Advertisement

ಬೆಂಬಲ ಬೆಲೆ: ಸರಕಾರಕ್ಕೆ ಪ್ರಸ್ತಾವನೆ

12:13 PM May 25, 2022 | Team Udayavani |

ಉಡುಪಿ: ಕೊಯ್ಲಿನ ಸಂದರ್ಭದಲ್ಲೇ ಭತ್ತವನ್ನು ಬೆಂಬಲ ಬೆಲೆಯ ಖರೀದಿಗೆ ಪ್ರಸ್ತಾವನೆಯನ್ನು ಕೂಡಲೇ ಸರಕಾರಕ್ಕೆ ಕಳುಹಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಕೆ.ರಘುಪತಿ ಭಟ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಶಾಸಕ ಲಾಲಾಜಿ ಮೆಂಡನ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಉಡುಪಿ ತಾಲೂಕು ಮಟ್ಟದ ತ್ತೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತಾವನೆ ಕಳುಹಿಸಲು ವಿಳಂಬ ಮಾಡಿದರೆ ರೈತರು ತೊಂದರೆ ಅನುಭವಿಸಲಿದ್ದಾರೆ. ಇದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ಕೆಲಸಕಾರ್ಯಗಳನ್ನು ನಿರ್ವಹಿಸಬೇಕು ಎಂದು ಭಟ್‌ ಹೇಳಿದರು.

ನಂದಿಕೂರು ಕೈಗಾರಿಕಾ ಪ್ರದೇಶ ದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕೆಂಬ ಗ್ರಾಮಸ್ಥರು ಮನವಿ ಮಾಡುತ್ತಿದ್ದು ಇದಕ್ಕೆ ಅವಕಾಶ ನೀಡಬೇಕು ಎಂದು ಶಾಸಕ ಲಾಲಾಜಿ ಮೆಂಡನ್‌ ತಿಳಿಸಿದರು.

ಆರೋಗ್ಯ ಜಾಗೃತಿಗೆ ವಾಹನವಿಲ್ಲ!

ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಇಲಾಖೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಉಡುಪಿಯಲ್ಲಿ 15, ಕಾಪುವಿನಲ್ಲಿ 5, ಬ್ರಹ್ಮಾವರದಲ್ಲಿ 1 ಡೆಂಗ್ಯೂ ಪ್ರಕರಣ ಕಂಡುಬಂದಿದೆ. ಆರೋಗ್ಯ ಇಲಾಖೆ ಮೂಲಕ ಮನೆ ಮನೆಗೆ ತೆರಳಿ ಜಾಗೃತಿ ಮಾಡಿಸಲು ಈ ಹಿಂದೆ ಐಟಿಡಿಪಿ ಮೂಲಕ ಅನುದಾನ ಬರುತ್ತಿತ್ತು. ಆದರೆ ಈಗ ಅದನ್ನು ಸ್ಥಗಿತಗೊಳಿಸಲಾಗಿದೆ. ಜಾಗೃತಿ ಮಾಡಲು ವಾಹನವೂ ಇಲ್ಲ ಚಾಲಕರೂ ಇಲ್ಲ ಎಂಬಂತಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದರು. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಶಾಸಕರು ಸೂಚಿಸಿದರು.

Advertisement

ಮಳೆಗಾಲಕ್ಕೆ ಸಿದ್ಧತೆ: ಸೂಚನೆ

ಮಳೆಗಾಲದ ಸಂದರ್ಬದಲ್ಲಿ ಉಂಟಾಗಲುವ ಅವಘಡಗಳನ್ನು ತಪ್ಪಿಸಲು ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬಂದಿ ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು. ಅಪಾಯಕಾರಿಯೆಂದು ಕಂಡು ಬರುವ ಮರಗಳು, ಗೆಲ್ಲುಗಳನ್ನು ತೆರವು ಗೊಳಿಸುವಂತೆ ಶಾಸಕರು ಸೂಚಿಸಿದರು.

ಉಡುಪಿ ತಹಶೀಲ್ದಾರ್‌ ಅರ್ಚನಾ ಭಟ್‌, ತಾ.ಪಂ. ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ಕರ್‌ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

‌ಸಂತೆಕಟ್ಟೆ ಹಾಗೂ ಅಂಬಲ ಪಾಡಿಯ ರಸ್ತೆ ವಿಸ್ತರಣೆ ಕಾಮಗಾರಿ ಸುಮಾರು 41 ಕೋ.ರೂ.ವೆಚ್ಚದಲ್ಲಿ ನಡೆಯಲಿದೆ. ಸಂತೆಕಟ್ಟೆಯ ಎರಡೂ ಭಾಗದಲ್ಲಿ ಸುಮಾರು 300 ಮೀಟರ್‌ ಕಾಮಗಾರಿ ನಡೆಯಲಿದೆ. 4 ಲೇನ್‌ಗಳ ಬ್ರಿಡ್ಜ್ ಇರಲಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅಂಬಲಪಾಡಿಯಿಂದ ಸಂತೆಕಟ್ಟೆವರೆಗೆ ಒಂದೇ ರೀತಿ ರಸ್ತೆ ವಿಸ್ತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next