ಮಂಗಳೂರು: ಈ ರಾಜ್ಯದ ರಕ್ಷಣೆ ಯಡಿಯೂರಪ್ಪರಿಂದ ಸಾಧ್ಯ ಎಂದು ಜನ ಮನಗಂಡಿದ್ದಾರೆ. ವಿಪಕ್ಷಗಳ ಆರೋಪಗಳೆಲ್ಲಾ ಸುಳ್ಳು ಎನ್ನುವುದು ಸಾಬೀತಾಗಿದೆ. ಕಾಂಗ್ರೆಸ್ ನ ಕಪಟ ನಾಟಕ ಎನ್ನುವುದೂ ಜನರಿಗೆ ಗೊತ್ತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಉಪಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲೂ ಮೂರು ಸ್ಥಾನಗಳನ್ನು ಬಿಜೆಪಿ ಪಡೆದಿದೆ. ರಾಷ್ಟ್ರದಲ್ಲಿ ಬಿಜೆಪಿ ಪರವಾದ ಅಲೆಯಿದೆ. ನರೇಂದ್ರ ಮೋದಿ ಆಡಳಿತದ ಸಾಧನೆಗಳು ಜನರನ್ನು ತಲುಪಿದೆ. ಕೋವಿಡ್ ನಿರ್ವಹಣೆಯ ಸಫಲತೆ ಈ ಫಲಿತಾಂಶದಲ್ಲಿ ಕಂಡಿದೆ ಎಂದರು.
ಬಿ ಎಸ್. ಯಡಿಯೂರಪ್ಪವನರು ಮುಖ್ಯಮಂತ್ರಿಯಾದ ನಂತರ ಸವಾಲುಗಳು ಎದುರಾದವು. ಎಲ್ಲವನ್ನೂ ಯಶಸ್ವಿಯಾಗಿ ಯಡಿಯೂರಪ್ಪನವರು ನಿರ್ವಹಿಸಿದ್ದಾರೆ. ಕೋವಿಡ್-19 ನಿಯಂತ್ರಣದಲ್ಲೂ ಅವರು ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ರಾಜ್ಯದ ರಕ್ಷಣೆ ಯಡಿಯೂರಪ್ಪರಿಂದ ಸಾಧ್ಯ ಎಂದು ಜನ ಮನಗಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ವಿರೋಧಿಗಳ ವಿರುದ್ಧ ಬಿಜೆಪಿಯಿಂದ ಸೇಡಿನ ರಾಜಕಾರಣ,ವಿನಯ್ ಬಂಧನ ರಾಜಕೀಯ ಪ್ರೇರಿತ: ಹರಿಪ್ರಸಾದ್
ಶಿರಾ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ, ಕಾಂಗ್ರೆಸ್ ಭಧ್ರಕೋಟೆಯನ್ನು ಯಡಿಯೂರಪ್ಪ ಒಡೆದಿದ್ದಾರೆ. ವಿಪಕ್ಷಗಳ ಆರೋಪಗಳೆಲ್ಲಾ ಸುಳ್ಳು ಎಂಬುದು ಸಾಬೀತಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.