Advertisement

ಗುಂಡಿಗೆ ಬಿದ್ದಿದ್ದಹೋರಿ ರಕ್ಷಣೆ

01:48 PM Jun 11, 2018 | Team Udayavani |

ಬಳ್ಳಾರಿ: ನಗರದ ಕುರುಬರ ವಸತಿ ನಿಲಯದ ಬಳಿ ಕಟ್ಟಡ ನಿರ್ಮಾಣಕ್ಕೆಂದು ತೆಗೆಯಲಾಗಿದ್ದ ಬುನಾದಿಯ ಗುಂಡಿಯಲ್ಲಿ ಹೋರಿಯೊಂದು ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಹೊರ ತೆಗೆದ ಘಟನೆ ಭಾನುವಾರ ನಡೆಯಿತು. ಇಲ್ಲಿನ ದೇವಿನಗರದ ಕುರುಬರ ವಸತಿ ನಿಲಯದ ಬಳಿಯ ಮುಖ್ಯರಸ್ತೆಯಲ್ಲಿ ವಾಣಿಜ್ಯ ಕಟ್ಟಡವೊಂದರ ನಿರ್ಮಾಣಕ್ಕಾಗಿ ಬುನಾದಿಗಳನ್ನು ತೆಗೆಯಲಾಯಿತ್ತು. ಸೊಪ್ಪು ತಿನ್ನುತ್ತ ಬಂದ ಹೋರಿ ಬುನಾದಿಗಾಗಿ ಸುಮಾರು 10 ಅಡಿ ಆಳದಲ್ಲಿ ಅಗೆದಿದ್ದ ಗುಂಡಿಯಲ್ಲಿ ಕಾಲು ಜಾರಿ ಬಿದ್ದಿದೆ.

Advertisement

ಮೇಲಕ್ಕೆ ಏರಿ ಹೊರಬರಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಹೋರಿಯ ಮೂಕವೇದನೆಯನ್ನು ಕಂಡ ಸ್ಥಳೀಯರು ತಕ್ಷಣ ಸಮೀಪದಲ್ಲಿರುವ ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಜಂಟಿ ಕಾರ್ಯಾಚರಣೆ ನಡೆಸಿ ಗುಂಡಿಯಲ್ಲಿ ಬಿದ್ದ ಹೋರಿಯನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next