ಬೆಂಗಳೂರು: ರಾಜ್ಯಾದ್ಯಂತ ಡ್ರೋನ್ ಮೂಲಕ ಆಸ್ತಿ ಸಮೀಕ್ಷೆ ನಡೆಸಿ ಡಿಜಟಲೀಕರಣ ಕಾರ್ಯವನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದ ಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸರಕಾರಿ, ಖಾಸಗಿ, ಸಾರ್ವಜನಿಕ ಆಸ್ತಿಗಳ ಸಮಗ್ರ ಸಮೀಕ್ಷೆ ನಡೆಸುವ ಕಾರ್ಯಕ್ಕೆ 258 ಕೋಟಿ ರೂ. ಒದಗಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈಗಾಗಲೇ ರಾಮನಗರ, ಕಲಬುರಗಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಭೂ ವ್ಯಾಜ್ಯಗಳಿಗೆ ತಿಲಾಂಜಲಿ ನೀಡಿ ಭೂ ಮಾಲಕರಿಗೆ ಸಮರ್ಪಕ ದಾಖಲೆ ಒದಗಿಸಲು ಡ್ರೋನ್ ಮೂಲಕ ಸರ್ವೇ ನಡೆಸಿ ನಕ್ಷೆ ಸಿದ್ಧಪಡಿಸಲು ಸರಕಾರ ಮುಂದಾಗಿದೆ. ಇನ್ನೊಂದು ವರ್ಷದಲ್ಲಿ ಸರ್ವೇ ಅಂತಿಮಗೊಳಿಸಿ ಸಾರ್ವಜನಿಕರಿಗೆ ಡಿಜಿಟಲ್ ಭೂ ನಕ್ಷೆ ಒದಗಿಸಲಾಗು ವುದು ಎಂದು ತಿಳಿಸಿ ದರು.
ಸರ್ವೇ ಬಳಿಕ ಭೂಮಿಯ ಸಂಪೂರ್ಣ ವಿವರ ಡಿಜಿಟಲೀಕರಣಗೊಳ್ಳಲಿದ್ದು, ಭೂ ವಿವಾದಗಳು ತಾನಾಗಿಯೇ ಕಡಿಮೆಯಾಗಲಿವೆ ಎಂದು ಹೇಳಿದರು.