Advertisement
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಕ್ಕುಚ್ಯುತಿ ಮಂಡನೆಗೆ ಅನುಮತಿ ಕೋರಿದರು. ವಿಷಯ ಪ್ರಸ್ತಾಪಕ್ಕೆ ಮಾತ್ರ ಸಭಾಧ್ಯಕ್ಷರು ಅನುಮತಿ ನೀಡಿರುವುದನ್ನೇ ಅವಕಾಶವನ್ನಾಗಿ ಬಳಸಿಕೊಂಡರು. ಸದನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತವರ ಪುತ್ರ ಡಾ.ಯತೀಂದ್ರ ಹಾಗೂ ಸಿಎಂ ಆಪ್ತ ಮರೀಗೌಡ ವಿರುದಟಛಿ ಹರಿಹಾಯ್ದರು.
ಹೊಲ ಮೇಯ್ದರೆ ಹೇಗೆ…? ಎಂದು ಪ್ರಶ್ನೆಗಳ ಸುರಿಮಳೆಗರೆದರು. ತಮ್ಮ ಶಾಸಕ ಸ್ಥಾನದ ಹಕ್ಕಿಗೆ ಚ್ಯುತಿ
ಬಂದಿದೆ, ಸಭಾಧ್ಯಕ್ಷರು ರಕ್ಷಣೆಗೆ ಬರಬೇಕೆಂದು ಮನವಿ ಮಾಡಿದರು. ಈ ವೇಳೆ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿಗಳು ಕುಳಿತಲ್ಲಿಂದಲೇ ರಕ್ಷಣೆ ಕೊಡಿ ಎಂದು ಸಭಾಧ್ಯಕ್ಷರಿಗೆ ಹೇಳಿದಾಗ ಪ್ರತಿಪಕ್ಷ ಸದಸ್ಯರು ಮುಖ್ಯಮಂತ್ರಿಗಳ ಮೇಲೆ ಮುಗಿಬಿದ್ದರು. ಮುಖ್ಯಮಂತ್ರಿಗಳ ಈ ಮಾತಿನಿಂದ ಕೆರಳಿದ ಪ್ರತಿಪಕ್ಷ ಬಿಜೆಪಿ ಸದಸ್ಯರು, “ರಕ್ಷಣೆ ಕೊಡಿ’ ಎನ್ನುವ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
Related Articles
Advertisement
ಕ್ರಮ ಕೈಗೊಳ್ಳಿ: ಜಿ.ಟಿ.ದೇವೇಗೌಡ ಆರೋಪಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಸರ್ಕಾರಿ ಕಾರ್ಯಕ್ರಮಕ್ಕೆ ತಮ್ಮ ಮಗ ಹೋಗಿರುವುದು ನನಗೆ ಗೊತ್ತಿಲ್ಲ. ಸರ್ಕಾರದಿಂದ ನಡೆಯುವ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರೇ ವಹಿಸಬೇಕು ಎನ್ನುವುದು ಕಾನೂನು. ತಮ್ಮ ಮಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಳ್ಳಿಗಳಿಗೆ ಹೋಗಿರಬಹುದು ಅಷ್ಟೆ. ಒಂದು ವೇಳೆ ಕಾನೂನು ಉಲ್ಲಂಘನೆಯಾಗಿದ್ದರೆ ಕ್ರಮ ತೆಗೆದುಕೊಳ್ಳಬಹುದೆಂದು ತಿಳಿಸಿದರು.
ಮುಖ್ಯಮಂತ್ರಿಗಳ ಹೇಳಿಕೆ ನಂತರ ಸ್ಪೀಕರ್ ಕೋಳಿವಾಡ ಘಟನೆ ಕುರಿತು ವರದಿ ತರಿಸಿಕೊಂಡು ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೆ ಸುಮ್ಮನಾಗದ ಜಿ.ಟಿ.ದೇವೇಗೌಡರು ವರದಿ ಯಾವಾಗ ತರಿಸಿಕೊಳ್ಳುತ್ತೀರಿ..? ಅಷ್ಟೊತ್ತಿಗೆ ಅಧಿವೇಶನವೇ ಮುಗಿದುಹೋಗುತ್ತದೆ, ಈಗಲೇ ತಪ್ಪಿತಸ್ಥರ ಮೆಲೆ ಕ್ರಮತೆಗೆದುಕೊಳ್ಳಬೇಕೆಂದುಆಗ್ರಹಿಸಿದರು. ಒಂದೇ ದಿನದಲ್ಲಿ ವರದಿ ತರಿಸಿಕೊಂಡು ಪರಿಶೀಲನೆ ನಡೆಸುವುದಾಗಿ ಸಭಾಧ್ಯಕ್ಷರು ಹೇಳಿ ಕೆರಳಿದ್ದ ಜಿ.ಟಿ ದೇವೇಗೌಡರನ್ನು ಸುಮ್ಮನಾಗಿಸಿದರು.
ನಾರಾಯಣಸ್ವಾಮಿಯಿಂದಲೂ ಆರೋಪಈ ನಡುವೆ ಹೆಬ್ಟಾಳ ಕ್ಷೇತ್ರದ ಶಾಸಕ ನಾರಾಯಣಸ್ವಾಮಿಯವರು ಕ್ಷೇತ್ರ ದಲ್ಲಿಯೂ ನನ್ನನ್ನು ಕಡೆಗಣಿಸಿ ಸರ್ಕಾರದ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ವಿಧಾನ ಪರಿಷತ್ ಸದಸ್ಯ ಭೈರತಿ ಸುರೇಶ್ ಕುಮ್ಮಕ್ಕಿನಿಂದ
ಅಲ್ಪಸಂಖ್ಯಾತರ ಕಾಲೋನಿಯಲ್ಲಿ 4 ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಆರೋಪಿಸಿದರು. ಈ ಆದೇಶಕ್ಕೆ ಕೂಡಲೇ ತಡೆ ನೀಡಬೇಕು. ಶಾಸಕರನ್ನು ನಿರ್ಲಕ್ಷಿಸಿ ಆದೇಶ ಹೊರಡಿಸಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಪಟ್ಟುಹಿಡಿದು ಧರಣಿ ನಡೆಸಿದರು. ಶಾಸಕ ನಾರಾಯಣಸ್ವಾಮಿ ಮತ್ತು ಸಚಿವ ಜಾರ್ಜ್ ನಡುವೆ ಮಾತಿನ ಚಕಮಕಿ ನಡೆಯಿತು. ವಿಧಾನ ಪರಿಷತ್ ಸದಸ್ಯರಿಗೂ ಕೆಲವು ಅಧಿಕಾರಗಳಿವೆ. ಅವರೂ ತಮ್ಮ ಹಕ್ಕುಚ್ಯುತಿಯಾಗಿದೆ ಅಂದರೆ ಏನುಮಾಡುತ್ತೀರೆಂದು ಬಿಜೆಪಿ ಶಾಸಕರ ಕಾಲೆಳೆದರು. ಆಗ ಹಿರಿಯ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಬಜೆಟ್ ಅಂಗೀಕರಿಸುವವರು ನಾವು. ಹಣಕಾಸಿನ ಬಿಲ್ ಪಾಸು ಮಾಡುವವರು ನಾವು. ವಿಧಾನ ಪರಿಷತ್ ಸದಸ್ಯರು ಏತಕ್ಕಾಗಿ ವಿರೋಧ ಮಾಡುತ್ತಾರೆಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಸಚಿವ ಜಾರ್ಜ್ ಅವರು ಮೇಲ್ಮನೆ ಸದಸ್ಯರಿಗೆ ಮಹತ್ವ ನೀಡಬೇಕಾಗಿಲ್ಲ ಎನ್ನುವುದಕ್ಕೆ ಮೊದಲು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ
ಈಶ್ವರಪ್ಪ ಅವರನ್ನು ಕೇಳಿ ಮಾತನಾಡಿ ಎಂದು ತಿರುಗೇಟು ನೀಡಿದರು. ನಾರಾಯಣಸ್ವಾಮಿ ಪ್ರಕರಣದಲ್ಲೂಒಂದೇ ದಿನದಲ್ಲಿ ವರದಿ ಪಡೆದು ಹಕ್ಕುಚ್ಯುತಿ ಪ್ರಸ್ತಾಪದ ಬಗ್ಗೆ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಸಭಾಧ್ಯಕ್ಷರು ತಿಳಿಸಿ ಚರ್ಚೆಗೆ ತೆರೆಯೆಳೆದರು.