Advertisement

ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ “ಉಚಿತ ಭರವಸೆ” ಗಂಭೀರ ವಿಷಯ: ಆಯೋಗಕ್ಕೆ ಸುಪ್ರೀಂ ನೋಟಿಸ್

02:32 PM Jan 25, 2022 | Team Udayavani |

ನವದೆಹಲಿ:ಮುಂಬರುವ ಪಂಚರಾಜ್ಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷವೊಡ್ಡಲು ಉಚಿತ ಆಶ್ವಾಸನೆ ನೀಡುತ್ತಿರುವ ಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರ(ಜನವರಿ 25) ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

Advertisement

ಇದನ್ನೂ ಓದಿ:ಕಾಮಗಾರಿ ವಿಳಂಬ: ನವಯುಗ ಕಂಪೆನಿಗೆ ಬೀಗ ಜಡಿದು,ಮುತ್ತಿಗೆ; ಗ್ರಾ. ಪಂ.ನಿಂದ ಪ್ರತಿಭಟನೆ

ಚುನಾವಣೆಯಲ್ಲಿ ಆಶ್ವಾಸನೆ ನೀಡುತ್ತಿರುವ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ಸಿಜೆಐ ಎನ್.ವಿ.ರಮಣ ಅವರು, ರಾಜಕೀಯ ಪಕ್ಷಗಳ ಈ ನಡವಳಿಕೆಯನ್ನು ಕಾನೂನಾತ್ಮಕವಾಗಿ ಹೇಗೆ ನಿಯಂತ್ರಿಸಬಹುದು ಎಂಬುದು ನನಗೆ ತಿಳಿಯಬೇಕಾಗಿದೆ. ಈ ಚುನಾವಣೆಯಲ್ಲಿಯೇ ಇದನ್ನು ಕಾರ್ಯಗತಗೊಳಿಸಲು ಸಾಧ್ಯವೇ? ಅಥವಾ ಮುಂದಿನ ಚುನಾವಣೆಯಲ್ಲಿಯೋ. ಇದೊಂದು ಗಂಭೀರವಾದ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ರಾಜಕೀಯ ಪಕ್ಷಗಳು ಸಾರ್ವಜನಿಕರ ಹಣದಿಂದ ತರ್ಕಬದ್ಧವಲ್ಲದ ಉಚಿತ ಭರವಸೆಗಳನ್ನು ನೀಡುವುದನ್ನು ತಡೆಗಟ್ಟಲು ಮಾರ್ಗಸೂಚಿಯನ್ನು ಸಿದ್ದಪಡಿಸುವಂತೆ ಈ ಮೊದಲು ಚುನಾವಣಾ ಆಯೋಗಕ್ಕೆ ಸೂಚಿಸಲಾಗಿತ್ತು. ಆದರೆ ಆಯೋಗ ಕೇವಲ ರಾಜಕೀಯ ಪಕ್ಷಗಳ ನಿಲುವು ವ್ಯಕ್ತಪಡಿಸುವಂತೆ ಒಂದು ಸಭೆಯನ್ನು ಮಾತ್ರ ನಡೆಸಿರುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಇಂತಹ ಜನಪ್ರಿಯ ಆಶ್ವಾಸನೆಗಳು ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಚುನಾವಣಾ ಆಯೋಗ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಪಿಐಎಲ್ ನಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ.

Advertisement

ಪಿಐಎಲ್ ಅನ್ನು ಸುಪ್ರೀಂಕೋರ್ಟ್ ಸಿಜೆಐ ಎನ್.ವಿ.ರಮಣ, ಜಸ್ಟೀಸ್ ಎ.ಎಸ್. ಬೋಪಣ್ಣಾ ಮತ್ತು ಜಸ್ಟೀಸ್ ಹಿಮಾ ಕೊಹ್ಲಿ ನೇತೃತ್ವದ ಪೀಠ ವಿಚಾರಣೆ ನಡೆಸಿದ್ದು, ಮುಂದಿನ ನಾಲ್ಕು ವಾರಗಳ ನಂತರ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next