“”ಹೌದು… ಯಾರು ಮಾತಾಡ್ತಿರೋದು?”
“”ನಾನು ಆರಾಧ್ಯ ಅಂತಾ, ಮೈಸೂರಿಂದ ಮಾತಾಡ್ತಿದೀನಿ. ನನ್ನ ಮಗಳು ಮೈಕ್ರೋ ಬಯಾಲಜಿ. ಅವಳ ಬಗ್ಗೆ ಕೇಳಬೇಕಿತ್ತು, ನಿಮ್ಮ ಹತ್ರಾ”
ಸ್ನಾತಕೋತ್ತರ ವಿಭಾಗದಲ್ಲಿ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸು ತ್ತಿರುವ ನನಗೆ ಹಲವರಿಂದ ಕರೆ ಬರುತ್ತದೆ. ಈಗ ನಮ್ಮಲ್ಲಿಯೂ ಎಮ್ಮೆಸ್ಸಿ ಅಡ್ಮಿಷನ್ ನಡೆಯುತ್ತಿರುವುದರಿಂದ ಅದರ ಕುರಿತಾಗಿ ಕರೆಯಿರಬೇಕೆಂದು ಭಾವಿಸಿ “ಹಾಂ, ಕೇಳಿ ಕೇಳಿ..’ ಎಂದು ಅವಸರಿಸಿದೆ. ವಾಸ್ತವವಾಗಿ, ನಮ್ಮ ಕಾಲೇಜಿನಲ್ಲಿ ಅಡ್ಮಿಷನ್ ಮುಗಿದು ಹೊಸ ಮಕ್ಕಳಿಗೆ ಓರಿಯಂಟೇಷನ್ ಕಾರ್ಯಕ್ರಮ ಶುರುವಾಗಿತ್ತು. ಈ ಸಂದರ್ಭದಲ್ಲಿ ನನಗೆ ಆಹಾರ ವಿಭಾಗದ ಹೊಣೆ ಹೊರಿಸಲಾಗಿತ್ತು. ಈ ಕರೆ ಬಂದಾಗ ಸ್ವಯಂಸೇವಕರು ಯಾರ ತಟ್ಟೆಗೆ ಏನೇನು ಬಡಿಸುತ್ತಿದ್ದಾರೆ, ಎಷ್ಟೆಷ್ಟು ಬಡಿಸುತ್ತಿದ್ದಾರೆ ಎನ್ನುವ ನಿಗಾ ವಹಿಸುತ್ತಿದ್ದೆ. ಎಲ್ಲರಿಗೂ ಊಟ ಸಾಲುವಂತೆ ಮಾಡುವ ಮಹತ್ತರ ಜವಾಬ್ದಾರಿ ನನ್ನ ಮೇಲಿತ್ತು. ಎಲ್ಲಾದರೂ ಒಬ್ಬನ ತಟ್ಟೆಗೆ ಎರಡು ಜಿಲೇಬಿ ಬಡಿಸಿದರೆ ನಾನು ಲೆಕ್ಕ ಕೊಡಬೇಕು. ಹಾಗಾಗಿ ಅಲಕ್ಷ್ಯ ಮಾಡುವಂತಿರಲಿಲ್ಲ.
Advertisement
ಫೋನಾಚೆಗಿನ ಆರಾಧ್ಯರು ನೋಡಿ, “”ನಾನು ಆರಾಧ್ಯ, ನಮ್ಮೆಜಮಾನರ ಹೆಸರು ಜಯಂತ, ನಮ್ಮ ಮಗಳ ಬಗ್ಗೆ ಕೇಳಣಾ ಅಂತಾ ಫೋನ್ ಮಾಡೆªà…” ಎಂದ ಮೇಲೇ ನನ್ನ ಜೊತೆ ಮಾತಾಡುತ್ತಿರುವವರು ಹೆಣೆØಂಗಸು ಎಂದು ಗೊತ್ತಾಯಿತು. ಧ್ವನಿ ಅಷ್ಟು ಬಿರುಸಾಗಿತ್ತು.ಜಿಲೇಬಿಯ ಸುರುಳಿಯೊಳಗೆ ಸುತ್ತಿಕೊಂಡಿದ್ದ ನನ್ನ ತಲೆಗೆ ಅವರ ಮಾತು ಎತ್ತ ಹೊರಳುತ್ತಿದೆ ಎನ್ನುವುದರ ಅರಿವಾಗದೇ “ಹಾಂ… ಹಾಂ.. ಕೇಳಿ, ಕೇಳಿ, ಬೇಗ, ನನಗೆ ಬೇರೆ ಕೆಲ್ಸಾ ಇದೆ’ ಎಂದು ಅವಸರಿಸಿದೆ.
Related Articles
Advertisement
ಒಬ್ಬ ವ್ಯಕ್ತಿಯ ಹೆಸರನ್ನು ನೋಡಿ ಮಗಳ ಭವಿಷ್ಯದ ಕುರಿತಾದ ತೀರಾ ಖಾಸಗೀ ವಿಚಾರವನ್ನು ಅಪರಿಚಿತನೊಂದಿಗೆ ಯಾವ ಧೈರ್ಯದಿಂದ ಪ್ರಸ್ತಾಪಿಸಿದರೋ ಅರ್ಥವಾಗಲಿಲ್ಲ. ಹೆಸರನ್ನು ನೋಡಿದ ಕೂಡಲೇ ಆತನ ಚಾರಿತ್ರ್ಯವನ್ನೂ, ಗುಣವನ್ನೂ ಕಲ್ಪಿಸಿಕೊಂಡು ಮದುವೆಯವರೆಗೆ ಮುಂದುವರೆಯಲು ಹವಣಿಸುತ್ತಿರುವ ಅವರ ಅಮಾಯಕತೆಗೆ ನಗು ಬಂತು. ನಾನ್ಯಾರು ಎಂದು ಗೊತ್ತಿಲ್ಲ. ನನ್ನ ಬಣ್ಣ, ರೂಪ, ಎತ್ತರ, ಗುಣಾವಗುಣಗಳು, ವೈವಾಹಿಕ ಸ್ಥಿತಿ, ಆರ್ಥಿಕ ಸ್ಥಿತಿ, ಉದ್ಯೋಗ ಮತ್ತಿತರ ಯಾವುದೇ ವಿವರ ಗೊತ್ತಿಲ್ಲದಿದ್ದರೂ ಕೇವಲ ಲೇಖನವನ್ನೋದಿ ಈತ ನಮ್ಮ ಮಗಳಿಗೆ ಉತ್ತಮ ಸಂಗಾತಿಯಾಗಬಲ್ಲ ಎಂದು ಭ್ರಮಿಸಿದ್ದಕ್ಕೆ ಪಿಚ್ಚೆನ್ನಿಸಿತು. ಆದರೂ ಅವರ ಈ ಇನ್-ಡೈರೆಕr… ಪ್ರೊಪೋಸಲ್ಲಿಗೆ ರೋಮಾಂಚನಗೊಂಡೆನೆನ್ನಿ! ಆದರೇನು ಮಾಡೋದು? ಮದುವೆ ಎಂದರೆ ಪುಳಕಗೊಳ್ಳುವ ವಯಸ್ಸನ್ನೂ, ಕ್ಯಾಡºರಿ ಅಡ್ವಟೈìಸೆ¾ಂಟಿನಂತೆ ಮನದಲ್ಲೇ ಲಡೂx ತಿನ್ನೋ ಕಾಲವನ್ನೂ ದಾಟಿ ಬಲು ದೂರ ಬಂದಾಗಿದೆ. ಅರ್ಧಕ್ಕರ್ಧ ತಲೆಕೂದಲು ಹಣ್ಣಾಗಿ, ದಾಂಪತ್ಯದ ದಶಕದಲ್ಲಿರುವ ನನಗೆ ಐದು ವರ್ಷದ ಮಗಳಿದ್ದಾಳೆನ್ನುವ ಸತ್ಯ ಆರಾಧ್ಯರಿಗೆ ಹೇಳುವ ಪ್ರಮೇಯವೇ ಬರಲಿಲ್ಲ! ಹೆಸರಲ್ಲೇನಿದೆ ಎನ್ನುವವರಿಗೆ ಈ ಘಟನೆಯನ್ನು ತಿಳಿಸಬೇಕೆನಿಸಿತು.
ನನ್ನ ಪುಣ್ಯ, ನನ್ನಾಕೆ ಬಳಿಯಿರಲಿಲ್ಲ. ಇಲ್ಲದಿದ್ದರೆ ನಮ್ಮ ದಾಂಪತ್ಯದ ಆನಂದ ಸಾಗರಕ್ಕೆ ಹುಳಿ ಹಿಂಡಿದಂತಾಗುತ್ತಿತ್ತೇನೋ? ವಿಚಿತ್ರವೆಂದರೆ, ಈ ಘಟನೆಗೂ ಎರಡು ತಿಂಗಳ ಮುನ್ನ ನನ್ನ ಶಿಷೊತ್ತಮೆಯೋರ್ವಳು ರಾತ್ರೆ ಒಂಭತ್ತರ ಹೊತ್ತಿಗೆ ಫೋನ್ ಮಾಡಿ ಗೊತ್ತಿಲ್ಲದೇ ಹುಳಿ ಹಿಂಡಿದ್ದಳು. ಫೋನ್ ರಿಸೀವ್ ಮಾಡಿದ್ದು ನನ್ನಾಕೆ. “”ಹಲೋ, ಸರ್ ಇದಾರಾ? ನಾಳೆ ನಮ್ಮಪ್ಪ-ಅಮ್ಮ ಬರ್ತಿದಾರೆ, ಮಾತಾಡ್ಲಿಕ್ಕೆ…” ಎಂದು ಬಾಂಬಿಟ್ಟಿದ್ದಳು. ಹೊತ್ತಲ್ಲದ ಹೊತ್ತಲ್ಲಿ ಅಪರಿಚಿತ ಯುವತಿ ತನ್ನ ಗಂಡನಿಗೆ ಫೋನ್ ಮಾಡಿ ಮಾತಾಡ್ಲಿಕ್ಕೆ ಅಪ್ಪ-ಅಮ್ಮನ್ನ ಕರ್ಕೊಂಬರ್ತೀನಿ ಎಂದು ಹೇಳಿದರೆ ಯಾವ ಹೆಂಡತಿಗಾದರೂ ಸಂದೇಹ ಬಾರದಿರುತ್ತದೆಯೇ? ಆದರೆ, ವಿಷಯ ಬೇರೆಯಾಗಿತ್ತು. ಅಡ್ಮಿಷನ್ನಿನ ಡ್ನೂ ಡೇಟ್ ಮುಗಿದಿದ್ದರೂ ಆಕೆಗೆ ನಮ್ಮಲ್ಲಿ ಸೀಟು ಸಿಗುವಂತೆ ಮಾಡಿ¨ªೆ. ಎಮ್ಮೆಸ್ಸಿಯ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ, ಮರುದಿನ ಆಕೆ ಊರಿಗೆ ಮರಳುವವಳಿದ್ದಳು. ಆ ಕಾರಣ ಕೃತಜ್ಞತೆ ಸಲ್ಲಿಸಲು ಅವಳ ಅಪ್ಪ-ಅಮ್ಮ ನನ್ನನ್ನು ಭೇಟಿಯಾಗಲು ಬಯಸಿದ್ದರು. ಅದನ್ನು ಸರಿಯಾಗಿ ಹೇಳುವುದನ್ನು ಬಿಟ್ಟು ನನ್ನ ಮಡದಿಯ ತಲೆಯಲ್ಲಿ ಹುಳ ಬಿಟ್ಟಿದ್ದಳು. ಮಾರನೆಯ ದಿನ ಅವಳಪ್ಪ-ಅಮ್ಮ ಬಂದು, ಹೊರೆ ಕಾಣಿಕೆಗಳನ್ನು ಅರ್ಪಿಸಿ, ಮಗಳನ್ನು ಕಾಲಿಗೆ ಬೀಳಿಸಿ ಕರೆದುಕೊಂಡು ಆನಂದಭಾಷ್ಪಗಳಿಂದ ತೆರಳಿದ ಮೇಲೆಯೇ ನನ್ನಾಕೆಗೆ ಸಮಾಧಾನವಾದದ್ದೆನ್ನಿ!
ಮೊದಲೇ ಹೇಳಿದಂತೆ, ದಾಂಪತ್ಯದ ಸಾಗರವನ್ನು ಈಜುತ್ತ ಹತ್ತನೆಯ ವಸಂತಕ್ಕೆ ಕಾಲಿಟ್ಟಿರುವ ನನಗೆ ಈಗೀಗ ಆಧ್ಯಾತ್ಮ, ಪುರಾಣಗಳ ಮೇಲೆ ಭಯಂಕರ ಪ್ರೀತಿ ಹುಟ್ಟಿದೆ. ಆದ್ದರಿಂದ ದೊಡ್ಡ ದೊಡ್ಡ ಗ್ರಂಥಗಳನ್ನು ಎದುರು ಹಾಕಿ ಕುಳಿತುಕೊಳ್ಳುತ್ತೇನೆ. ಇಂತಹ ಸಂದರ್ಭದÇÉೇ ಮೇಲಿನೆರಡು ಘಟನೆಗಳು ನಡೆದಿವೆ. ಕಾಕತಾಳೀಯವೆಂಬಂತೆ ನನ್ನಾಕೆಗೆ ಎರಡು ದಿನಗಳ ಮುಂಚೆಯಷ್ಟೇ ನಾನು ಎಲ್ಲವನ್ನೂ ತೊರೆದು ಸನ್ಯಾಸಿಯಾದಂತೆ ಕನಸು ಬಿದ್ದಿತ್ತಂತೆ! ಹಾಗಂತ, ನನಗೇನೂ ಸನ್ಯಾಸಿಯಾಗುವ ಹಂಬಲವೇನಿಲ್ಲ.
ಮನೋಜ ಗೋಡಬೋಲೆ