ಶಿರಸಿ: ಜಿಲ್ಲಾ, ಶಿರಸಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ನಗರದ ಬಿಡಕಿಬೈಲಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
Advertisement
ಸೈನಿಕರನ್ನು ಅರೆಕಾಲಿಕ ಉದ್ಯೋಗಿಯಾಗಿಸುವ, ಬಿಜೆಪಿಯಿಂದ ದೇಶಪ್ರೇಮಕ್ಕೆ ಅವಮಾನ, ಅಗ್ನಿಪಥ್ ಯೋಜನೆ ಹಿಂಪಡೆಯಿರಿ ಎಂದು ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ರತ್ನಾಕರ ಕುರಗೋಡು, ಎಸ್.ಕೆ. ಭಾಗವತ, ಆರ್.ಎಂ.ಹೆಗಡೆ ಬಾಳೇಸರ, ವಕ್ತಾರ ದೀಪಕ ದೊಡ್ಡೂರು, ಜಗದೀಶ ಗೌಡ, ವಸಂತ ನಾಯ್ಕ, ಜ್ಯೋತಿ ಗೌಡ, ಶ್ರೀಪಾದ ಕಡವೆ, ಗಣೇಶ ದಾವಣಗೆರೆ, ಪ್ರಸನ್ನ ಶೆಟ್ಟಿ, ಪ್ರವೀಣ ಗೌಡ, ದೇವರಾಜ ನಾಯ್ಕ ಇತರರು ಇದ್ದರು.