Advertisement
ಅರಣ್ಯ ಪ್ರದೇಶ ಹೊರತುಪಡಿಸಿ ಉಳಿದ ಜಾಗದಲ್ಲಿ ಪೂರ್ವನಿಗದಿಯಂತೆ ಮ್ಯಾರಥಾನ್ ಓಟ ನಡೆದಿದ್ದು, ಇದಕ್ಕೆ ಅನುಮತಿ ನೀಡಿದ ಕ್ರಮವು ಟೀಕೆಗೆ ಗುರಿಯಾಗಿದೆ.
Related Articles
Advertisement
ಇತ್ತೀಚೆಗೆ ಗುಡ್ಡ ಗಾಡು ಓಟ ಕಾರ್ಯಕ್ರಮವನ್ನು ಖಾಸಗಿ ಸಂಸ್ಥೆ ಆಯೋಜಿಸಿತ್ತು. ಇದಕ್ಕೆ ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಿ ಗುಡ್ಡ ಗಾಡು ಓಟ ಅರಣ್ಯ ಪ್ರದೇಶದಲ್ಲಿ ಸಾಗದಂತೆ ತಡೆದಿದ್ದಾರೆ.
ಎತ್ತಿನ ಭುಜಕ್ಕೆ ಪ್ರವೇಶ ಮಾಡದಂತೆ ಮುಂದಿನ ಆದೇಶದವರೆಗೆ ನಿಷೇಧ ಹೇರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಪ್ರದೇಶ ದ್ವಾರದಲ್ಲಿ ತಂತಿ ಬೇಲಿ ಹಾಕಿ ಮುಚ್ಚಲಾಗಿದೆ.
ಎತ್ತಿನ ಭುಜ ಪ್ರದೇಶ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಟ್ಟಿದ್ದು ಸಾಕಷ್ಟು ಆನೆಗಳು ಇವೆ. ಪ್ರವಾಸಿಗರ ಚಟುವಟಿಕೆಗಳಿಂದ ಆನೆಗಳಿಗೆ ತೊಂದರೆ ಆಗುತ್ತಿದ್ದು, ಅರಣ್ಯ ಇಲಾಖೆ ತಂತಿ ಬೇಲಿ ನಿರ್ಮಿಸಿ ಎತ್ತಿನ ಭುಜಕ್ಕೆ ಪ್ರವೇಶ ನಿಷೇಧ ಮಾಡಿರುವುದನ್ನು ಪರಿಸರ ಪ್ರಿಯರು ಸ್ವಾಗತಿಸಿ, ಇಲ್ಲಿ ಶಾಶ್ವತವಾಗಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದಾರೆ.