Advertisement

ಸರಕಾರಿ ವೈದ್ಯರಿಗೆ ಖಾಸಗಿ ಪ್ರಾಕ್ಟೀಸ್‌ ನಿಷೇಧ: ಶಿಫಾರಸು

10:25 PM Jun 22, 2023 | Team Udayavani |

ಬೆಂಗಳೂರು: ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಎಂಬಿಬಿಎಸ್‌ ವೈದ್ಯರನ್ನು ನಗರ ಪ್ರದೇಶಗಳಲ್ಲೂ ಬಳಸಿಕೊಳ್ಳುವಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ನೇತೃತ್ವದ ಆಡಳಿತ ಸುಧಾರಣ ಆಯೋಗ-2 ಸರಕಾರಕ್ಕೆ ಶಿಫಾರಸನ್ನು ಸಲ್ಲಿಸಿದೆ. ಇದನ್ನು ಕಾಯಿದೆ ತಿದ್ದುಪಡಿ ಮೂಲಕ ಅನುಷ್ಠಾನಕ್ಕೆ ತರಲು ಸರಕಾರ ಸಿದ್ಧವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ವೈದ್ಯರಿಗೆ ಖಾಸಗಿ ಪ್ರಾಕ್ಟೀಸ್‌ ನಿಷೇಧಿಸುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ.

Advertisement

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದ ವಿಜಯ ಭಾಸ್ಕರ್‌ ನೇತೃತ್ವದ ಆಯೋಗವು ಪ್ರಮುಖ 21 ಅಂಶಗಳನ್ನು ಒಳಗೊಂಡಿರುವ ವರದಿ ಸಲ್ಲಿಸಿದೆ.

ವರದಿಯ ಮುಖ್ಯಾಂಶಗಳು
 ಆರೋಗ್ಯ ಇಲಾಖೆಯಲ್ಲಿ ನರ್ಸರಿಂಗ್‌ ನಿರ್ದೇಶನಾಲಯ ಸ್ಥಾಪನೆಗೆ ಶಿಫಾರಸು.
 ಸರಕಾರಿ ಆಸ್ಪತ್ರೆಗಳಲ್ಲಿ ಸಂಜೆ ಒಪಿಡಿಗಳನ್ನು ಪ್ರಾರಂಭಿಸಲು ಸಲಹೆ.
 ಒಳರೋಗಿಗಳು ಮತ್ತು ಹೆರಿಗೆಗಳ ಸಂಖ್ಯೆಯನ್ನು ಅವಲಂಬಿಸಿ, ಹೆಚ್ಚಿನ ಕೆಲಸದ ಹೊರೆ ಹೊಂದಿರುವ ತಾಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 50 ಹೊಸ ಸಾಮಾನ್ಯ ಹಾಸಿಗೆಗಳನ್ನು ಮಂಜೂರು ಮಾಡಲು ಶಿಫಾರಸು.
 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀರೋಗ ತಜ್ಞರು, ಮಕ್ಕಳ ವೈದ್ಯರು, ಅರಿವಳಿಕೆ ತಜ್ಞರು, ದಂತ ಶಸ್ತ್ರಚಿಕಿತ್ಸಕರು ವಾರಕ್ಕೊಮ್ಮೆ ಗಂಟೆಯ ಆಧಾರದಲ್ಲಿ ಮತ್ತು ಮೂಳೆಚಿಕಿತ್ಸಕ, ಮನೋವೈದ್ಯರು, ಫಿಸಿಯೋಥೆರಪಿಸ್ಟ್‌ ತಿಂಗಳಿಗೊಮ್ಮೆ ಗಂಟೆಯ ಆಧಾರದಲ್ಲಿ ತಜ್ಞರ ಸೇವೆಗಳನ್ನು ಪಡೆಯಲು ಎಆರ್‌ಎಸ್‌ಗೆ ಹಣ ಒದಗಿಸಬಹುದು.
 ಎಲ್ಲ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಡಳಿತಾಧಿಕಾರಿಯ ಅಡಿಯಲ್ಲಿ ಆಸ್ಪತ್ರೆ ವ್ಯವಸ್ಥಾಪಕರ ಹುದ್ದೆ ನೇಮಕಕ್ಕೆ ಸಲಹೆ.
 ಎಎನ್‌ಎಂಗಳು ಮತ್ತು ಪುರುಷ ಆರೋಗ್ಯ ಕಾರ್ಯಕರ್ತರು ದ್ವಿ-ಚಕ್ರ ವಾಹನಗಳನ್ನು ಖರೀದಿಸಲು 20 ಕೋಟಿ ರೂ. ವೆಚ್ಚದಲ್ಲಿ ಶೇ.50ರ ಸಬ್ಸಿಡಿ
 100 ಹಾಸಿಗೆಗಳ ಸಾಮರ್ಥ್ಯದ ತಾಲೂಕು ಆಸ್ಪತ್ರೆಗಳಲ್ಲಿ ಜಿಎನ್‌ಎಂ ಅಥವಾ ಬಿಎಸ್‌ಸಿ ನರ್ಸಿಂಗ್‌ ಕೋರ್ಸ್‌ಗಳನ್ನು 20 ಸೀಟ್‌ಗಳೊಂದಿಗೆ ನರ್ಸಿಂಗ್‌ ಕಾಲೇಜು ಹಾಗೂ 10 ಪ್ಯಾರಾಮೆಡಿಕಲ್‌ ಸೀಟುಗಳೊಂದಿಗೆ ಪ್ಯಾರಾ ಮೆಡಿಕಲ್‌ ಕೋರ್ಸ್‌ ಪ್ರಾರಂಭಿಸುವುದು.
 ವಿಭಾಗಿಯ ಮಟ್ಟದಲ್ಲಿ ಸಿಸ್ಟಂ ಇಂಪ್ರೂಮೆಂಟ್‌ ಟೀಮ್‌ (ಎಸ್‌ಐಟಿ) ರಚನೆ.
 ಪ್ರತಿ ಬುಧವಾರ ತಾಯಿಯ ಆರೋಗ್ಯ, ಮರಣ ಪ್ರಮಾಣ ಕುರಿತು ಇಲಾಖೆಯಿಂದ ಸ್ಕ್ರೀನಿಂಗ್‌ಗೆ ಸೂಚನೆ.
 ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಜೆ ಕ್ಲಿನಿಕ್‌ ತೆರೆಯಲು ಪ್ರಸ್ತಾವ.
 ಆರೋಗ್ಯ ಕರ್ನಾಟಕ ಆಯುಷ್ಮಾನ್‌ ಭಾರತ್‌ ಆರೋಗ್ಯ ವಿಮೆ ಯೋಜನೆಯಡಿ ವಿಕಲಚೇತನರಿಗೆ ಚಿಕಿತ್ಸೆ.
 ಪುರುಷ ಆರೋಗ್ಯ ಕಾರ್ಯಕರ್ತರಿಗೆ ಡ್ರೆಸ್‌ ಕೋಡ್‌ ಕಡ್ಡಾಯ.
 ವಿಶೇಷ ಕೌಶಲಗಳನ್ನು ಹೊಂದಿರುವ ಆಯುಷ್‌ ಪಿಜಿ ವೈದ್ಯರ ಸೇವೆಯನ್ನೂ, ಔಷಧಾಲಯಗಳ ಬದಲು ಆಯುಷ್‌ ಆಸ್ಪತ್ರೆಗಳಿಗೆ ಮಾತ್ರ ನಿಯೋಜನೆಗೆ ನಿರ್ಧಾರ ಕೈಗೊಳ್ಳಲು ಸಲಹೆ.

Advertisement

Udayavani is now on Telegram. Click here to join our channel and stay updated with the latest news.

Next