Advertisement

ನದಿಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

04:52 PM Nov 17, 2021 | Team Udayavani |

ಮದ್ದೂರು: ಶಿಂಷಾ ನದಿ ಪಾತ್ರದ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿರಂ ತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ ನೀರಿನ ಹರಿವು ಹೆಚ್ಚಾಗಿದ್ದು, ಮಂಗಳ ವಾರ ಮಧ್ಯಾಹ್ನ ಬಟ್ಟೆ ತೊಳೆಯಲೆಂದು ತೆರಳಿದ್ದ ವ್ಯಕ್ತಿಯೋರ್ವ ನದಿ ಮಧ್ಯೆ ಸಿಲುಕಿ ಹೊರಬರಲಾರದ ಸ್ಥಿತಿ ನಿರ್ಮಾಣಗೊಂಡಿತ್ತು.

Advertisement

ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯನ್ನು ಗಮನಿಸಿದ ಸ್ಥಳೀಯರು ಮತ್ತು ಹೆದ್ದಾರಿ ಪ್ರಯಾಣಿಕರು ಸೇತುವೆ ಮೇಲೆ ಜಮಾಯಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಮೈಸೂರು ಮಾರ್ಗದ ರಸ್ತೆ ಸಂಚಾರ ವ್ಯತ್ಯಯಗೊಂಡು ಎರಡು ಕಿ.ಮೀ. ಉದ್ದದ ವಾಹನಗಳ ಸಾಲು ಕಂಡುಬಂದಿತು.

ಇದನ್ನೂ ಓದಿ:- ದುರ್ಬಲ ವರ್ಗದ ಮಹಿಳೆಯರ ಉದ್ಯಮಕ್ಕೆ ಅಗತ್ಯ ಸೌಲಭ್ಯದ  ನೆರವು: ನಿರಾಣಿ

ಸಾರ್ವಜನಿಕರ ದೂರವಾಣಿ ಕರೆ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಠಾಣೆ ಮದ್ದೂರು ವಿಭಾಗದ ಸಿಬ್ಬಂದಿ ಏಣಿ ಮೂಲಕ ನದಿಗಿಳಿದು ನೀರಿನ ಮಧ್ಯೆ ಸಿಲುಕಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ತಮಿಳುನಾಡು ಮೂಲದ ವ್ಯಕ್ತಿ: ಸಂಕಷ್ಟಕ್ಕೊಳಗಾಗಿದ್ದ ವ್ಯಕ್ತಿ ಏಳುಮಲೈ (65) ಮೂಲತಃ ತಮಿಳುನಾಡಿನವರಾಗಿದ್ದು, ಲಾಕ್‌ ಡೌನ್‌ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದು ಬಳಿಕ ಇಲ್ಲೇ ನೆಲೆಸಿದ್ದ ಎನ್ನಲಾಗಿದೆ.

Advertisement

ಮಾನವೀಯತೆ ಮೆರೆದ ಪೊಲೀಸರು: ಅಗ್ನಿಶಾಮಕ ಸಿಬ್ಬಂದಿ ಏಳುಮಲೈ ಅವರನ್ನು ನದಿಯಿಂದ ಹೊರ ಕರೆತಂದರಲ್ಲದೇ ಸಿಪಿಐ ಹರೀಶ್‌ ಮತ್ತು ಪೊಲೀಸರ ತಂಡ ಏಳುಮಲೈಗೆ ಹೊಸ ಬಟ್ಟೆಗಳನ್ನು ಕೊಡಿಸುವ ಮೂಲಕ ಮಾನವೀಯತೆ ಮೆರೆದರು.

ಕಾರ್ಯಾಚರಣೆ ವೇಳೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್‌, ಮದ್ದೂರು ಠಾಣಾಧಿಕಾರಿ ಎಸ್‌.ವಿ.ಶಿವಕುಮಾರ್‌, ಸಿಬ್ಬಂದಿಗಳಾದ ಬಾಬು, ಪ್ರೀತಮ್‌ಕುಮಾರ್‌, ಲಕ್ಷ್ಮೀಪತಿ, ಶ್ರೀನಿವಾಸ, ದೊಡ್ಡಯ್ಯ, ಬಸವರಾಜು, ಮಂಜುನಾಥ್‌ ಮಡಿವಾಳ, ಮುಬಾರಕ ಹಂಚಿನ ಮನೆ, ಮಂಜು ನಾಥ್‌, ಹೇಮಂತ್‌ಕುಮಾರ್‌, ರಾಜೇಂದ್ರ ರಾಥೋಡ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next