ಬೆಂಗಳೂರು: ಬಿಬಿಎಂಪಿ ಬಿಟ್ಟು ರಾಜ್ಯಾದ್ಯಂತ ಎಲ್ಲ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸದ್ಯದಲ್ಲೇ ಈ ಸಂಬಂಧ ಅಧ್ಯಾದೇಶ ಹೊರಡಿಸಿ, ಬಳಿಕ ಕರ್ನಾಟಕ ಮುನಿಸಿ ಪಲ್ ಕಾರ್ಪೋರೇಷನ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಮಂಡನೆಗೆ ಸರಕಾರ ತೀರ್ಮಾನಿಸಿದೆ.
ಖಾಲಿ ನಿವೇಶನಕ್ಕೆ ತೆರಿಗೆ :
ಈವರೆಗೆ ಕಟ್ಟಡಕ್ಕೆ ಹೊಂದಿಕೊಂಡ ಖಾಲಿ ನಿವೇಶನ ಎಷ್ಟೇ ವಿಸ್ತೀರ್ಣ ವಿದ್ದರೂ ಅದಕ್ಕೆ ತೆರಿಗೆ ವಿಧಿಸುತ್ತಿರಲಿಲ್ಲ. ಈಗ ಕಟ್ಟಡಕ್ಕೆ ಹೊಂದಿಕೊಂಡ ನಿವೇಶನ ದಲ್ಲಿ 1 ಸಾವಿರ ಚ. ಅಡಿಗಳ ವರೆಗೆ ತೆರಿಗೆ ವಿನಾಯಿತಿ ನೀಡಿ 1 ಸಾವಿರ ಚ. ಅಡಿಗಳಿಗಿಂತ ಹೆಚ್ಚು ವಿಸ್ತೀರ್ಣದ ಖಾಲಿ ಜಾಗಕ್ಕೆ ನಿವೇಶನಗಳಿಗೆ ವಿಧಿಸುವ ತೆರಿಗೆ ಪ್ರಮಾಣವನ್ನೇ ವಿಧಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈವರೆಗೆ ವಸತಿ, ವಸತಿಯೇತರ ಕಟ್ಟಡಗಳಿಗೆ ಆಸ್ತಿಯ ಮಾರ್ಗಸೂಚಿ ದರದ ಶೇ. 50ರಷ್ಟು ಮೌಲ್ಯವನ್ನು ಆಧಾರವಾಗಿರಿಸಿ ತೆರಿಗೆ ವಿಧಿಸಲಾಗು ತ್ತಿತ್ತು. ಈಗ ಆಸ್ತಿಯ ಸದ್ಯದ ಮಾರು ಕಟ್ಟೆ ದರದ ಶೇ. 25ರಷ್ಟು ಮೌಲ್ಯದ ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆ ತರುವುದು. ಹಾಗೆಯೇ ನಿವೇಶನಗಳಿಗೂ ಮಾರುಕಟ್ಟೆ ದರದ ಶೇ. 25ರಷ್ಟು ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲು ಸಂಪುಟ ಒಪ್ಪಿಗೆ ನೀಡಿದೆ.
ಕೇಂದ್ರದ ಮಾರ್ಗಸೂಚಿಯಂತೆ ತೆರಿಗೆ ಪರಿಷ್ಕರಣೆಗೆ ಸಂಪುಟ ಒಪ್ಪಿಗೆ ನೀಡಿದೆ. ತೆರಿಗೆ ಪರಿಷ್ಕರಣೆ ಜತೆಗೆ ಬಳಕೆದಾರರ ಶುಲ್ಕ ವಿಧಿಸ ಬೇಕಿತ್ತು. ಆದರೆ ಅದನ್ನು ಸದ್ಯ ತಡೆ ಹಿಡಿದು ತೆರಿಗೆ ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ. ಕೇಂದ್ರದ ಸೂಚನೆಯಂತೆ ಜ. 25ರೊಳಗೆ ತೆರಿಗೆ ಪರಿಷ್ಕರಣೆಯಾಗಬೇಕಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಎಷ್ಟು ಏರಿಕೆ ? :
ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ವಸತಿ ಮತ್ತು ವಸತಿಯೇತರ ಕಟ್ಟಡ ಈಗಿರುವುದು: ಶೇ. 0. 3 – ಶೇ. 1
ಪರಿಷ್ಕೃತ: ಶೇ. 0.2 -ಶೇ. 1.5
ನಿವೇಶನಗಳು
1,000 ಚ.ಮೀ.ವರೆಗೆ
(3,000 ಚ. ಅಡಿ): ಆಸ್ತಿ ತೆರಿಗೆ ಇಲ್ಲ
ಪರಿಷ್ಕೃತ: ಶೇ. 0.2-ಶೇ. 0.5