Advertisement

ಅಂತಾರಾಜ್ಯ ವಾಹನಗಳಿಗೆ ನಿಷೇಧ

06:56 PM May 27, 2021 | Team Udayavani |

ಕೆಜಿಎಫ್: ಕೋಲಾರ ಜಿಲ್ಲಾದ್ಯಂತ ಮೇ27 ರಿಂದ 31ರವರೆಗೆ ವಿಧಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಕೆಜಿಎಫ್ ಪೋಲೀಸ್‌ ಜಿಲ್ಲೆಯಲ್ಲಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದು, ಸಾರ್ವಜನಿಕರ ಅನಗತ್ಯ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.

Advertisement

ತಪ್ಪಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಸ್ಪಿಇಲ ಕ್ಕಿಯಾ ಕರುಣಾಕರನ್‌ ತಿಳಿಸಿದ್ದಾರೆ.ಮೇ 27ರ ಬೆಳಗ್ಗೆ 10 ರಿಂದಮೇ 31ರ ಬೆಳಗ್ಗೆ 6 ಗಂಟೆಯತನಕ ಸಂಪೂರ್ಣ ಲಾಕ್‌ಡೌನ್‌ಘೋಷಿಸಿದ್ದು, ಕೆಜಿಎಫ್ ಪೊಲೀಸ್‌ಜಿಲ್ಲೆಯು ತಮಿಳುನಾಡು, ಆಂಧ್ರ ಪ್ರದೇಶರಾಜ್ಯಗಳ ಗಡಿ ಭಾಗ ದಲ್ಲಿದ್ದು,ಅಂತಾರಾಜ್ಯ ವಾಹನ ಯಾವುದೂ ಒಳಬಾರದಂತೆ, ಹೊರ ಹೋಗ ದಂತೆ ತಪಾಸಣೆ ನಡೆಸಲು ಹೆಚ್ಚಿನ ಅಧಿಕಾರಿ,ಸಿಬ್ಬಂದಿ ನೇಮಿಸಿ, ಚೆಕ್‌ ಪೋಸ್ಟ್‌ಗಳ ಸ್ಥಾಪಿಸಲಾಗಿದೆ.

ಕಣ್ಗಾವಲಿ ಗಾಗಿ ಕ್ಯಾಮೆರಾಅಳವಡಿಸಲಾಗಿದ್ದು, ಕೆಜಿಎಫ್ ಸರಹದ್ದಿನರಾಜ್‌ ಪೇಟ್‌ರೋಡ್‌, ವೆಂಕಟಾಪುರ,ಕೆಂಪಾಪುರ, ಜಕ್ಕರಸಕುಪ್ಪ, ತೊಪ್ಪನಹಳ್ಳಿ,ದೊಡ್ಡಪೊನ್ನಾಂಡಹಳ್ಳಿ, ಮರಾಠಹೊಸಹಳ್ಳಿ ಸೇರಿ ಇತರೆ ಕಡೆ ಚೆಕ್‌ಪೋಸ್ಟ್‌ ನಿರ್ಮಿಸಿದ್ದು, 24 ಗಂಟೆನಿರಂತರವಾಗಿ ಪೊಲೀಸ್‌ಅಧಿಕಾರಿ, ಸಿಬ್ಬಂದಿಕಾರ್ಯಾಚರಣೆ ನಡೆಸುತ್ತಿದ್ದಾರೆ.

ಡಿವೈಎಸ್ಪಿ ಬಿ.ಕೆ.ಉಮೇಶ್‌ರ ನೇತೃ ತ್ವ ದಲ್ಲಿಹಲವಾರು ತಂಡರಚಿಸಲಾಗಿದ್ದು, ಕೆಜಿಎಫ್ಪೊಲೀಸ್‌ ಜಿಲ್ಲೆಯ ಗಡಿಭಾಗಗಳಾದ ತಮಿಳುನಾಡು,ಆಂಧ್ರಪ್ರದೇಶ ರಾಜ್ಯಗಳಗಡಿಗಳಲ್ಲಿ ನಿರ್ಮಿಸಿರುವ ಚೆಕ್‌ ಪೋಸ್ಟ್‌ಗಳನ್ನು ನಿರಂತರವಾಗಿ ಇವರ ಜತೆಗೆಹೆಚ್ಚುವರಿ ಸ್ಥಳೀಯ ನಿರೀಕ್ಷಕರು, ಆರ್‌ಪಿಐ ಕೆಜಿಎಫ್ ಮತ್ತು ನಿಸ್ತಂತು ವಿಭಾಗದನಿರೀಕ್ಷಕರು ಗಡಿಯಲ್ಲಿ ಪರಿ ಶೀಲನೆ ನಡೆಸು ತ್ತಿರುತ್ತಾರೆ.

ಸಾರ್ವಜನಿಕರು ಸರ್ಕಾರದಆದೇಶಕ್ಕೆ ಬದ್ಧರಾಗಿ ಕಡ್ಡಾಯವಾಗಿಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಲು ಜಿಲ್ಲಾ ಎಸ್‌ಪಿ ಇಲಕ್ಕಿಯಾಕರುಣಾಕರನ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next