Advertisement

ಅಸ್ಪೃಶ್ಯತೆ ನಿವಾರಣೆಗೆ ಕಾರ್ಯಕ್ರಮ: ಕೋಟ

01:08 AM Nov 27, 2021 | Team Udayavani |

ಉಡುಪಿ: ಅಸ್ಪೃಶ್ಯತೆಯನ್ನು ತೊಡೆದು ಹಾಕುವ ಅನಿವಾರ್ಯ ಸಮಾಜ, ಸರಕಾರದ ಮುಂದಿದೆ. ಅಸ್ಪೃಶ್ಯತೆ ನಿವಾರಣೆಗೆ ಪ್ರತಿಯೊಬ್ಬರನ್ನು ಸಜ್ಜುಗೊಳಿಸಲು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದಲೂ ಅಭಿಪ್ರಾಯ ಪಡೆಯಲಿದ್ದೇವೆ ಎಂದು ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಸಂವಿಧಾನ ದಿನಾಚರಣೆಯ ಅಂಗವಾಗಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಂವಿಧಾನದ ಮರು ಓದು ಎಂಬ ಆಶಯದಡಿ ಅಸ್ಪೃಶ್ಯತೆ ನಿವಾರಣೆ ಸೇರಿದಂತೆ ಅಂಬೇಡ್ಕರ್‌ ಅವರ ವಿಚಾರಧಾರೆಗಳು, ಯೋಚನೆ, ಯೋಜನೆಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಯಿಂದ ಬಹುದೊಡ್ಡ ಕಾರ್ಯಕ್ರಮವನ್ನು ಚುನಾವಣೆ ನೀತಿ ಸಂಹಿತೆ ಮುಗಿದ ಅನಂತರ ಹಮ್ಮಿಕೊಳ್ಳಲಿದ್ದೇವೆ. ಪ್ರತೀ ಮನೆ, ಮನುಷ್ಯನನ್ನು ಅಸ್ಪೃಶ್ಯತೆ ನಿವಾರಣೆಗಾಗಿ ಸಜ್ಜುಗೊಳಿಸಲು ಯೋಜನೆಗಳನ್ನು ತರಲಾಗುವುದು ಎಂದರು.

ಇದನ್ನೂ ಓದಿ:ಇಬ್ಬಗೆ ನೀತಿ ಬಿಡಿ; ಕಿಡಿಗೇಡಿಗಳ ಶಿಕ್ಷಿಸಿ; ಪಾಕಿಸ್ತಾನ ವಿರುದ್ಧ ಕೇಂದ್ರದ ತರಾಟೆ

ಕಾಂಗ್ರೆಸ್‌ ನಾಯಕರಿಗೆ ನಮ್ಮನ್ನು (ಬಿಜೆಪಿ) ಹೇಗೆ ಬೈಯಬೇಕು ಎಂಬುದೇ ಮುಖ್ಯವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರಿಂದ ಇದಕ್ಕಿಂತ ಜಾಸ್ತಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು. ಜಿ.ಪಂ. ಮಾಜಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯಕ್‌ ಉಪಸ್ಥಿತರಿದ್ದರು.

Advertisement

ವಿವಿಧೆಡೆ ಆಚರಣೆ
ಸಂವಿಧಾನ ಸಮರ್ಪಣ ದಿನವನ್ನು ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಆಚರಿಸಲಾಯಿತು. ಮಂಗಳೂರಿನಲ್ಲಿ ಬಿಜೆಪಿ ಎಸ್‌.ಸಿ. ಮೋರ್ಚಾದ ವತಿಯಿಂದ ಪುರಭವನ ಮುಂಭಾಗ ಕಾರ್ಯಕ್ರಮ ನಡೆಯಿತು.

ವಾರ್ಡನ್‌ಗಳ
ಮರು ಹೊಂದಾಣಿಕೆ
ರಾಜ್ಯದಲ್ಲಿರುವ 2,400ಕ್ಕೂ ಅಧಿಕ ಬಿಸಿಎಂ ಹಾಸ್ಟೆಲ್‌ಗ‌ಳಲ್ಲಿ ವಾರ್ಡನ್‌ಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ನಿಯಮಾನುಸಾರ ಹೊರಗುತ್ತಿಗೆಯಡಿ ವಾರ್ಡನ್‌ಗಳ ನೇಮಕ ಸಾಧ್ಯವೆ ಎಂಬುದನ್ನು ಪರಿಶೀಲಿಸಲಿದ್ದೇವೆ. ಅಲ್ಲಿಯವರೆಗೂ ಖಾಲಿ ಇದ್ದ ಕಡೆ ಮರು ಹೊಂದಾಣಿಕೆ ಮಾಡಲಿದ್ದೇವೆ.
– ಕೋಟ ಶ್ರೀನಿವಾಸ ಪೂಜಾರಿ,
ಸಮಾಜ ಕಲ್ಯಾಣ ಇಲಾಖೆ ಸಚಿವ

ನೆಹರೂ ಆರೆಸ್ಸೆಸ್‌ ಅನ್ನು ಅರ್ಥಮಾಡಿಕೊಂಡಿದ್ದರು
ಆರೆಸ್ಸೆಸ್‌ ದೇಶಪ್ರೇಮದ ಸಂಘಟನೆಯಾಗಿದ್ದು, ಇದನ್ನು ಅರ್ಥಮಾಡಿಕೊಂಡು ಗಣರಾಜ್ಯೋತ್ಸವದ ಪಥಸಂಚನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಭಾರತದ ಮೊದಲ ಪ್ರಧಾನಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಜವಾಹರ್‌ಲಾಲ್‌ ನೆಹರೂ ಅವರೇ ಹೇಳಿದ್ದರು. ಆರೆಸ್ಸೆಸ್‌ ಬಗ್ಗೆ ಟೀಕೆ ಮಾಡುವ ಕಾಂಗ್ರೆಸ್‌ ಮುಖಂಡರು ನೆಹರೂ ಅವರಿಗಿಂತ ಮೇಲಿನವರಾದರೆ ಅವರ ಟೀಕೆಗೆ ಉತ್ತರ ನೀಡುವುದಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next