Advertisement

ಆಲೂರು: ಪೊಲೀಸರ ದಾಳಿ: ಶೆಡ್‌ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 25 ಜಾನುವಾರುಗಳ ರಕ್ಷಣೆ

05:51 PM Jun 29, 2022 | Team Udayavani |

ಆಲೂರು: ಕಸಾಯಿಖಾನೆಗಳಲ್ಲಿ ಗೋವುಗಳನ್ನು ಕತ್ತರಿಸಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 25 ಜಾನುವಾರುಗಳನ್ನು ಸಕಲೇಶಪುರ ತಾಲ್ಲೂಕಿನ ಬಜರಂಗದಳದ ಕಾರ್ಯಕರ್ತರು ರಕ್ಷಿಸಿರುವ ಘಟನೆ ಆಲೂರು ಪಟ್ಟಣದಲ್ಲಿ ನಡೆದಿದೆ.

Advertisement

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರಕೃತಿ ನಗರದಲ್ಲಿನ ಶೌಕತ್ ರವರ ಜಮೀನಿನಲ್ಲಿರುವ ಶೆಡ್ ನಲ್ಲಿ 18 ಹಸುಗಳು, 5 ಹೋರಿಗಳು, 1 ಎಮ್ಮೆ ಮತ್ತು 1 ಕೋಣ ಸೇರಿ ಒಟ್ಟು 25 ಜಾನುವಾರುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸಕಲೇಶಪುರ ತಾಲ್ಲೂಕು ಬಜರಂಗಧಳದ ಕಾರ್ಯಕರ್ತರು ಸಕಲೇಶಪುರ ಪೋಲಿಸ್ ಹಾಗೂ ಆಲೂರು ಪೋಲಿಸ್ ಅಧಿಕಾರಿಗಳ ಸಹಾಯದಿಂದ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ; ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ

ಆಲೂರು ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಹೇಮಂತ್ ಕುಮಾರ್,ಸಬ್ ಇನ್ಸ್ಪೆಕ್ಟರ್ ಗಣೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ಜಮೀನು ಮಾಲೀಕ ಶೌಕತ್ ವಿರುದ್ಧ ಪ್ರಕರಣ ದಾಖಲಿಸಿ ಆತನ ಪತ್ತೆಗೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿದ್ದ ಈ 25 ಜಾನುವಾರಗಳನ್ನು ಪೊಲೀಸರು ಲಾರಿಯಲ್ಲಿ ತುಂಬಿ ಅರಸೀಕೆರೆ ತಾಲೂಕಿನ ಗೋಶಾಲೆಗೆ ಕಳುಹಿಸಿ ಕೊಟ್ಟಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರು ಆಲೂರು ಪಟ್ಟಣದಲ್ಲಿ ಗೋವುಗಳ ಹತ್ಯೆ ಮಾಡಿ ಮಾಂಸ ಮಾರಾಟ  ಮಾತ್ರ ನಿಂತಿಲ್ಲ ಗೋವುಗಳನ್ನು ಸಂಗ್ರಹಿಸಿಟ್ಟಿದ್ದ ಮಾಲೀಕ ಯಾರೇ ಎಷ್ಟೇ ಪ್ರಭಾವಿಯಾಗಿರಲಿ ಆತನನ್ನು ಬಂಧಿಸಬೇಕು ಎಂದು  ಬಜರಂಗದಳದ ರಾಜ್ಯ ಸಂಚಾಲಕ ರಘು ಒತ್ತಾಯಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next