Advertisement

ಗೃಹ ನಿರ್ಮಾಣ ಸಂಘ ರಚಿಸಿಕೊಳ್ಳಿ

05:04 PM Nov 10, 2020 | Suhan S |

ಕೋಲಾರ: ಡಿಸಿಸಿ ಬ್ಯಾಂಕ್‌ ನೌಕರರು ಗೃಹ ನಿರ್ಮಾಣ ಸಹಕಾರ ಸಂಘ ರಚಿಸಿಕೊಂಡು ಲೇಔಟ್‌ ನಿರ್ಮಿಸಿಕೊಳ್ಳಲು ಪ್ರಯತ್ನಿಸಿದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ ನೀಡಿದರು.

Advertisement

ಡಿಸಿಸಿ ಬ್ಯಾಂಕ್‌ ನೌಕರರ ಸಹಕಾರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಇತ್ತೀಚೆಗೆನಿಧನರಾದ ನೌಕರ ಎಳಚಪ್ಪ ಅವರ ಸೇವೆ ಗುರುತಿಸಿ ಅವರ ಪತ್ನಿ ರಾಧಮ್ಮರನ್ನು ಸನ್ಮಾನಿಸಿ, ಆರ್ಥಿಕ ನೆರವು ವಿತರಿಸಿ ಅವರು ಮಾತನಾಡಿದರು.

ಬ್ಯಾಂಕ್‌ಒಳಿತಿಗೆ ಶ್ರಮಿಸಿ: ಡಿಸಿಸಿ ಬ್ಯಾಂಕ್‌ ಉಳಿಸುವ ಸಂಕಲ್ಪದೊಂದಿಗೆ ಕೆಲಸ ಮಾಡಿ, ಬ್ಯಾಂಕ್‌ನ ಲಾಭಾಂಶದಲ್ಲಿ ಸ್ವಲ್ಪ ಹಣ ಕಾನೂನಿನನ್ವಯ ಅವಕಾಶವಿದ್ದಲ್ಲಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆನೀಡುವುದಾಗಿ ತಿಳಿಸಿದರು. ಡಿಸಿಸಿ ಬ್ಯಾಂಕನ್ನು ದೇಶದಲ್ಲೇ ನಂ.1 ಮಾಡೋದೇ ಗುರಿಯಾಗಿರಲಿ, ಬ್ಯಾಂಕ್‌ನ ಒಳಿತಿಗೆ ನೀವುಶ್ರಮಿಸಿ ಬಂದ ಲಾಭ ನಿಮ್ಮ ಒಳಿತಿಗೆ ಬಳಸೋಣ ಎಂದು ತಿಳಿಸಿದರು.

ಶ್ರದ್ಧೆ ಇಲ್ಲ: ಡಿಸಿಸಿ ಬ್ಯಾಂಕ್‌ ದಿವಾಳಿಯಾಗಿತ್ತು, ಅದನ್ನು ಎನ್‌ಪಿಎ 2.5ಕ್ಕಿಳಿಸಿ ಲಾಭದತ್ತ ಕೊಂಡೊಯ್ಯಲು ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿಯ ಶ್ರಮವೂ ಇದೆ. ಆದರೆ ಕೆಲವುನೌಕರರಲ್ಲಿ ಇನ್ನೂ ಬ್ಯಾಂಕ್‌ ಕರ್ತವ್ಯದ ಬಗ್ಗೆ ಶ್ರದ್ಧೆ ಬಂದಂತಿಲ್ಲ ಎಂದರು.

ನಿಮಗೆ ಕೇಳಿದ್ದು ನೀಡಿದ್ದೇವೆ, ವೇತನ ಹೆಚ್ಚಳ, ಬೋನಸ್‌, ವೈದ್ಯಕೀಯ ವಿಮೆ ಎಲ್ಲವೂ ಸಿಕ್ಕಿದೆ. ಇಷ್ಟರ ನಡುವೆಯೂ ನಿಮ್ಮಲ್ಲಿ ಬದಲಾವಣೆ ಬಾರದಿದ್ದರೆ ಹೇಗೆ ಎಂದು ಪ್ರಶ್ನಿಸಿ, ಬ್ಯಾಂಕ್‌ ನಿಮ್ಮದೇ ಎಂಬ ಭಾವನೆ ಇರಲಿ ಎಂದರು. ಠೇವಣಿ ಸಂಗ್ರಹ ಗುರಿ ಸಾಧನೆ ಮೂಲಕ ಬ್ಯಾಂಕ್‌ನ್ನು ಬೆಳೆಸಿ ನಿಮಗೆ ಬಡ್ಡಿರಹಿತ ಮನೆ ಸಾಲ ನೀಡಲು ಆಲೋಚನೆ ಮಾಡುವುದಾಗಿಭರವಸೆ ನೀಡಿದ ಅವರು, ಸಹಕಾರ ಸಂಘಕ್ಕೆ ಮತ್ತಷ್ಟು ನೆರವು ನೀಡುವುದಾಗಿ ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಡಿಸಿಸಿ ಬ್ಯಾಂಕ್‌ ನೌಕರ ಎಳಚಪ್ಪ ಅವರ ಪತ್ನಿ ರಾಧಮ್ಮ ಅವರನ್ನು ಸನ್ಮಾನಿಸಿ, ಆರ್ಥಿಕ ನೆರವು ನೀಡಲಾಯಿತು. ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ವೆಂಕಟರೆಡ್ಡಿ, ಎಜಿಎಂಗಳಾದ ಭೈರೇಗೌಡ, ಶಿವಕುಮಾರ್‌, ನಾಗೇಶ್‌, ಚೌಡಪ್ಪ, ಸಂಘದ ಕಾರ್ಯದರ್ಶಿ ಖಲೀಮುಲ್ಲಾ, ನಿರ್ದೇಶಕರಾದ ಎ.ವಿ.ಶ್ರೀನಿವಾಸ್‌, ಸಾದಪ್ಪ, ರಾಮಕೃಷ್ಣಾರೆಡ್ಡಿ, ವನಿತಾ ಕುಮಾರಿ, ದಶರಥನ್‌, ಕೃಷ್ಣಪ್ಪ, ಲಿಂಗರಾಜ್‌, ಪ್ರಸಾದ್‌, ಕೆ.ಬಿ.ವೆಂಕಟೇಶ್‌, ಜನಾರ್ದನ್‌, ವೆಂಕಟಮುನಿ ಮತ್ತಿತರರು ಉಪಸ್ಥಿತರಿದ್ದರು.

ಡಿಸಿಸಿ ಬ್ಯಾಂಕ್‌ ನೌಕರರ ಸಹಕಾರ ಸಂಘಕ್ಕೆ ನೀಡುವ ಸಾಲಕ್ಕೆಹಾಕುತ್ತಿರುವ 9.5 ಶೇಬಡ್ಡಿ ಕಡಿಮೆ ಮಾಡುವಂತೆಕೋರಿದ್ದೀರಿ, ಈ ಸಂಬಂಧಆಡಳಿತ ಮಂಡಳಿ ಸಭೆಯಲ್ಲಿಚರ್ಚಿಸಿ ನಿರ್ಧಾರ ಕೈಗೊಳ್ಳುವೆ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next