Advertisement
ಕಾರ್ಯಕರ್ತರು ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ಕಾರದ ವೈಫಲ್ಯಗಳ ಕುರಿತು ಕೈಯಲ್ಲಿ ನಾಮಫಲಕ ಹಿಡಿದು ಜಿಂದಾಲ್ ಕಂಪನಿಗೆ ಭೂಮಿ ನೀಡುತ್ತಿರುವ ಸಮ್ಮಿಶ್ರ ಸರ್ಕಾರಕ್ಕೆ ಧಿಕ್ಕಾರ, ವಿಜಯನಗರ ಭೂಮಿ ನಮ್ಮ ಜನ್ಮಸಿದ್ಧ ಹಕ್ಕು, ಸಾರ್ವಜನಿಕರ ಸ್ವತ್ತನ್ನು ಮಾರುತ್ತಿರುವ ಕಮಿಷನ್ ಸರ್ಕಾರಕ್ಕೆ ಧಿಕ್ಕಾರ ಬರ ಪರಿಹಾರ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
Related Articles
Advertisement
ಕಳಪೆ ಕಾಮಗಾರಿ: ‘ಮುಖ್ಯಮಂತ್ರಿ ಜಿಂದಾಲ್ಗೆ 3,667 ಎಕರೆ ಕೊಡುವ ಮೂಲಕ ಸಮ್ಮಿಶ್ರ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಮಾಧ್ಯಮದವರಿಗೆ ನಾನು ಮಾಡುವ ಒಳ್ಳೆ ಕೆಲಸ ಕಾಣುತ್ತಿಲ್ಲ ಎನ್ನುತ್ತಾರೆ. ರೇವಣ್ಣ ಹಾಗೂ ಪರಮೇಶ್ವರ್ ನಡುವೆ ಜಟಾಪಟಿ ಆಗಿದೆ. ಲೋಕೊಪಯೋಗಿ ಇಲಾಖೆಯಿಂದ ಕಳಪೆ ಕೆಲಸ ನಡೆಯುತ್ತಿದೆ ಎಂದು ಜಿ ಪರಮೇಶ್ವರ್ ಅವರೇ ಬಹಿರಂಗವಾಗಿ ಹೇಳಿದ್ದಾರೆ. ರೇವಣ್ಣನಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಯಾವ ಇಲಾಖೆಯೂ ಬೇಡ, ರೈತರ ಕೆಲಸ ಬೇಡ. ಹಣ ಮಾಡುವ ಇಲಾಖೆಯೇ ಬೇಕು’ ಎಂದು ಹೇಳಿದರು. ‘ಗಣಿ ಲೂಟಿ ಆದಾಗ ಬಿಜೆಪಿ ಮೇಲೆ ಆರೋಪ ಮಾಡಿದ್ದರು. ಈಗ ಜಿಂದಾಲ್ಗೆ ಭೂಮಿ ಕೊಡುತ್ತಿದ್ದಾರೆ. ಜಿಂದಾಲ್ಗೆ 11 ಸಾವಿರ ಎಕರೆ ಭೂಮಿ ಕೊಟ್ಟಾಗಿದೆ. ಈಗ ಹೆಚ್ಚುವರಿಯಾಗಿ 3,667 ಎಕರೆ ಕೇಳುತ್ತಿದ್ದಾರೆ. ಭೋಗ್ಯಕ್ಕೆ ಭೂಮಿ ಕೊಟ್ಟರೆ ಸಮಸ್ಯೆ ಇಲ್ಲ. ಆದರೆ, ಭೋಗ್ಯಕ್ಕೆ ಭೂಮಿ ನೀಡಿದರೆ ಇವರಿಗೆ ಲಾಭ ಸಿಗುವುದಿಲ್ಲ. ಲೂಟಿ ಮಾಡಬೇಕು ಎಂಬ ದೃಷ್ಟಿಯಿಂದ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಜಿಂದಾಲ್ಗೆ ಭೂಮಿ ಮಾರಾಟ ಮಾಡುವ ನಿರ್ಧಾರ ಹಿಂದಕ್ಕೆ ಸರಿಯಬೇಕು. ಅಲ್ಲಿವರೆಗೆ ನಮ್ಮ ಹೋರಾಟ ನಿಲ್ಲಲ್ಲ’ ಎಂದು ಎಚ್ಚರಿಸಿದರು.
‘ಸಾಲಮನ್ನಾ ಆಗಿಲ್ಲ ಎಂದು ಜನ ಎಲ್ಲಿ ಕೇಳುತ್ತಾರೆ ಎನ್ನುವ ಆತಂಕದಿಂದ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಸಾಲಮನ್ನಾದ ಹಣ ಇಲ್ಲಿಯವರೆಗೆ ಬಿಡುಗಡೆ ಆಗಿರುವುದು ಕೇವಲ ಎಂಟುವರೆ ಸಾವಿರ ಕೋಟಿ ಮಾತ್ರ. ಇನ್ನೂ 36 ಸಾವಿರ ಕೋಟಿ ರೂ.ಹಣ ಬಿಡುಗಡೆಯಾಗ ಬೇಕಿದೆ’ ಎಂದು ಹೇಳಿದರು.
ಅಶ್ವಥ್ ನಾರಾಯಣ ಮಾತನಾಡಿ, ಮಹಾಘಟಬಂಧನ್ ರಚನೆಯಾದ ಒಂದು ವರ್ಷಕ್ಕೆ ಸರಿಯಾಗಿ ಘಟಬಂದನ್ ಭ್ರಷ್ಟಾಚಾರಿಗಳಿಗೆ ಜನ ಎಳ್ಳುನೀರು ಬಿಟ್ಟರು. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ಅಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು ಎಂಬಂತೆ ಹಂಚಿಕೊಂಡಿದ್ದಾರೆ. ಐಎಂಎ, ಆಂಬಿಡೆಂಟ್, ವಕ್ ಆಸ್ತಿ ಪ್ರಕರಣ, ಅಮಾನತ್ ಕೋ ಆಪರೇಟಿವ್ ಬ್ಯಾಂಕ್ ಎಲ್ಲ ಹಗರಣಗಳಲ್ಲೂ ಕಾಂಗ್ರೆಸ್‌ನ ನಾಯಕರು ಪಾಲುದಾರರಾಗಿದ್ದಾರೆ. ಐಎಂಎ ಸಂಸ್ಥೆಗೆ 14,000 ಚ.ಅಡಿ ನಿವೇಶನವನ್ನು 9 ಕೋಟಿಗೆ ಮಾರಾಟ ಮಾಡಿರುವುದಾಗಿ ಜಮೀರ್ ಅಹಮದ್ ಹೇಳಿಕೊಂಡಿದ್ದಾರೆ. ಈಗ ಅಲ್ಲಿ ಚದರ ಅಡಿಗೆ 25,000 ರೂ. ಇದೆ. ಉಳಿದ ಹಣ ಬ್ಲಾಕ್ ಮನಿ ಏನು ಮಾಡಿದಿರಿ ಎಂದು ಪ್ರಶ್ನಿಸಿದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಕ್ಕೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಕಡಿಮೆ ಬೆಲೆಗೆ ಜಿಂದಾಲ್ ಭೂಮಿ:ಮಾರುಕಟ್ಟೆ ದರಕ್ಕಿಂತ ನೂರು ಪಟ್ಟು ಕಡಿಮೆ ಬೆಲೆಗೆ ಜಿಂದಾಲ್ಗೆ ಭೂಮಿ ನೀಡಲು ಮುಂದಾಗಿದೆ. ಇದಕ್ಕಿಂತ ಭ್ರಷ್ಟಾಚಾರಬೇಕಾ. ಬಿಜೆಪಿ ಪ್ರತಿಭಟನೆಗೆ ಹೆದರಿ ಜಿಂದಾಲ್ಗೆ ನೀಡಿರುವ ಭೂಮಿ ಬಗ್ಗೆ ಪುನರ್ ಪರಿಶೀಲನೆ ನಡೆಡುವುದಾಗಿ ಹೇಳಿದ್ದಾರೆ. ಐಎಂಎ ಹಗರಣ ಕೂಡಾ ರಾಜ್ಯದ ದೊಡ್ಡ ಹಗರಣ. ಜನಕ್ಕೆ ಸ್ಪಂದಿಸುವ ಸರ್ಕಾರಗಳು ಬರುವವರೆಗೂ ನಮ್ಮ ಹೋರಾಟ ನಿಲ್ಲಲ್ಲ’ ಎಂದು ಸಂಸದ ತೇಜಸ್ವಿ ಸೂರ್ಯ ಎಚ್ಚರಿಸಿದರು.