Advertisement

Kushtagi: ಮದ್ಯರಾತ್ರಿ  ಬಿಟ್ಟುಹೋದ ಅನ್ಯರಾಜ್ಯದ ಒಬ್ಬಂಟಿ ಮಹಿಳೆಗೆ ರಕ್ಷಣೆ

08:55 AM Nov 09, 2023 | Team Udayavani |

ಕುಷ್ಟಗಿ: ಟ್ರಕ್ ಚಾಲಕನೋರ್ವ ಮದ್ಯವಯಸ್ಕ ಓಡಿಸ್ಸಾ ಮೂಲದ ಮಹಿಳೆಯನ್ನು‌ ತಡರಾತ್ರಿ ಇಳಿಸಿ ಹೋದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಕುಷ್ಟಗಿ ಮಾರುತಿ ವೃತ್ತದಲ್ಲಿ ನ.8ರ ಬುಧವಾರ ತಡರಾತ್ರಿ ಟ್ರಕ್ ನಿಂದ ಮಹಿಳೆಗೆ ಶೌಚಕ್ಕೆ ಇಳಿಸಿ, ಪುನಃ ಹತ್ತಿಸಿಕೊಳ್ಳದೇ ಆಕೆಯನ್ನು ಬಿಟ್ಟು ಹೋಗಿದ್ದಾನೆ. ಕೆಲ ಹೊತ್ತಿನಲ್ಲಿ ಒಬ್ಬಂಟಿ ಮಹಿಳೆ ಚಡಪಡಿಸುತ್ತಾ ನಿಂತಿರುವುದನ್ನು ಗಮನಿಸಿದ ಸ್ಥಳೀಯರಾದ ಮರಸಣ್ಣ ತಾಳದ್, ಮಲ್ಲು‌ ದೇಸಾಯಿ ಅವರು ಮಹಿಳೆಯನ್ನು ವಿಚಾರಿಸಿದಾಗ ಓಡಿಸ್ಸಾ ಮೂಲದ ಮಹಿಳೆ ಸಂಗೀತಾ ಎಂಬುವುದನ್ನು ಹೇಳಿಕೊಂಡಿದ್ದು, ಆಕೆ, ಪತಿಯೊಂದಿಗೆ ಟ್ರಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಶೌಚಕ್ಕೆ ಇಳಿಸಿ, ಚಾಲಕ ಹಾಗೂ ಪತಿ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾರೆ.

ಮದ್ಯರಾತ್ರಿ ಒಬ್ಬಂಟಿ ಸಂಗೀತಾಳ ರಕ್ಷಣೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಈ ಮಹಿಳೆಯನ್ನು ಮದ್ಯರಾತ್ರಿ ಆಕೆಯ ಪತಿ ಯಾಕೆ ಬಿಟ್ಟು ಹೋದ? ಎಂಬುದು ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next