Advertisement

ಆಂದೋಲಾ ಸ್ವಾಮೀಜಿ ವಿರುದ್ದ ಪ್ರತಿಭಟನೆ

03:29 PM May 10, 2022 | Team Udayavani |

ಆಳಂದ: ಕೋಮು ಸಾಮರಸ್ಯ ಕದಡುವ ರೀತಿಯಲ್ಲಿ ಪದೇ ಪದೇ ಹೇಳಿಕೆ ನೀಡಿ ಸಮಾಜದ ಅಶಾಂತಿಗೆ ಕಾರಣವಾಗುತ್ತಿರುವ ಜೇವರ್ಗಿ ತಾಲೂಕು ಆಂದೋಲಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯನ್ನು ಗಡಿಪಾರು ಮಾಡಬೇಕು ಎಂದು ದಲಿತ ಸೇನೆಯ ಇಂದಿಲ್ಲಿ ಒತ್ತಾಯಿಸಿದೆ.

Advertisement

ಪಟ್ಟಣದ ರಜ್ವೀರೋಡ ದಾರುಲಂ ಹತ್ತಿರ ಸೋಮವಾರ ಪ್ರತಿಭಟನೆ ಧರಣಿ ಸತ್ಯಾಗ್ರಹ ನಡೆಸಿದ ಸೇನೆಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ ನೇತೃತ್ವದಲ್ಲಿ ಕಾರ್ಯಕರ್ತರು ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಬೇಡಿಕೆಗೆ ಒತ್ತಾಯಿಸಿದರು.

ಸಾಮಾಜಿಕ ಸಾಮರಸ್ಯ, ಏಕತೆ, ಸಮಗೃತೆ ಸಹೋದರತ್ವ ಬಂಧುತ್ವ ಮತ್ತು ಸಮಾನತೆಗಾಗಿ, ಶೋಷಿತ ಸಮುದಾಯಗಳ ಮೇಲಿನ ಅನ್ಯಾಯ ಅತ್ಯಾಚಾರ ಸಾಮಾಜಿಕ ಬಹಿಷ್ಕಾರದಂತ ಅನಿಷ್ಟ ಪದ್ಧತಿಗಳ ವಿರುದ್ಧ ದಲಿತ ಸೇನೆ ದೇಶಾದ್ಯಂತ ಚಳವಳಿಯಲ್ಲಿ ತೊಡಗಿ ದಮನಿತರ ಧ್ವನಿ ಖ್ಯಾತಿಯೊಂದಿಗೆ ಹೋರಾಟ ಮಾಡುತ್ತಿದೆ. ಫುಲೆ, ಶಾಹುಮಹಾರಾಜ್‌, ಡಾ| ಅಂಬೇಡ್ಕರ್‌, ವಿಚಾರಧಾರೆಯಲ್ಲಿ ಚಳವಳಿ ರೂಪಿಸುತ್ತಿರುವ ಸೇನೆಯ ರಾಜ್ಯದಲ್ಲೂ ಸರ್ವ ಸಮುದಾಯಗಳ ದಮನಿತರ ಧ್ವನಿಯಾಗಿ ಸಾಮರಸ್ಯಕ್ಕಾಗಿ ಶ್ರಮಿಸುತ್ತಿದೆ. ಸಂವಿಧಾನದ ಆಶಯಕ್ಕೆ ಪೂರಕವಾಗಿ ಹೋರಾಡುತ್ತಿರುವ ಸೇನೆಯು ಸಂವಿಧಾನ ವಿರೋಧಿ ಗಳ ವಿರುದ್ಧ ಗಟ್ಟಿಧ್ವನಿಯಾಗಿ ಖಂಡಿಸುತ್ತಿದೆ ಎಂದರು.

ಜಿಲ್ಲೆಯಲ್ಲಿ ಸಾಮಾಜಿಕ ದ್ವೇಷದ ವಾತಾವರಣಕ್ಕೆ ಕಾರಣವಾಗುತ್ತಿರುವ ಜೇವರ್ಗಿ ಆಂದಲೂದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಎಂಬ ಹೆಸರಿನ ಕೋಮುದ್ವೇಷಿ ಹವ್ಯಾಸಿ ಅಪರಾ ಅನ್ಯ ಧರ್ಮದ ವಿರುದ್ಧ ವಿನಃ ಕಾರಣ ಕೋಮು ಜ್ವಾಲೆ ಹೇಳಿಕೆಗಳ ಮೂಲಕ ಅಂಶಾತಿಗೆ ಕಾರಣವಾಗುತ್ತಿದ್ದು, ಇವರ ವಿರುದ್ಧ ಮೂಲಾಜಿಲ್ಲದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಸಿದ್ಧಲಿಂಗ ಸ್ವಾಮೀಜಿ ಏ.8ರೊಳಗೆ ಎಲ್ಲ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸದಿದ್ದರೆ ಏ.9ರಂದು ಮಸೀದಿಗಳ ಮುಂದೆ ಹೆಚ್ಚಿನ ಧ್ವನಿವರ್ಧಕ ಹಚ್ಚಿ ಹನುಮಾನ ಚಾಲಿಸ ಪಠಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿರುವುದ ಸರಿಯಲ್ಲ ಎಂದು ಖಂಡಿಸಿದರು.

Advertisement

ಕೋಮುದ್ವೇಷ, ಮುಸ್ಲಿಂ ದ್ವೇಷಿ ಇವರ ವರ್ತನೆ ವಿರುದ್ಧ ದಲಿತ ಸೇನೆಯ ನೀಲಿ ಪಡೆಯು ಮಸೀದಿಗಳ ರಕ್ಷಣೆಗಾಗಿ ಹಾಗೂ ಆತಂಕಕ್ಕೆ ಒಳಗಗುತ್ತಿರುವ ಮುಸ್ಲಿಮರನ್ನು ಆತ್ಮವಿಶ್ವಾಸ ಗಟ್ಟಿಗೊಳಿಸಲು ದಲಿತ ಸೇನೆ ಬುದ್ಧವಾಗಿದೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಭೇಟಿ ನೀಡಿ ಮನವಿ ಸ್ವೀಕರಿಸಿದರು. ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ತಾಲೂಕು ಪ್ರಧಾನ ಮಹೇಶ ಕೋಚಿ, ಲಕ್ಷ್ಮಣ ನಿಂಬಾಳ, ಅಂಗವಿಕಲ ಒಕ್ಕೂಟದ ಅಧ್ಯಕ್ಷ ಶರಣು ಕವಲಗಾ, ಉಪಾಧ್ಯಕ್ಷ ದತ್ತಾ ಗಡಗಂಚಿ, ಶಿವಶರಣ ಬೀಳಗಿ, ಮಲ್ಲಿನಾಥ ಚಿಂಚೋಳಿ, ಹಣಮಂತ ಗಾಯಕವಾಡ, ಸಂಘರ್ಷನ ಮೇಲಿನಕೇರಿ, ಸಚಿನ್‌ ಅರುಣೋದಯ, ನಾಗಪ್ಪ ತಳಕೇರಿ, ಹಣಮಂತ ಗಿಡಣ್ಣ, ಸಂತೋಷ ಪಟದೆ, ಗೌತಮ್ಮ ದರ್ಗಾಶಿರೂರ, ಶಶಿಕಾಂತ ಕವಲಗಾ, ಅನಿಲ ದೇವಂತಗಿ, ಚನ್ನವೀರ ದರ್ಗಾಶಿರೂರ, ಲಕ್ಷ್ಮಣ ಬಸವಣ್ಣ ಸಂಗೋಳಗಿ ಮತ್ತಿತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next