಂಗಮ ಹಾಗೂ ಇತರೆಯವರು ಪಡೆದಿರುವ ಸಾವಿರಾರು ಸುಳ್ಳು ಜಾತಿ ಪತ್ರಗಳನ್ನು ರದ್ದುಪಡಿಸಬೇಕು. ಪಡೆದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಎಸ್‌ಸಿ, ಎಸ್‌ಟಿ/ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳ ತಡೆ ಹಿಡಿದಿರುವ ವಿದ್ಯಾರ್ಥಿ ವೇತನವನ್ನು ಕೂಡಲೇ ಮಂಜೂರು ಆಗಬೇಕು ಹಾಗೂ ಹಾಸ್ಟೆಲ್‌ ಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ನ್ಯಾ| ನಾಗಮೋಹನದಾಸ ನೀಡಿರುವ ವರದಿಯಂತೆ ಎಸ್‌ಸಿ, ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳವಾಗಬೇಕು ಎಂದು ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ಸುಭಾಷ ಜ್ಯೋತಿ, ಝರೆಪ್ಪಾ ರಾಂಪೂರೆ, ಬುದ್ಧಪ್ರಕಾಶ ಹರ್ಗೆ, ಪ್ರಭು ಚಿತಕೋಟಾ, ಬಸವರಾಜ ಸಾಗರ, ಬಾಬು ಮಾಲೆ, ಮಾರುತಿ ಸಿಂಧೆ, ಸಂಜುಕುಮಾರ ಬ್ಯಾಗಿ, ಧನರಾಜ ಕಾಂಬಳೆ, ಬಾಬು ಮಾಲೆ, ಘಾಳೆಪ್ಪಾ ಮೈಲೂರೆ, ತುಕಾರಾಮ ಲಾಡಕರ್‌, ರಮೇಶ ಮಂದಕನಳ್ಳಿ, ಮಾಣಿಕ ಮಾಡಗೂಳ, ಮಾರುತಿ ಜಗದಾಳೆ, ಮಹಾದೇವ ಗಾಯಕವಾಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next