Advertisement

ರಾಘವೇಶ್ವರ ಶ್ರೀ ವಿರುದ್ಧದಪ್ರಕರಣ: ಅರ್ಜಿ ವಜಾ

11:57 AM Sep 27, 2018 | |

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಪ್ರಕರಣದಲ್ಲಿ ವಾದ ಮಂಡಿಸಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌. ಪೊನ್ನಣ್ಣ ಅವರನ್ನು ಎಸ್‌ಪಿಪಿಯಯನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.

Advertisement

ಹೀಗಾಗಿ, ಪೊನ್ನಣ್ಣ ಅವರು ಪ್ರಕರಣದಲ್ಲಿ ವಾದ ಮಂಡನೆ ಮಾಡಬಾರದು ಎಂದು ಸ್ವಾಮೀಜಿ ಪರ ವಕೀಲರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾ. ಆರ್‌.ಬಿ. ಬೂದಿಹಾಳ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಜಾಗೊಳಿಸಿತು. ಯಾವುದೇ ಕ್ರಿಮಿನಲ್‌ ಪ್ರಕರಣದಲ್ಲಿ ಸರ್ಕಾರ ಅಥವಾ ಪ್ರಾಸಿಕ್ಯೂಷನ್‌ನ್ನು ಪ್ರತಿನಿಧಿಸಬೇಕಾದರೆ ಅವರು ಎಸ್‌ಪಿಪಿ ಆಗಿರಬೇಕು ಇಲ್ಲವೇ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿರ ಬೇಕು. ಆದರೆ, ಸಂವಿಧಾನದಲ್ಲಿ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಹುದ್ದೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹೀಗಾಗಿ ಈ ಮೇಲ್ಮನವಿ ಪ್ರಕರಣದಲ್ಲಿ ಎ.ಎಸ್‌. ಪೊನ್ನಣ್ಣ ಅವರು ವಾದ ಮಂಡಿಸುವಂತಿಲ್ಲ ಅನ್ನುವುದು ಮಠದ ಪರ ವಕೀಲರ ವಾದವಾಗಿತ್ತು.

ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯ 2016ರ ಮಾ.31 ರಂದು ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪವನ್ನು ಕೈ ಬಿಟ್ಟಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ, ಸಂತ್ರಸ್ತೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next