Advertisement

ಅರಣ್ಯ ಸಂಪತ್ತು ರಕ್ಷಣೆಗೆ ಬೆಂಕಿ ರೇಖೆ ಎಳೆದ ಇಲಾಖೆ

09:32 PM Feb 26, 2021 | Team Udayavani |

ಬೆಳ್ತಂಗಡಿ: ಬೇಸಗೆ ಸಮೀಪಿ ಸುತ್ತಲೆ ಅರಣ್ಯದಲ್ಲಿ ಉಂಟಾಗುವ ಕಾಳ್ಗಿಚ್ಚಿನಿಂದ ವರ್ಷಂಪ್ರತಿ ಅರಣ್ಯ ಸಂಪತ್ತು ಸಹಿತ ಪ್ರಾಣಿ ಸಂಕುಲಗಳ ನಶಿಸುವ ದುರ್ಘ‌ಟನೆ ಸಂಭವಿಸುತ್ತಿರುತ್ತದೆ. ಹೀಗಾಗಿ ಪ್ರಸಕ್ತ ವರ್ಷ ಅರಣ್ಯ ಇಲಾಖೆಯು ಬೆಳ್ತಂಗಡಿ ಸೇರಿದಂತೆ ಸುಬ್ರಹ್ಮಣ್ಯ ಸಹಿತ ಜಿಲ್ಲೆಯ ಸೂಕ್ಷ್ಮ ಮೀಸಲು ಅರಣ್ಯ ಪ್ರದೇಶಗಳಲ್ಲಿ ಬೆಂಕಿ ರೇಖೆ ನಿರ್ಮಿಸಿದೆ.

Advertisement

ಬೆಳ್ತಂಗಡಿ ತಾಲೂಕಿನಲ್ಲಿ ಪ್ರತೀ ವರ್ಷ ಅತೀ ಹೆಚ್ಚು ಕಾಳ್ಗಿಚ್ಚು ಸಂಭವಿಸುವ ಚಾರ್ಮಾಡಿ ಪ್ರದೇಶದಲ್ಲಿ ಈ ಬಾರಿ ಎರಡು ಕಡೆಗಳಲ್ಲಿ ಪ್ರತ್ಯೇಕ ಶಿಬಿರ ನಿಯೋಜಿಸಲಾಗಿದೆ. ಪ್ರತೀ ವರ್ಷ ಡಿಸೆಂಬರ್‌ನಲ್ಲಿ ಬೆಂಕಿ ರೇಖೆ ಅಳವ ಡಿಸುವ ಕಾರ್ಯ ನಡೆಯುತ್ತಿತ್ತು. ಈ ಬಾರಿ ಮಳೆ ಆಗಾಗ ಸುರಿಯುತ್ತಿರುವುದರಿಂದ ಜನವರಿಯಿಂದ ಆರಂಭಿಸಲಾಗಿದೆ.

18 ಕಿ.ಮೀ. ಬೆಂಕಿ ರೇಖೆ :

ರಸ್ತೆ ಬದಿಗಳಲ್ಲಿ ಬೀಡಿ, ಸಿಗರೇಟು ಸೇದಿ ಎಸೆಯುವುದು ಸೇರಿದಂತೆ ಆನೆ ಮುಂತಾದ ಕಾಡು ಪ್ರಾಣಿಗಳ ಉಪಟಳಕ್ಕೆ ಬೇಸತ್ತು ಬೆಂಕಿ ಉರಿಸುವ ಸಂದರ್ಭ, ಪ್ರಾಣಿಗಳ ಓಡಾಟದಿಂದ ಕಲ್ಲುಗಳ ಸ್ಪರ್ಶ ದಿಂದ ಬೆಂಕಿ ಉಂಟಾಗುವುದರಿಂದ ಬೆಂಕಿ ಹತ್ತಿಕೊಳ್ಳುತ್ತದೆ. ಹೀಗಾಗಿ ಬೆಂಕಿ ಒಂದು ಪಾರ್ಶ್ವದಿಂದ ಮತ್ತೂಂದು ಪಾರ್ಶ್ವಕ್ಕೆ ಹಬ್ಬದಂತೆ ಮಧ್ಯ ಹುಲ್ಲುಗಳನ್ನು ತೆರವು ಗೊಳಿಸಿ ಕಾಲು ದಾರಿ ಯಂತೆ ನಿರ್ಮಿಸ ಲಾಗುತ್ತದೆ. ಈಗಾಗಲೆ ಬೆಳ್ತಂಗಡಿ ತಾಲೂ ಕಿನಲ್ಲಿ 3 ಮೀಟರ್‌ ಅಗಲದಲ್ಲಿ 18 ಕಿ.ಮೀ. ನಷ್ಟು ಬೆಂಕಿ ರೇಖೆ ನಿರ್ಮಿಸಲಾಗಿದೆ.

ಚಾರ್ಮಾಡಿಯ್ಲಲಿ ವಾಚ್‌ ಟವ್‌ರ್‌  :

Advertisement

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಕಡೆಗಳಲ್ಲಿ ಪ್ರತೀ ವರ್ಷ ಅತೀ ಹೆಚ್ಚು ಕಾಳ್ಗಿಚ್ಚು ಸಂಭವಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ಈಗಾಗಲೇ ಚಾರ್ಮಾಡಿಯಲ್ಲಿ ವಾಚ್‌ ಟವ್‌ರ್‌ ನಿರ್ಮಿಸಲಾಗಿದೆ. ಉಳಿದಂತೆ ಚಿಬಿದ್ರೆ ಸಮೀಪದ ಕತ್ತರಿಗುಡ್ಡೆ ಹಾಗೂ ಪೆರಿಂಗಿಲ ಬೆಟ್ಟ ಎಂಬಲ್ಲಿ ತಲಾ ನಾಲ್ಕು ಮಂದಿ ಅರಣ್ಯ ವೀಕ್ಷಕರನ್ನು ನಿಯೋಜಿಸಲಾಗಿದೆ. ಇಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಇವರಿಗೆ ಅಗತ್ಯಬಿದ್ದಲ್ಲಿ ಅಗ್ನಿಶಾಮಕದಳವು ಸಹಕರಿಸಲಿದೆ. ಅಭಯಾರಣ್ಯಗಳಲ್ಲಿ ಬೆಂಕಿ ಕಾಣಿಸಿ ಕೊಂಡಲ್ಲಿ ಎಚ್ಚರಿಕೆ ನೀಡುವ ಸಲುವಾಗಿ ಅರಣ್ಯ ಇಲಾಖೆಯು ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರದಲ್ಲಿ ಅರಣ್ಯ ಬೆಂಕಿ ಉಸ್ತುವಾರಿ ಮತ್ತು ವಿಶ್ಲೇಷಣಾ ಕೋಶ’ (ಕೆಎಸ್‌ಆರ್‌ಎಸ್‌ಎಸಿ) ಪ್ರತ್ಯೇಕ ಘಟಕ ಪ್ರಾರಂಭಿಸಿದೆ. ಸ್ಯಾಟ್‌ ಲೈಟ್‌ ವ್ಯವಸ್ಥೆಯಿಂದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ತತ್‌ಕ್ಷಣ ಆ ಸ್ಥಳದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನಿಸಿ ಎಚ್ಚರಿಸುತ್ತದೆ.

ಫಾರೆಸ್ಟ್‌ ಸರ್ವೇ ಆಫ್‌ ಇಂಡಿಯಾ (ಎಫ್‌ಎಸ್‌ಐ) ಮೂಲಕ ರಾಜ್ಯದ ಎಲ್ಲ ಭಾಗಗಳ ಅರಣ್ಯ ಪ್ರದೇಶದ ವ್ಯಾಪ್ತಿ, ಸರ್ವೇ ನಂಬರ್‌ಗಳ  ವಿವರ, ಅರಣ್ಯ ದಂಚಿನಲ್ಲಿರುವ ಗ್ರಾಮಗಳ ನಕ್ಷೆಗಳ ಮಾಹಿತಿ ಕೆಎಸ್‌ಆರ್‌ಎಸ್‌ಎಸಿಯಲ್ಲಿದೆ. ಜತೆಗೆ, ಈ ಘಟಕದಲ್ಲಿ ಅರಣ್ಯದಲ್ಲಿನ ಉಷ್ಣಾಂಶ ಹೆಚ್ಚಾಗಿರುವ ಭಾಗಗಳನ್ನೂ ಪತ್ತೆ ಹಚ್ಚಬಹುದಾಗಿದೆ. ಬೆಂಕಿ ಕಾಣಿಸಿಕೊಳ್ಳುವ ಪ್ರದೇಶಗಳನ್ನು ಸುಲಭವಾಗಿ ಗುರುತಿ ಸಬಹುದು ಎಂದು ವಲಯ ಅರಣ್ಯಧಿಕಾರಿ ತ್ಯಾಗರಾಜ್‌ ತಿಳಿಸಿದ್ದಾರೆ.

ಅರಣ್ಯ ಅಧಿಕಾರಿಗಳಿಗೆ ತರಬೇತಿ :

ಕಾಳ್ಗಿಚ್ಚು ಉಸ್ತುವಾರಿ ಮತ್ತು ವಿಶ್ಲೇ ಷಣಾ ಕೋಶದ ಮಾಹಿತಿ ಆಧರಿಸಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಮಾ. 1ರಂದು ಚಾರ್ಮಾಡಿ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಜಾಗೃತಿಯನ್ನು ಆಯೋಜಿಸಲಿದೆ. ಇಲಾಖೆ ಮಾತ್ರವಲ್ಲದೆ ಬೆಂಕಿ ಕಂಡಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು, ಕಾಡಿಗೆ ಬೆಂಕಿ ಬೀಳುವುದರಿಂದ ಉಂಟಾಗುವ ಪರಿಸರ ಹಾನಿಯ ವಿವರ ನೀಡಲಿದೆ.

ಇಲಾಖೆಯಲ್ಲಿ ಸಿಬಂದಿ ಕೊರತೆ :

ಬೆಳ್ತಂಗಡಿ ವಲಯ ಅರಣ್ಯ ವಿಭಾಗದಲ್ಲಿ ಬಹುತೇಕ ಹುದ್ದೆಗಳು ಖಾಲಿ ಬಿದ್ದಿವೆ. ಪ್ರಮುಖವಾಗಿ ಪೂಂಜಾಲಕಟ್ಟೆ, ಕಳಿಯ, ಗುರುವಾಯನಕೆರೆ, ನಡ, ಕಡಿರುದ್ಯಾವರ, ಚಾರ್ಮಾಡಿ, ಚಿಬಿದ್ರೆ, ಪುದುವೆಟ್ಟು 8 ಕಡೆಗಳಲ್ಲಿ ಅರಣ್ಯ ರಕ್ಷರ‌ ಹುದ್ದೆ ಖಾಲಿ ಬಿದ್ದಿದೆ. ಬೆಳ್ತಂಗಡಿಯಿಂದ ಈಗಾಗಲೆ 5 ಮಂದಿ ಅರಣ್ಯ ರಕ್ಷಕರು ಉಪವಲಯ ಅರಣ್ಯಧಿಕಾರಿಗಳಾಗಿ ಭಡ್ತಿಹೊಂದಿ ವರ್ಗಾವಣೆಯಾಗಿದ್ದಾರೆ. ಅರಣ್ಯ ವೀಕ್ಷರ 4 ಹುದ್ದೆ ಪೈಕಿ 3 ಹುದ್ದೆ, ತನಿಖಾ ಠಾಣೆಯಲ್ಲಿ 2 ಹುದ್ದೆ, ಉಪವಲಯ ಅರಣ್ಯ ಅಧಿಕಾರಿ 1 ಹುದ್ದೆ ಖಾಲಿ ಇದೆ. ಹೀಗಾಗಿ ತುರ್ತು ಸೇವೆಗಳಿಗೆ ಸಿಬಂದಿ ಕೊರತೆ ಇಲಾಖೆಯಲ್ಲಿ ಕಾಡುತ್ತಿದೆ.

ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ಸಂಭವಿಸುವ ಕುರಿತು ಮುನ್ನೆಚ್ಚರಿಕೆಯಾಗಿ 18 ಕಿ.ಮೀ. ಚಾರ್ಮಾಡಿ ಸುತ್ತಮುತ್ತ ಬೆಂಕಿ ರೇಖೆ ಎಳೆಯಲಾಗಿದೆ. ಮಾ.1ರಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. -ತ್ಯಾಗರಾಜ್‌, ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ

 

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next