Advertisement

ಕಟ್ಟಪ್ಪ ವಿಷಾದ, ಏ.28ರಂದು ಬಂದ್ ಇಲ್ಲ; ಬಾಹುಬಲಿ 2 ರಿಲೀಸ್

12:06 PM Apr 22, 2017 | Team Udayavani |

ಬೆಂಗಳೂರು:ಕಾವೇರಿ ವಿಚಾರದ ಸಂಬಂಧವಾಗಿ ಸುಮಾರು 9 ವರ್ಷಗಳ ಹಿಂದೆ ಕನ್ನಡಿಗರ ವಿರುದ್ಧ ಕೀಳಾಗಿ ಮಾತನಾಡಿದ್ದ ಬಾಹುಬಲಿ 2 ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ವಿಷಾದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾಹುಬಲಿ 2 ಚಿತ್ರದ ವಿರುದ್ಧದ ಹೋರಾಟ ಕೈಬಿಡಲು ನಿರ್ಧರಿಸಿದ್ದು ಕರ್ನಾಟಕದಲ್ಲಿ ಬಾಹುಬಲಿ 2 ಚಿತ್ರಪ್ರದರ್ಶನಕ್ಕೆ ಯಾವುದೇ ಅಡ್ಡಿ ಮಾಡಲ್ಲ ಎಂದು ಕನ್ನಡಪರ ಸಂಘಟನೆಗಳು ಶನಿವಾರ ಘೋಷಿಸಿವೆ.

Advertisement

ಇಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ನಟ ಸತ್ಯರಾಜ್ ಕೇಳಿರುವ ವಿಷಾದ ಮನ್ನಿಸಿ ಬಾಹುಬಲಿ ಚಿತ್ರದ ವಿರುದ್ಧ ಹೋರಾಟ ಕೈಬಿಟ್ಟಿರುವುದಾಗಿ ತಿಳಿಸಿದರು. ಆದರೆ ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನ ತಡೆದರೆ ಜಾಗೃತೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಿಗದಿಯಂತೆ ಏಪ್ರಿಲ್ 28ರ ಕರ್ನಾಟಕ ಬಂದ್ ವಾಪಸ್ ಪಡೆಯಲಾಗಿದ್ದು, ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಬಿಡುಗಡೆಯಾಗಲಿದೆ.

ಮುಂದಿನ ದಿನಗಳಲ್ಲಿ ಸತ್ಯರಾಜ್ ಬಾಯಿ ಭದ್ರವಾಗಿರಲಿ ಎಂದು ಎಚ್ಚರಿಕೆ ಕೊಟ್ಟು ಕಟ್ಟಪ್ಪನನ್ನು ಬಿಡುಗಡೆ ಮಾಡಿದ್ದೇವೆ ಎಂದು ವಾಟಾಳ್ ಹೇಳಿದರು. ಸತ್ಯರಾಜ್ ಕ್ಷಮೆ ಕೇಳಬೇಕೆಂಬುದು ನಮ್ಮ ಆಗ್ರಹವಾಗಿತ್ತು, ಆದರೆ ಅವರು ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ್ದರಿಂದ, ಈ ಹೋರಾಟ ಮುಂದುವರಿಸದಿರಲು ನಿರ್ಧರಿಸಲಾಗಿದೆ ಎಂದು ವಾಟಾಳ್ ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನ ರದ್ದು ಮಾಡಿಲ್ಲ: ಸಾರಾ ಗೋವಿಂದು
ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನ ರದ್ದು ಮಾಡಲಾಗಿದೆ ಎಂಬ ವರದಿ ಬರೇ ಊಹಾಪೋಹ ಎಂದು ಫಿಲ್ಮ್ ಛೇಂಬರ್ ಅಧ್ಯಕ್ಷ ಸಾರಾ ಗೋವಿಂದು ತಿಳಿಸಿದ್ದು, ತಮಿಳುನಾಡಿನಲ್ಲಿ ಯಾವುದೇ ಕನ್ನಡ ಸಿನಿಮಾ ಪ್ರದರ್ಶನ ರದ್ದು ಮಾಡಿಲ್ಲ ಎಂದು ಸೌತ್ ಸಿನಿಮಾ ಛೇಂಬರ್ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿದ್ದ ಸಂದರ್ಭದಲ್ಲಿ ತಿಳಿಸಿರುವುದಾಗಿ ಹೇಳಿದರು.

Advertisement

ಪೋಸ್ಟರ್ ಹರಿದು ಕರವೇ ಪ್ರತಿಭಟನೆ:
ತಮಿಳುನಾಡಿನಲ್ಲಿ ಕನ್ನಡ ಚಿತ್ರಪ್ರದರ್ಶನ ರದ್ದುಗೊಳಿಸಿದ್ದಾರೆಂಬ ಹಿನ್ನೆಲೆಯಲ್ಲಿ ಪ್ರವೀಣ್ ಶೆಟ್ಟಿ ನೇತೃತ್ವದ ಕರವೇ ಬಣದ ಕಾರ್ಯಕರ್ತರು ಆರ್ ಟಿ ನಗರದ ಪುಷ್ಪಾಂಜಲಿ ಟಾಕೀಸ್ ನಲ್ಲಿ ತಮಿಳು ಚಿತ್ರದ ಪೋಸ್ಟರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next