Advertisement

ಕಳ್ಳಭಟ್ಟಿಗೆ ಬೆಲ್ಲ ಮಾರುವವರಿಗೂ ನೋಟಿಸ್‌ ಕೊಡಿ

04:34 PM Feb 23, 2021 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿರುವ ಕಳ್ಳಭಟ್ಟಿಗಳ ಮೇಲೆ ಕಾಲ ಕಾಲಕ್ಕೆ ದಾಳಿ ನಡೆಸಿ ಪ್ರಕರಣ ದಾಖಲಿಸುವಮೂಲಕ ಅದರಿಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ಸೂಚಿಸಿದರು.

Advertisement

ಸೋಮವಾರ ನಡೆದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಬಕಾರಿ ದಾಳಿಗಳ ಸಮಯದಲ್ಲಿ ಪೊಲೀಸ್‌, ಪ್ರಾದೇಶಿಕ ಸಾರಿಗೆ ಇಲಾಖೆ, ಅರಣ್ಯ ಇಲಾಖೆಗಳ ಸಿಬ್ಬಂದಿಗಳ ಸಹಕಾರ ಪಡೆಯಲು ತಿಳಿಸಿದರು.ಕಳ್ಳಭಟ್ಟಿ ತಯಾರಿಸಲು ಉಪಯೋಗಿಸುತ್ತಿದ್ದಕಚ್ಚಾ ವಸ್ತುಗಳಾದ ಬೆಲ್ಲ ಮಾರಾಟ ಮಾಡುತ್ತಿರುವಹೋಲ್‌ಸೆಲ್‌ ಮಾರಾಟಗಾರರಿಗೆ, ಸಾರಾಯಿಗೆಂದೇತಯಾರಿಸುತ್ತಿದ್ದ ಗಡಿಗೆ ತಯಾರಿಸುವ ಕುಂಬಾರನಿಗೆ ನೋಟಿಸ್‌ ಜಾರಿ ಮಾಡಲು ತಿಳಿಸಿದರು.

ಅಲ್ಲದೇ ಕೆಲವೊಂದು ಕೆರೆಯ ದಂಡೆಯ ಮೇಲೆ ಕಳ್ಳಭಟ್ಟಿ ತಯಾರಿಸಲು ಬೆಲ್ಲದ ಪಾಕವನ್ನು ಸಂಗ್ರಹಿಸುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಮೀನುಗಾರಿಕೆ ಇಲಾಖೆಯವರು ಕೆರೆ ಗುತ್ತಿಗೆ ಕೊಟ್ಟಗುತ್ತಿಗೆದಾರರಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಕೆರೆ ಗುತ್ತಿಗೆಯನ್ನು ನೆಪ ಮಾತ್ರಕ್ಕೆ ಪಡೆದರೆ ಸಾಲದು. ಆ ಕೆರೆಯಲ್ಲಿ ಮೀನು ಸಾಗಾಣಿಕೆ ಮಾಡಬೇಕು. ಇಲ್ಲವಾದರೆ ಕೆರೆಯ ದಂಡೆಯ ಪ್ರದೇಶದಲ್ಲಿ ಅಕ್ರಮ ಕಳ್ಳಭಟ್ಟಿ ಕಾರ್ಯ ನಡೆಸಲು ಅವಕಾಶ ಕೊಟ್ಟಂತಾಗುತ್ತದೆ. ಇಂತಹ ಪ್ರಕರಣಗಳುಕಂಡುಬಂದಲ್ಲಿ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಮಾಡುವುದರ ಜತೆಗೆ ಅವರ ಮೇಲೆ ಪ್ರಕರಣ ಸಹದಾಖಲಿಸಬೇಕು. ಕಳ್ಳಭಟ್ಟಿ ಹೆಚ್ಚಾಗಿ ಕಂಡುಬರುವ ಪ್ರದೇಶದಲ್ಲಿ ದಾಳಿ ಹೆಚ್ಚಾಗಿ ನಡೆಸಿ ನಿಯಂತ್ರಣಕ್ಕೆ ಕ್ರಮ ವಹಿಸಲು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಜಿಲ್ಲೆಯಲ್ಲಿ ನಡೆಸುತ್ತಿರುವ ಅಬಕಾರಿ ದಾಳಿಯ ವೇಳೆಯಲ್ಲಿ ಪೊಲೀಸ್‌ಸಿಬ್ಬಂದಿಗಳಿಂದ ತಾಂಡಾಗಳಲ್ಲಿರುವ ನೋಂದಣಿಹಾಗೂ ದಾಖಲೆ ಇಲ್ಲದಂತಹ ಗೂಡ್ಸ್‌ ವಾಹನ ಸೇರಿದಂತೆ ಇತರೆ ವಾಹನಗಳನ್ನು ಜಪ್ತಿಗೆ ಕ್ರಮ ವಹಿಸಲು ತಿಳಿಸಿದರು.ಅರಣ್ಯ ಪ್ರದೇಶದಲ್ಲಿ ಕಳ್ಳಬಟ್ಟಿತಯಾರಿಸುತ್ತಿರುವುದು ಕಂಡು ಬಂದಲ್ಲಿ ಅಬಕಾರಿ ಇಲಾಖೆಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆಯಅಧಿಕಾರಿಗಳಿಗೆ ತಿಳಿಸಿದರು.

Advertisement

ಅಬಕಾರಿ ಉಪ ಆಯುಕ್ತ ರಮೇಶಕುಮಾರ ಎಚ್‌ ಮಾತನಾಡಿ, ಜಿಲ್ಲೆಯ ಮುಧೋಳ  ಮತ್ತು ಜಮಖಂಡಿಯಲ್ಲಿ ಕಳ್ಳಭಟ್ಟಿ ಸಾರಾಯಿನಿಯಂತ್ರಣಕ್ಕೆ ಬಂದಿದೆ. ಸದ್ಯ ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾಮತ್ತು ಹುನಗುಂದ ತಾಲೂಕಿನ ಅಮೀನಗಡತಾಂಡಾಗಳಲ್ಲಿ ಕಳ್ಳಭಟ್ಟಿ ತಯಾರಿಕೆ ಹೆಚ್ಚಾಗಿಕಂಡುಬರುತ್ತಿದೆ. ಅಮೀನಗಡ ತಾಂಡಾದ ಕೆರೆಯನೀರಿನಲ್ಲಿ ಅಕ್ರಮವಾಗಿ ಬೆಲ್ಲದ ಕೊಳೆಯನ್ನುಮುಚ್ಚಿಟ್ಟು ನಂತರ ಅದರಿಂದ ಅಕ್ರಮವಾಗಿಕಳ್ಳಭಟ್ಟಿ ಸಾರಾಯಿ ತಯಾರಿಸುವ ಕೆಲಸವಾಗುತ್ತಿದೆ. ಇದನ್ನು ತಡೆಗಟ್ಟಲು ದಾಳಿಯ ಸಮಯದಲ್ಲಿ ಸಹಕರಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ನಿರ್ದೇಶಕರು ನಿರ್ದೇಶನ ನೀಡಿರುತ್ತಾರೆ ಎಂದರು.

ಜಿಲ್ಲೆಯ ಬಾಗಲಕೋಟೆ ಶಹರದಲ್ಲಿ ಬೆಲ್ಲವನ್ನು ಮಾರಾಟ ಮಾಡುತ್ತಿರುವ ಹೋಲ್‌ಸೆಲ್‌ ವ್ಯಾಪಾರಸ್ಥರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಕಳ್ಳಬಟ್ಟಿ ಸಾರಾಯಿ ತಯಾರಿಕೆಗೆ ಪೂರಕವಾದಕಚ್ಚಾ ವಸ್ತು ಬೆಲ್ಲವನ್ನು ಖರೀದಿಸುವಂತಹ ಜನರ ಮಾಹಿತಿಯನ್ನು ಸಹ ಕಲೆ ಹಾಕಲಾಗುತ್ತಿದೆ. ಕುಂಬಾರಿಕೆನಡೆಸುತ್ತಿರುವ ವ್ಯಕ್ತಿಗಳ ಖುದ್ದಾಗಿ ಸಂಪರ್ಕಿಸಿಗಡಿಗೆಯ ಮೇಲೆ ಮುಚ್ಚುವ ಮುಚ್ಚಳವನ್ನು ಅಕ್ರಮಕಳ್ಳಭಟ್ಟಿ ಸರಾಯಿ ತಯಾರಿಸುವಂತಹ ಸಲಕರಣೆ ತಯಾರಿಸದಂತೆ ತಿಳುವಳಿಕೆ ಹಾಗೂ ನೋಟಿಸ್‌ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ ವರ್ಷ ಜುಲೈನಿಂದ ಜನವರಿ,2021ವರೆಗೆ ಒಟ್ಟು 1114 ಅಬಕಾರಿ ದಾಳಿ ನಡೆಸಲಾಗಿ 79 ಪ್ರಕರಣ ದಾಖಲಿಸಲಾಗಿದೆ. 60 ಜನಆರೋಪಿಗಳನ್ನು ಬಂಧಿಸುವುದರ ಜತೆಗೆ 383 ಲೀಟರ್‌ ಕಳ್ಳಭಟ್ಟಿ ಸಾರಾಯಿ, 465 ಲೀಟರ್‌ ಬೆಲ್ಲದ ಕೊಳೆ ಹಾಗೂ ಎರಡು ಆಟೋ ಮತ್ತು 29 ದ್ವಿಚಕ್ರ ವಾಹನವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿಜಿಲ್ಲಾ ಪಂಚಾಯತ ಸಿಇಒ ಟಿ.ಭೂಬಾಲನ್‌, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಕಂದಾಯ ಇಲಾಖೆಯ ಶಿರಸ್ತೆದಾರ ನಾಯ್ಕಲಮಠ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next