Advertisement

Indian Army ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

07:00 PM Sep 22, 2023 | Team Udayavani |

ಹೊಸದಿಲ್ಲಿ: ಕಾನೂನಿನ ವಿಷಯದಲ್ಲಿ ಮಧ್ಯಪ್ರವೇಶಿಸಬಹುದು ಆದರೆ ಭಾರತೀಯ ಸೇನೆಯ ವ್ಯವಹಾರಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ‘ಸೇನಾ ತುಕಡಿಗಳಿಗೆ ಕಮಾಂಡ್ ನೀಡುವಾಗ ಮಹಿಳಾ ಅಧಿಕಾರಿಗಳ ವಿರುದ್ಧ ತಾರತಮ್ಯ ಎಸಗಲಾಗುತ್ತಿದೆ’ ಎಂದು ಆರೋಪಿಸಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಪ್ರಕರಣದ ವಿಚಾರಣೆಯನ್ನು ನಿರಾಕರಿಸಿದಾಗ, “ನಾವು ಸೇನೆಯ ವ್ಯವಹಾರಗಳನ್ನು ನಡೆಸಲು ಸಾಧ್ಯವಿಲ್ಲ ಮತ್ತು ಕಂಪನಿಗಳಿಗೆ ಹೇಗೆ ಆದೇಶ ನೀಡುತ್ತೇವೆ. ನಾವು ಕಾನೂನಿನ ತತ್ವಗಳಲ್ಲಿ ಮಧ್ಯಪ್ರವೇಶಿಸಬಹುದು, ಆದರೆ ನಾವು ಸೇನೆಯ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದು ಖಂಡಿತವಾಗಿಯೂ ಸಾಧ್ಯವಿಲ್ಲ”ಎಂದು ಹೇಳಿದೆ.

ವಿಚಾರಣೆಯ ಆರಂಭದಲ್ಲಿ, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಪೀಠಕ್ಕೆ, ‘ಈ ಪ್ರಕರಣವು ಸಶಸ್ತ್ರ ಪಡೆಗಳ ನ್ಯಾಯಮಂಡಳಿಗೆ ಹೋಗಬೇಕು’ ಎಂದು ಹೇಳಿದರು.

ಕೆಲವು ಮಹಿಳಾ ಅಧಿಕಾರಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ.ಮೋಹನ್ , 2020ರ ನಂತರ ಒಬ್ಬ ಮಹಿಳೆಗೂ ಬಡ್ತಿ ನೀಡಿಲ್ಲ, ಎಲ್ಲರೂ ಸೇವೆಯಲ್ಲಿದ್ದಾರೆ’’ ಎಂದು ಪೀಠಕ್ಕೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next