Advertisement

ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ: ಚುನಾವಣಾಧಿಕಾರಿಗೆ ದೂರು

04:07 PM Mar 25, 2019 | pallavi |

ತೀರ್ಥಹಳ್ಳಿ: ಜನಜಾಗೃತಿ ಅಭಿಯಾನ ಎಂಬ ಸರ್ಜಿಕಲ್‌ ಸ್ಟ್ರೈಕ್‌ ಹಾಗೂ ವೀರ ಯೋಧರ ಛಾಯಾಚಿತ್ರವನ್ನು ಹಾಕಿಕೊಂಡು ಭಾರತೀಯ ಸಂಸ್ಕೃತಿ ಪ್ರೇರಿತ ಸರಕಾರ, ಎಲ್ಲರೂ ನೀಡೋಣ ಸಹಕಾರ ಎಂಬ ಘೋಷಣೆಯೊಂದಿಗೆ ಕರಪತ್ರವನ್ನು ತೀರ್ಥಹಳ್ಳಿ ಕ್ಷೇತ್ರಾದ್ಯಂತ ಹಂಚಲಾಗುತ್ತಿದ್ದು, ಕೂಡಲೇ ಕರಪತ್ರವನ್ನು ಮುಟ್ಟುಗೋಲು ಹಾಕಬೇಕೆಂದು ಕಾಂಗ್ರೆಸ್‌ ಕಿಸಾನ್‌ ಸೆಲ್‌ ವಕ್ತಾರ ಪಡುವಳ್ಳಿ ಹರ್ಷೇಂದ್ರಕುಮಾರ್‌ ಚುನಾವಣಾಧಿಕಾರಿ ಎ.ಆರ್‌. ಮಂಜುನಾಥ್‌ ಅವರಿಗೆ ದೂರು ನೀಡಿದ್ದಾರೆ.

Advertisement

2014ರ ಸಾರ್ವಜನಿಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಪ್ರತಿ ನಿರ್ಧಾರದಲ್ಲೂ ರಾಷ್ಟ್ರ ಹಿತವೇ ಪ್ರಮುಖವಾಗಿದೆ ಎಂಬ ಘೋಷಣೆ ಹಾಗೂ ಸರ್ಜಿಕಲ್‌ ದಾಳಿ, ಯೋಧರ ಛಾಯಾಚಿತ್ರವನ್ನು ಹಾಕಿಕೊಳ್ಳುವ ಮುಖಾಂತರ ದೇಶದ ಹಿತದೃಷ್ಟಿಯಿಂದ ಮತ್ತೂಮ್ಮೆ ಇದೇ ಸರ್ಕಾರದ ನೇತೃತ್ವ ಹಾಗೂ ಇದೇ ಆಡಳಿತ ಸ್ಥಾಪಿಸುವಲ್ಲಿ ಸಕ್ರಿಯರಾಗೋಣ ಎಂಬ ಘೋಷಣೆಯೊಂದಿಗೆ ಜನಜಾಗೃತಿ ಎಂಬ ಕರಪತ್ರ ಮೂಲಕ ತಾಲೂಕಿನಾದ್ಯಂತ ಹಂಚಲಾಗುತ್ತಿದೆ. ಅಲ್ಲದೆ ಚುನಾವಣಾ ಆಯೋಗ ಈ ಹಿಂದೆ ಯಾವುದೇ ರಾಜಕೀಯ ಪಕ್ಷಗಳು ಸೈನಿಕರ ಭಾವಚಿತ್ರಗಳನ್ನು ಮುದ್ರಿಸಬಾರದೆಂದು ಸ್ಪಷ್ಟಪಡಿಸಿದ್ದರೂ ಸಹ ಜನಜಾಗೃತಿ ಅಭಿಯಾನ ಎಂಬ ಹೆಸರಿನಲ್ಲಿ ಕರಪತ್ರ ಮುದ್ರಿಸಿ ಹಂಚಲಾಗುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್‌ ಮುಖಂಡ ಜಫರುಲ್ಲಾ, ಮಂಜುನಾಥ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next