Advertisement

ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಕೆ ಕಡ್ಡಾಯ

05:34 PM May 12, 2022 | Team Udayavani |

ಬೀದರ: ಸರ್ಕಾರದ ಆದೇಶದೊಂದಿಗೆ ನೀಡಿರುವ ಕಾಮಗಾರಿಗಳನ್ನು ಹೊರತುಪಡಿಸಿ, ಬೇರೆ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕಾದಲ್ಲಿ, ಕಡ್ಡಾಯವಾಗಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಬೇಕು ಎಂದು ಜಿಪಂ ಜಿಲ್ಲಾ ಸಾಮಾಜಿಕ ಪರಿಶೋಧಕ ದೇವದಾಸ ಆಣದೂರ ಹೇಳಿದರು.

Advertisement

ನಗರದ ಸಾಮರ್ಥ್ಯ ಸೌಧದಲ್ಲಿ ಬುಧವಾರ ನರೇಗಾ ಮತ್ತು 15ನೇ ಹಣಕಾಸು ಅನುದಾನದಡಿ ಸಾಮಾಜಿಕ ಪರಿಶೋಧನೆಯಲ್ಲಿ ನೋಡಲ್‌ ಅಧಿಕಾರಿಗಳ ಪಾತ್ರ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನುದಾನಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆದು, ಮುಂದಿನ ಕ್ರಮವಹಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.

15ನೇ ಹಣಕಾಸಿನಲ್ಲಿ ಒಟ್ಟು ಅನುದಾನದ ಶೇ.25ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ, ಶೇ.5 ರಷ್ಟು ವಿಕಲಚೇತನರುಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಿರಿಸಬೇಕು. ವಯಕ್ತಿಕ ಸೌಲಭ್ಯಗಳನ್ನು ಒದಗಿಸಲು ಇದರಲ್ಲಿ ಅವಕಾಶ ಇರುವುದಿಲ್ಲ. ನೈರ್ಮಲೀಕರಣ ಮತ್ತು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ವಹಣೆ, ಮಳೆ ನೀರಿನ ಸಂಗ್ರಹ ಮತ್ತು ನೀರಿನ ಮರುಬಳಕೆ, ಗಣಕಯಂತ್ರ ಲಭ್ಯವಿಲ್ಲದ ಗ್ರಾಪಂಗಳಲ್ಲಿ ಗಣಕಯಂತ್ರ ಮತ್ತು ಉಪಕರಣಗಳನ್ನು ಖರೀದಿಸುವುದು ಹಾಗೂ ವಾರ್ಷಿಕ ನಿರ್ವಹಣಾ ವೆಚ್ಚವನ್ನು ಭರಿಸುವುದು, ಇಂಟರ್‌ನೆಟ್‌ ಸಂಪರ್ಕ ವೆಚ್ಚ ಮತ್ತು ಪುನರಾವರ್ತಿತ ವೆಚ್ಚವನ್ನು ಒಂದು ಬಾರಿ ನೀಡುವುದಾಗಿದೆ ಎಂದು ಮಾಹಿತಿ ನೀಡಿದರು.

ತಾಪಂ ಇಒ ಗದಗೆಪ್ಪ ಕುರಿಕೋಟೆ ಮಾತನಾಡಿ, ಸಂವಿಧಾನದ 280ನೇ ಪರಿಚ್ಛೇದದ ಅನ್ವಯ ಹಣಕಾಸು ಆಯೋಗದ ರಚನೆಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಒಬ್ಬರು ಅಧ್ಯಕ್ಷರು ಮತ್ತು ನಾಲ್ಕು ಮಂದಿ ಸಹ ಸದಸ್ಯರುಗಳನ್ನು ಒಳಗೊಂಡಿರುತ್ತದೆ. ಇಲ್ಲಿ ರಾಷ್ಟ್ರ ಮತ್ತು ರಾಜ್ಯಗಳ ಹಣಕಾಸಿನ ವಿಚಾರಗಳನ್ನು ವ್ಯಾಖ್ಯಾನಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕಿ ಲಕ್ಷ್ಮೀ ಬಿರಾದಾರ, ನೋಡಲ್‌ ಅಧಿಕಾರಿಗಳಾದ ಬಿಸಿಯೂಟದ ಸಹಾಯಕ ನಿರ್ದೇಶಕಿ ಗೀತಾ ಗಡ್ಡೆ, ಅಶೋಕ ವಾಂಗೆಪಲ್ಲಿ, ಯೋಗೇಂದ್ರ ಕುಲಕರ್ಣಿ, ಜಿಲ್ಲಾ ಐಇಸಿ ಸಂಯೋಜಕ ಮರೆಪ್ಪ ಹರವಾಳ್ಕರ್‌, ಸಾಮಾಜಿಕ ಪರಿಶೋಧಕರಾದ ಸುಧಾಕರ ಪಾಟೀಲ, ಸತ್ಯಜೀತ ವಿ. ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next