Advertisement
ಬುಧವಾರ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅವರು, ವಿಐಎಸ್‌ಎಲ್ ಉಳಿಸುವುದಾಗಿ ಕಾರ್ಮಿಕರ ನಿಯೋಗ, ವಿವಿಧ ಸಂಘಟನೆಗಳ ಪ್ರಮುಖರಿಗೆ ವಾಗ್ಧಾನ ನೀಡಿದರು. ಕಾರ್ಖಾನೆಯನ್ನು ಉಳಿಸಿ ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ.
ಕೇಂದ್ರ ಸರಕಾರ ತನ್ನ ಬಂಡವಾಳ ಹಿಂದೆಗೆತ ಯೋಜನೆ ಯಡಿ ಈ ಕಾರ್ಖಾನೆ ಮುಚ್ಚಲು ಮುಂದಾಗಿದೆ. ನಮ್ಮ ರಾಜ್ಯದ ಕಬ್ಬಿಣದ ಅದಿರಿಗೆ ಸಾಕಷ್ಟು ಬೆಲೆ ಇದೆ. ಜಿಂದಾಲ್ ಸಂಸ್ಥೆ ಬೃಹತ್ ಪ್ರಮಾಣದಲ್ಲಿ ಬೆಳೆದಿರುವಾಗ ವಿಐಎಸ್‌ಎಲ್ ಅನ್ನು ಉಳಿಸಲು ನಾವು ಪ್ರಯತ್ನ ಮಾಡುತ್ತೇವೆ. ಮೊದಲು ಮುಚ್ಚುವ ಪ್ರಕ್ರಿಯೆ ತಡೆಯಲು ಪ್ರಯತ್ನಿಸಲಾಗುವುದು. ಬಳಿಕ ಬೇರೆ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
Related Articles
Advertisement
ಸಿಎಂಗೆ ಬಿಜೆಪಿ ಸಂಸದರನಿಯೋಗ ಮನವಿ
ವಿಐಎಸ್‌ಎಲ್ ಉಳಿಸುವ ಸಂಬಂಧ ಜಿಲ್ಲೆಯ ಎಲ್ಲ ಬಿಜೆಪಿ ಪ್ರತಿನಿ ಧಿಗಳು ಹಾಗೂ ಕಾರ್ಮಿಕರನ್ನೊಳಗೊಂಡ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿತು. ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪ್ರಕಿಯೆ ತಡೆಯಬೇಕು. ಕಾರ್ಖಾನೆಯನ್ನು ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಜತೆ ವಿಲೀನಗೊಳಿಸಬೇಕು ಅಥವಾ ಖಾಸಗಿ ಉಕ್ಕು ಉದ್ಯಮಗಳ ಜಂಟಿ ಇಲ್ಲವೇ ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲು ಕೋರಬೇಕು. ಇತ್ತೀಚೆಗಿನ ದಿನಗಳಲ್ಲಿ ಕಾರ್ಖಾನೆ ತೆರೆಯಲು ಪರಿಸರ ಇಲಾಖೆ ಅನುಮತಿ ಪಡೆಯುವುದು ಕಷ್ಟ. ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶ ಕೊಡದೆ ಕಾರ್ಖಾನೆ ಆಸ್ತಿಯನ್ನು ವಾಪಸ್ ಪಡೆದು ಪುನಃಶ್ಚೇತನಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. 27ಕ್ಕೆ ಪ್ರಧಾನಿ ಮೋದಿ ಉದ್ಘಾಟನೆ
ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ ಶಂಕು ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು ಸುಮಾರು 3 ಲಕ್ಷ ಜನ ಸೇರಿಸುವ ನಿರೀಕ್ಷೆ ಇದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.