Advertisement

ಶಿಕ್ಷಣದ ಪಾವಿತ್ರ್ಯತೆ ಕಾಪಾಡಿ: ನಮೋಶಿ

06:35 PM Nov 23, 2022 | Team Udayavani |

ಕೂಡ್ಲಿಗಿ: ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಅತ್ಯಂತ ಮಹತ್ತರ ಪಾತ್ರವನ್ನು ಹೊಂದಿದವರೆಂದರೆ ಅದು ಶಿಕ್ಷಕರ ಮಾತ್ರ ಎಂದು ವಿಧಾನಪರಿಷತ್‌ ಸದಸ್ಯರಾದ ಶಶೀಲ್‌ ಜಿ. ನಮೋಶಿ ಹೇಳಿದರು.

Advertisement

ಅವರು ಪಟ್ಟಣದ ಹಿರೇಮಠ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ತಾಲೂಕು ಘಟಕ ಏರ್ಪಡಿಸಿದ ನೂತನ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶಿಕ್ಷಕರಿಗೆ ವೈಯಕ್ತಿಕವಾಗಿ ಎಷ್ಟೇ ಸಮಸ್ಯೆಗಳಿದ್ದರೂ, ಅವುಗಳನ್ನು ಮರೆತು ಶಿಕ್ಷಣದ ಪಾವಿತ್ರ್ಯತೆ ಕಾಪಾಡಿಕೊಂಡು ಇಂದಿನ ಶೈಕ್ಷಣಿಕ ಮಟ್ಟದ ಸುಧಾರಣೆಗೆ ಮುಖ್ಯ ಪಾತ್ರವನ್ನು ವಹಿಸಿಕೊಳ್ಳಬೇಕೆಂದು ತಿಳಿಸಿದರು.

ಮನೆ ನಂತರ ಮಕ್ಕಳು ಶಾಲೆಯಲ್ಲಿ ಅತಿ ಹೆಚ್ಚಿನ ಸಮಯ ಕಳೆಯುತ್ತಾರೆ. ವಿದ್ಯಾಭ್ಯಾಸದ ಜೊತೆಗೆ ನೈತಿಕ ಶಿಕ್ಷಣವನ್ನು ನೀಡಬೇಕಾದ ಗುರುತರ ಜವಾಬ್ದಾರಿಯನ್ನು ಪ್ರತಿಯೊಬ್ಬ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದರು. ಸಹೋದ್ಯೋಗಿಗಳ ಜೊತೆಯಲ್ಲಿ ಯಾವುದೇ ಮನಸ್ತಾಪಗಳನ್ನು
ಮಾಡಿಕೊಳ್ಳದೆ ಉತ್ತಮ ಬಾಂಧವ್ಯಗಳೊಂದಿಗೆ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕೆಂದರು. ಬಡ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಈಗಾಗಲೇ ಮಾಡಿದ್ದೇನೆ. ಇಷ್ಟರಲ್ಲಿಯೇ ಅದಕ್ಕೆ ಪರಿಹಾರ ಸಿಗಲಿದೆ ಎಂದ ಅವರು ಹಿರೇಮಠ ಪ್ರೌಢಶಾಲೆಯ ಅಭಿವೃದ್ಧಿಗಾಗಿ 5 ಲಕ್ಷ ಮಂಜೂರು ಮಾಡುತ್ತೇನೆಂದು ನುಡಿದರು.

ಶಾಸಕ ಎನ್‌.ವೈ. ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಕ್ಷೇತ್ರಕ್ಕೆ ಬಂದ ನಂತರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದೇನೆ. ಸುಮಾರು 450 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.ಶೈಕ್ಷಣಿಕ ಚಟುವಟಿಕೆ ಕೇಂದ್ರದ ನಿರ್ಮಾಣ ಕಟ್ಟಡಕ್ಕೆ 1.40ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ತಾಲೂಕಿನ ಸಮಗ್ರ ಶಿಕ್ಷಣಕ್ಕೆ 25ಕೋಟಿ ಮೀಸಲಿರಿಸಿ ಶೈಕ್ಷಣಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಮಕ್ಕಳು ಗುರುವಿನ ಮಾತನ್ನು ಆಲಿಸುವುದರಿಂದ ಅವರಿಗೆ ನೀವೇ ದಾರಿ ದೀಪಗಳಾಗಬೇಕು. ಅವರ ಜೀವನ ಸುಧಾರಿಸುವಲ್ಲಿ ನಿಮ್ಮ ಪವಿತ್ರ ಕಾರ್ಯ ಮೀಸಲಾಗಿರಲಿ ಎಂದರು.

Advertisement

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಪಂ ಅಧ್ಯಕ್ಷ ಎಂ. ಶಾರದಬಾಯಿ ವಹಿಸಿದ್ದರು. ನೂತನ ಅಧ್ಯಕ್ಷರಾದ ಎಸ್‌.ವಿ. ಸಿದ್ಧಾರಾಧ್ಯ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ರಾಮು ಆ. ಗೊಗವಾಡ, ಎನ್‌ .ಜಿ. ಮನೋಹರ, ಶಿವರಾಜ ಪಾಲೂ¤ರ್‌, ಎಚ್‌.
ಎಲ್‌. ಕುಮಾರಸ್ವಾಮಿ, ಎಸ್‌.ಜಗದೀಶ, ಕೆ.ಜಿ. ಆಂಜನೇಯ, ಪಿ.ಡಿ. ರಂಗಪ್ಪ, ಬಿ.ಎಸ್‌. ಕರಿಬಸಪ್ಪ, ಜಿ.ಹನುಮೇಶ, ಕೆ.ಎಸ್‌. ವೀರೇಶ್‌. ಕೆ.ಎಚ್‌.ಎಂ. ಶಶಿಧರ ಸೇರಿದಂತೆ ಅನೇಕ ಸಹ ಶಿಕ್ಷಕರಿದ್ದರು. ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next