ಬಡ್ತಿ ಮೀಸಲು ವಿಧೇಯಕ ರಾಷ್ಟ್ರಪತಿಯವರಿಗೆ ಕಳುಹಿಸಲು ರಾಜ್ಯಪಾಲರು ಸೂಚಿಸಿರುವ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್ ಸಲಹೆ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.
Advertisement
ಜತೆಗೆ ರಾಷ್ಟ್ರಪತಿ ಹಾಗೂ ಸುಪ್ರೀಂಕೊರ್ಟ್‌ಗೆ ವಿಧೇಯಕ ತಂದಿರುವ ಪ್ರಮೇಯ ವಿವರಿಸಿ ಮನವೊಲಿಕೆ ಮಾಡುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ತೀರ್ಮಾನಿಸಿದೆ.
Related Articles
Advertisement
ಈ ಕುರಿತು ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ರಾಜ್ಯಪಾಲರು ವಿಧೇಯಕ ತಿರಸ್ಕರಿಸಿಲ್ಲ, ಬದಲಿಗೆ ರಾಷ್ಟ್ರಪತಿಯವರಿಗೆ ಕಳುಹಿಸಿ ಎಂಬ ಸಲಹೆ ನೀಡಿದ್ದಾರೆ. ಅದರನ್ವಯ ಕಳುಹಿಸಲಾಗಿದೆ. ರಾಷ್ಟ್ರಪತಿ ಹಾಗೂ ಸುಪ್ರೀಂಕೋರ್ಟ್‌ಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಶೇ.80ರಷ್ಟು ಎಲ್ಲ ಇಲಾಖೆಗಳಲ್ಲಿ ಜೇಷ್ಠತಾ ಪಟ್ಟಿ ಸಿದಟಛಿಪಡಿಸಲಾಗಿದೆ. ನ್ಯಾಯಾಲಯ ಕೊಟ್ಟಿರುವ ಕಾಲಾವಕಾಶ ಇನ್ನೂ ಇರುವುದರಿಂದ ಅಷ್ಟರಲ್ಲಿ ಅಂತಿಮ ಪಟ್ಟಿ ಸಿದಟಛಿಗೊಳ್ಳಲಿದೆ. ನಂತರ ನ್ಯಾಯಾಲಯದ ತೀರ್ಪು ಏನು ಎಂಬುದು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟರಿಗೆ ಮುಂಬಡ್ತಿ ಸಂಬಂಧದ ಹೊಸ ವಿಧೇಯಕಕ್ಕೆ ಬೆಳಗಾವಿ ಅಧಿ ವೇಶನದಲ್ಲಿ ಅಂಗೀಕಾರ ಪಡೆಯಲಾಗಿದೆ. ಈ ಸಂಬಂಧ ಅಂಕಿತಕ್ಕಾಗಿ ರಾಷ್ಟ್ರಪತಿಗಳ ಬಳಿ ಹೋಗಿದೆ.ವಿಧೇಯಕವನ್ನು ಗೌರ್ನರ್ ರಾಷ್ಟ್ರಪತಿ ಅವರಿಗೆ ಕಳುಹಿಸಿದ್ದಾರೆ. ರಾಷ್ಟ್ರಪತಿಗಳ ಜತೆ ಈ ಸಂಬಂಧ ಚರ್ಚಿಸುವೆ.– ಸಿದ್ದರಾಮಯ್ಯ, ಮುಖ್ಯಮಂತ್ರಿ