ಚಿಂಚೋಳಿ: ರಾಜ್ಯ ಸರಕಾರ ಯೋಜನೆಗಳ ಅನುಷ್ಠಾನಕ್ಕಾಗಿ ನೀಡಿದ ಅನುದಾನ ಸಕಾಲದಲ್ಲಿ ಖರ್ಚು ಮಾಡದಿದ್ದರೆ ಲ್ಯಾಪ್ಸ್ ಆಗುತ್ತದೆ ಎಂದು ತಾ.ಪಂ ಇಒ ಅನೀಲಕುಮಾರ ರಾಠೊಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾ.ಪಂ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿಮತ್ತು ಟಿಎಸ್‌ಪಿ ಯೋಜನೆ ಅಡಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಮುದಾಯಕ್ಕೆ ನೀಡಿದ ಅನುದಾನವನ್ನು ಅದೇ ಸಮುದಾಯಪ್ರಯೋಜನ ಪಡೆದುಕೊಳ್ಳುವಹಾಗೆ ಅಧಿಕಾರಿಗಳು ಶ್ರಮಿಸಬೇಕು. ಸರಕಾರ ಸಮಾಜ ಕಲ್ಯಾಣ ಇಲಾಖೆಹಾಗೂ ಇತರೆ ಇಲಾಖೆಗಳಿಗೆ ಸಾಕಷ್ಟುಯೋಜನೆಗಳ ಅಡಿಯಲ್ಲಿ ಅನುದಾನ ನೀಡುತ್ತದೆ. ಎಲ್ಲವನ್ನು ಮಾರ್ಚ್ ಅಂತ್ಯದೊಳಗೆ ಖರ್ಚು ಮಾಡಬೇಕು ಎಂದು ಸೂಚಿಸಿದರು.
ಜಿ.ಪಂ (ಪಿಆರ್‌ಇ) ಎಇಇ ಮಹ್ಮದ್ ಅಹೆಮದ್ ಹುಸೇನ ಮಾತನಾಡಿ,ನಮ್ಮಇಲಾಖೆಯಿಂದ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅಡಿಯಲ್ಲಿ ಒಟ್ಟು 69.20 ಲಕ್ಷ ರೂ. ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಲೋಕೋಪಯೋಗಿ ಎಇಇಗುರುರಾಜ ಜೋಶಿ ಮಾತನಾಡಿ, ಭೂಯಾರ(ಕೆ), ಧುತ್ತರಗಾ, ಚಂದನಕೇರಾ, ಮರಪಳ್ಳಿ ಗ್ರಾಮಗಳ ಪರಿಶಿಷ್ಟ ಕಾಲೋನಿಗಳಲ್ಲಿ ಸಮುದಾಯ ಭವನಗಳು ಮಂಜೂರಿಯಾಗಿವೆ. ಪ್ರತಿಯೊಂದಕ್ಕೆ 12 ಲಕ್ಷ ರೂ. ಇದೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ರಾಠೊಡ ಮಾತನಾಡಿ, ಕೃಷಿ ಇಲಾಖೆ ಸೂಕ್ಷ್ಮ ಹನಿ ನೀರಾವರಿಯೋಜನೆ ಅಡಿಯಲ್ಲಿ 45 ಲಕ್ಷ ರೂ. ಅನುದಾನ ಬಂದಿದೆ. ಈ ಯೋಜನೆ ಬಗ್ಗೆ ಜನರ ಬೇಡಿಕೆ ಇರುವುದರಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ತಾ.ಪಂ 15ನೇ ಹಣಕಾಸು ಯೋಜನೆ ಅಡಿಯಲ್ಲಿ 29 ಗ್ರಾ.ಪಂಗಳಿಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅಡಿಯಲ್ಲಿ 6.94 ಕೋಟಿ ರೂ. ಅನುದಾನ ಬಂದಿದೆ. ತಾ.ಪಂಗೆ 1.67 ಕೋಟಿ ರೂ. ಅನುದಾನಬಂದಿದೆ. ಈ ಅನುಮೋದನೆಯನ್ನು ತಾ.ಪಂ ಸಾಮಾನ್ಯ ಸಭೆಯಲ್ಲಿ ಪಡೆಯಲಾಗಿದೆ ಎಂದು ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ ಪ್ರಭುಲಿಂಗ ಬುಳ್ಳ ಅನುದಾನ ಕುರಿತು ವಿವರಿಸಿದರು. ಸಿಡಿಪಿಒ ಗುರುಪ್ರಸಾದ, ಪಶು ವೈದ್ಯಾಧಿಕಾರಿ ಡಾ| ಧನರಾಜ ಬೊಮ್ಮ, ಜೆಸ್ಕಾಂ ಎಇಇ ಉಮೇಶ ಗೋಳಾ, ಎಇಇ ಗುರುರಾಜ ಜೋಶಿ, ಎಇ ರಾಜೇಂದ್ರ, ರಮೇಶ ಚವ್ಹಾಣ ಭಾಗವಹಿಸಿದ್ದರು. ರಮೇಶ ದೇಗಲಮಡಿ ವಂದಿಸಿದರು.