Advertisement

ಅಸಹಾಯಕ ವೃದ್ಧೆಯ ರಕ್ಷಣೆ

07:45 AM Apr 14, 2018 | Team Udayavani |

ಉಡುಪಿ: ಅಜ್ಜರಕಾಡು ಭುಜಂಗ ಪಾರ್ಕ್‌ ಪಕ್ಕದ ರಸ್ತೆಯಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ಪತ್ತೆಯಾಗಿರುವ ಸುಮಾರು 65 ವರ್ಷದ ವೃದ್ಧೆಯನ್ನು ಸಮಾಜಸೇವಕ ವಿಶು ಶೆಟ್ಟಿ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬಂದಿ ಗಣೇಶ್‌ ಅವರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.

Advertisement

ವೃದ್ಧೆಯು ತನ್ನ ಹೆಸರು ಸೋಮಿ, ಊರು ಮಕ್ಕಿ, ತನಗೆ ದೀಪು ಹಾಗೂ ಚಿಕ್ಕು ಎನ್ನುವ ಇಬ್ಬರು ಗಂಡು ಮಕ್ಕಳಿದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ. ವಾರಸುದಾರರು ಅಥವಾ ಸಂಬಂಧಿಕರು ಇದ್ದರೆ ಉಡುಪಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು (0820 2526394) ಸಂಪರ್ಕಿಸುವಂತೆ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next