Advertisement

ಬ್ಯಾಂಕ್‌ ದರೋಡೆಗೆ ಸಂಚು ಮಾಡಿದವನ ರಕ್ಷಣೆ!

07:56 PM Aug 13, 2022 | Team Udayavani |

ರೋಮ್‌: ಬ್ಯಾಂಕ್‌ ದರೋಡೆ ಮಾಡಬೇಕೆಂದು ಸಂಚು ಹಾಕಿಕೊಂಡು, ಸುರಂಗ ತೋಡುತ್ತಿದ್ದ ವ್ಯಕ್ತಿಯನ್ನೇ ರಕ್ಷಣಾ ಪಡೆ ಬಂದು ರಕ್ಷಿಸಿರುವ ವಿಚಿತ್ರ ಘಟನೆ ಇಟಲಿಯ ರೋಮ್‌ ನಗರದಲ್ಲಿ ನಡೆದಿದೆ.

Advertisement

ಐವರು ವ್ಯಕ್ತಿಗಳ ಗುಂಪೊಂದು ಬ್ಯಾಂಕ್‌ ದರೋಡೆ ಮಾಡುವುದಕ್ಕೆ ಸಂಚು ಹಾಕಿತ್ತು. ಅದರ ಹತ್ತಿರ ಮುಚ್ಚಿದ್ದ ಅಂಗಡಿಯೊಂದರಿಂದ ಸುರಂಗ ಕೊರೆದು ಬ್ಯಾಂಕ್‌ ದರೋಡೆ ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ಅದರಂತೆ 6 ಅಡಿ ಆಳದ ಸುರಂಗವನ್ನೂ ಕೊರೆದಿದ್ದಾರೆ. ಗುರುವಾರ ನಾಲ್ವರು ಸುರಂಗದಿಂದ ಹೊರಗಿದ್ದಾಗ ಸುರಂಗ ಏಕಾಏಕಿ ಕುಸಿದುಬಿದ್ದಿದೆ. ಅದರ ಮಧ್ಯದಲ್ಲಿ ಒಬ್ಬ ಮಾತ್ರ ಸಿಲುಕಿಕೊಂಡಿದ್ದಾನೆ. ತಕ್ಷಣ ಈ ವಿಚಾರವನ್ನು ರಕ್ಷಣಾ ಸಿಬ್ಬಂದಿಗೆ ತಿಳಿಸಲಾಗಿದೆ.

ರಕ್ಷಣಾ ಪಡೆಯ ಸಿಬ್ಬಂದಿ ಬರೋಬ್ಬರಿ 8 ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ, ಪಕ್ಕದಲ್ಲಿ ಮತ್ತೊಂದು ಸುರಂಗ ಮಾಡಿ, ದರೋಡೆಕೋರನನ್ನು ರಕ್ಷಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ನಾಲ್ವರನ್ನು ಬಂಧಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next