Advertisement

ಅಕ್ರಮ ಮದ್ಯ ಮಾರಾಟ ನಿಷೇಧಿಸಿ

02:59 PM Jun 07, 2017 | Team Udayavani |

ಹರಿಹರ: ತಾಲೂಕಿನ ಭಾನುವಳ್ಳಿ ಹಾಗೂ ಗುತ್ತೂರು ಗ್ರಾಮಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ನಿಷೇ ಧಿಸಲು ಹಾಗೂ ಗ್ರಾಮದೊಳಗಿನ ಮದ್ಯದಂಗಡಿ ಸ್ಥಳಾಂತರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಮಹಿಳಾ ಸ್ವಸಹಾಯ ಸಂಘಗಳ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. 

Advertisement

ನಂತರ ಮಾತನಾಡಿದ ಮುಖಂಡರು, ಭಾನುವಳ್ಳಿ, ಗುತ್ತೂರು ಗ್ರಾಮಗಳ ಓಣಿ ಓಣಿಗಳಲ್ಲೂ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಯುವಕರು ಹಾಗೂ ವಯಸ್ಕರು ಅಲ್ಲದೆ ವೃದ್ಧರೂ ಸಹಿತ ಮದ್ಯ ವ್ಯಸನಿಗಳಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. 

ಬರಗಾಲದಲ್ಲೂ ಕೂಲಿ ಮಾಡಿ ಅಷ್ಟಿಷ್ಟು ಕೂಡಿಟ್ಟ ಹಣವನ್ನು ಮದ್ಯಕ್ಕೆ ವ್ಯಯಿಸಿ ಸಂಸಾರಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇದಕ್ಕೆ ಬಡವ ಹಾಗೂ ಹಿಂದುಳಿದ ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದು ತಮ್ಮ ಅಳಲು ತೋಡಿಕೊಂಡರು. ತಾಲೂಕಿನ ಭಾನುವಳ್ಳಿ ಗ್ರಾಮದಲ್ಲೂ ಇದೆ ಪರಿಸ್ಥಿತಿ ಇದೆ.

ಅದರಲ್ಲೂ ಗ್ರಾಮ ಮದ್ಯದ, ಜನಸಂದಣಿ  ಜಾಗದಲ್ಲೇ ಲಿಕ್ಕರ್‌ ಶಾಪ್‌ ತೆರೆಯಲು ಅಬಕಾರಿ ಇಲಾಖೆ ಪರವಾನಿಗೆ ನೀಡಿದೆ. ಇದರಿಂದ ಕುಡುಕರ ಹಾವಳಿ ಮಿತಿಮೀರಿದ್ದು, ಹೆಣ್ಣು ಮಕ್ಕಳು ಸಾರ್ವಜನಿಕರು ಓಡಾಡಲು ಕಷ್ಟಸಾಧ್ಯವಾಗಿದೆ. ಕೂಡಲೇ ಈ ಮದ್ಯದಂಗಡಿಯನ್ನು ಊರಿನ ಹೊರಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ ಜಿ.ನಳಿನಾ ಅಬಕಾರಿ ಇಲಾಖೆ ಮೇಲಾಧಿಕಾರಿಗಳಿಗೆ ಮನವಿ ರವಾನಿಸುವುದಾಗಿ ತಿಳಿಸಿದರು.

ರೈತ ಸಂಘದ ಮುಖಂಡರಾದ ಎಚ್‌.ಓಂಕಾರಪ್ಪ, ಜಿ.ಪ್ರಭುಗೌಡ, ಗ್ರಾಮ ಘಟಕದ ಅಧ್ಯಕ್ಷ ಎನ್‌.ಪ್ರಕಾಶ್‌, ಜಿಲ್ಲಾ ಉಪಾಧ್ಯಕ್ಷ ಎಂ.ಬಿ.ಪಾಟೀಲ್‌, ಸಿ.ಎನ್‌.ಮಹದೇವಪ್ಪ, ಡಿ.ಬಿ.ಬಸವರಾಜ, ಎಚ್‌.ಬಿ.ಕೊಟ್ರೇಶ್‌, ಗರಡಿಮನಿ ಬಸಣ್ಣ, ವಸಂತಪ್ಪ, ಬಂಗಾರಿ, ರತ್ನಾ, ಸಾಹಿರಾಬಾನು, ಮಂಗಳಮ್ಮ,  ಗಂಗಮ್ಮ, ಸಾಕವ್ವ, ವಿನೋದಮ್ಮ, ಶಂಕ್ರಮ್ಮ,ಸಾಕಮ್ಮ, ಜಿ.ಲೋಹಿತ್‌, ರವಿ, ಸಹಿನ, ಅಂಜನಪ್ಪ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next