Advertisement

ಲಾಭನಗದೀಕರಣ : ಮುಂಬಯಿ ಶೇರು ಪೇಟೆಗೆ 130.25 ಅಂಕ ನಷ್ಟ

04:58 PM Mar 20, 2017 | |

ಮುಂಬಯಿ : ಹೂಡಿಕೆದಾರರು ಹಾಗೂ ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 130.25 ಅಂಕಗಳ ನಷ್ಟದೊಂದಿಗೆ 29,518.74 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 33.20 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 9,126.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ  ಐಡಿಯಾ ಸೆಲ್ಯುಲರ್‌, ಐಟಿಸಿ, ಟಿಸಿಎಸ್‌, ರಿಲಯನ್ಸ್‌, ಐಸಿಐಸಿಐ ಬ್ಯಾಂಕ್‌.

ಇಂದಿನ ಟಾಪ್‌ ಗೇನರ್‌ : ಅರಬಿಂದೋ ಫಾರ್ಮಾ, ಗ್ರಾಸಿಂ, ಈಶರ್‌ ಮೋಟರ್‌, ಬಿಎಚ್‌ಇಎಲ್‌, ಟಾಟಾ ಪವರ್‌.  ಟಾಪ್‌ ಲೂಸರ್‌ಗಳು : ಐಡಿಯಾ ಸೆಲ್ಯುಲರ್‌, ಎಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಇನ್‌ಫೋಸಿಸ್‌, ಟಿಸಿಎಸ್‌.
 

Advertisement

Udayavani is now on Telegram. Click here to join our channel and stay updated with the latest news.

Next