Advertisement
ಧ್ವನಿ ಸಮಸ್ಯೆ ಎಂದರೇನು? ಯಾವಾಗ ವೈದ್ಯರನ್ನು ಭೇಟಿಯಾಗಬೇಕು? ಧ್ವನಿಯಲ್ಲಿ ಯಾವುದೇ ಹಠಾತ್ ಅಥವಾ ನಿಧಾನವಾದ ಬದಲಾವಣೆಗಳು ಕಂಡುಬಂದು, ಸಾಕಷ್ಟು ದೀರ್ಘಕಾಲ ಉಳಿದುಕೊಂಡಿದ್ದರೆ ಎಚ್ಚರಿಕೆ ವಹಿಸಬೇಕು.
Related Articles
Advertisement
ಯಾರು ಧ್ವನಿ ಸಮಸ್ಯೆಗಳಿಗೆ ತುತ್ತಾಗಬಹುದು?
ವೃತ್ತಿಪರ ಧ್ವನಿ ಬಳಕೆದಾರರಲ್ಲಿ ಧ್ವನಿಸಂಬಂಧಿ ಸಮಸ್ಯೆಗಳು ಹೆಚ್ಚು ಕಂಡುಬರುತ್ತವೆ. ಇಂಥವರಲ್ಲಿ ಶಿಕ್ಷಕರು, ಗಾಯಕ-ಗಾಯಕಿಯರು (ತರಬೇತಿ ಹೊಂದಿದವರು, ತರಬೇತಿ ಇಲ್ಲದ ಹವ್ಯಾಸಿಗಳು, ಭಜನೆ ಹಾಡುಗಾರರು ಮತ್ತು ಆರ್ಕೆಸ್ಟ್ರಾ ಹಾಡುಗಾರರು), ಯಕ್ಷಗಾನ ಕಲಾವಿದರು, ನಾಟಕ ಕಲಾವಿದರು, ಬಸ್ ನಿರ್ವಾಹಕರು, ಮಾರಾಟಗಾರರು ಮತ್ತು ದೂರವಾಣಿ ಆಪರೇಟರ್‌ಗಳು ಸೇರಿದ್ದಾರೆ. ಧ್ವನಿಸಂಬಂಧಿ ಸಮಸ್ಯೆಗಳು ಗೃಹಿಣಿರು, ಸಣ್ಣ ಮಕ್ಕಳು ಮತ್ತು ಹಿರಿಯರಲ್ಲಿಯೂ ಕಂಡುಬರುತ್ತವೆ.
ಸ್ಪೀಚ್ ಪೆಥಾಲಜಿಸ್ಟ್‌ಗಳನ್ನು ಯಾಕೆ ಆದಷ್ಟು ಬೇಗನೆ ಕಾಣಬೇಕು?
ಧ್ವನಿ ಸಂಬಂಧಿ ಸಮಸ್ಯೆಗಳಲ್ಲಿ ಹಲವನ್ನು ವರ್ತನಾತ್ಮಕ ಧ್ವನಿ ಚಿಕಿತ್ಸೆ (ಬಿಹೇವಿಯರಲ್ ವಾಯಿಸ್ ಥೆರಪಿ)ಯಿಂದಲೇ ಗುಣಪಡಿಸಬಹುದಾದ್ದರಿಂದ ಆದಷ್ಟು ಬೇಗನೆ ಸ್ಪೀಚ್ ಪೆಥಾಲಜಿಸ್ಟ್ ಅವರನ್ನು ಸಂಪರ್ಕಿಸಬೇಕು. ಸರಳವಾಗಿ ಹೇಳಬೇಕೆಂದರೆ, ಧ್ವನಿಸಂಬಂಧಿ ಸಮಸ್ಯೆಗಳನ್ನು ಬೇಗನೆ ಗುರುತಿಸಿದರೆ ಧ್ವನಿ ಚಿಕಿತ್ಸೆಯಿಂದ ಅವುಗಳಿಗೆ ಉಪಶಮನ ಒದಗಿಸಬಹುದು. ಸಮಸ್ಯೆ ಉಲ್ಬಣಿಸಿದರೆ ಧ್ವನಿ ಚಿಕಿತ್ಸೆ ಮತ್ತು/ ಅಥವಾ ಶಸ್ತ್ರಚಿಕಿತ್ಸೆ ಅಗತ್ಯ ಬೀಳಬಹುದು.
ಸ್ಪೀಚ್ ಪೆಥಾಲಜಿಸ್ಟ್‌ಗಳನ್ನು ಬೇಗನೆ ಕಾಣಬೇಕಾದ ಇತರರು ಯಾರು?
ಪ್ರೌಢ ವಯಸ್ಸಿಗೆ ಕಾಲಿಡುವ ಸಮಯದಲ್ಲಿ ಧ್ವನಿ ಬೆಳವಣಿಗೆ ಉಂಟಾಗದ ಮತ್ತು ಹುಡುಗಿಯರ ಧ್ವನಿಯನ್ನು ಹೋಲುವ ಧ್ವನಿಯುಳ್ಳ ಹದಿಹರಯದ ಹುಡುಗರು, ಮೂಗಿನಿಂದ ಮಾತಾಡಿದಂತಹ ಧ್ವನಿಯುಳ್ಳವರು, ನರಶಾಸ್ತ್ರೀಯ ಸಮಸ್ಯೆಗಳನ್ನು ಹೊಂದಿರುವ ವಯೋವೃದ್ಧರು ಮತ್ತು ತಮ್ಮ ಧ್ವನಿ ತೀರಾ ಸಣ್ಣದಾಗಿದೆ ಎಂದುಕೊಳ್ಳುವವರು, ಸಂಭಾಷಣೆಯನ್ನು ಪೂರ್ಣಗೊಳಿಸಲು ಕಷ್ಟವಾಗಿ ಕೀರಲು ಧ್ವನಿಯೊಂದಿಗೆ ಏದುಸಿರು ಬಿಡುವವರು ಕೂಡ ಆದಷ್ಟು ಬೇಗನೆ ಸ್ಪೀಚ್ ಪೆಥಾಲಜಿಸ್ಟ್‌ರನ್ನು ಕಾಣಬೇಕು.
– ಡಾ| ದೀಪಾ ಎನ್. ದೇವಾಡಿಗ ಅಸೋಸಿಯೇಟ್ ಪ್ರೊಫೆಸರ್, ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ ಟಿಎಂಎ ಪೈ ಆಸ್ಪತ್ರೆ, ಉಡುಪಿ/ ಎಂಸಿಎಚ್‌ಪಿ, ಮಾಹೆ, ಮಣಿಪಾಲ