Advertisement

ಪ್ರೊ.ಯು.ಆರ್‌.ರಾವ್‌ಗೆ ಭಾಸ್ಕರಾಚಾರ್ಯ ಪ್ರಶಸ್ತಿ   

12:01 PM May 16, 2017 | Team Udayavani |

ಬೆಂಗಳೂರು: ವಿಶ್ವ ವಿಖ್ಯಾತ ಗಣಿತಜ್ಞ ಮತ್ತು ಖಗೋಳ ಶಾಸ್ತ್ರಜ್ಞ ಭಾಸ್ಕರಾಚಾರ್ಯ ಅವರ ನೆನಪಿಗಾಗಿ ವಿಜಯಪುರ ಜಿಲ್ಲೆಯ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುವ ರಾಷ್ಟ್ರಮಟ್ಟದ ಭಾಸ್ಕರ ಪ್ರಶಸ್ತಿಗೆ 2017ನೇ ಸಾಲಿನಲ್ಲಿ ಪದ್ಮ ಭೂಷಣ ಡಾ.ಯು.ಆರ್‌.ರಾವ್‌ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಮಂಗಳವಾರ (ಮೇ 16) ಸಂಜೆ ಮಾಗಡಿ ಕಾರ್ಡ್‌ ರಸ್ತೆಯಲ್ಲಿರುವ ಕಾಸಿಯಾ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಂದಗಿ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಡಾ.ಯು.ಆರ್‌.ರಾವ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ ತಿಳಿಸಿದ್ದಾರೆ.  

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ವಿಭೂತಿಪುರ ಡಾ.ಮಹಾಂತಲಿಂಗ ಶಿವಾಚಾರ್ಯರು, ಮೇಲಗಣವಿ ಮಠದ ಮಲಯಶಾಂತಮುನಿ ಶಿವಾಚಾರ್ಯರು, ಕೊಣ್ಣೂರಿನ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಕನ್ನೊಳ್ಳಿಯ ಸಿದ್ಧಲಿಂಗ ಶಿವಾಚಾರ್ಯರು, ಆಲಮಟ್ಟಿಯ ಡಾ.ರುದ್ರಮುನಿ ದೇವರು, ಕರಿಭಂಟನಾಳದ ಶಿವಕುಧಿಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.

ಅತಿಥಿಗಳಾಗಿ ಡಾ.ಯು.ಆರ್‌.ರಾವ್‌ ಅವರ ಪತ್ನಿ ಯಶೋಧಾ ಆರ್‌.ರಾವ್‌, ಶಾಸಕ ರಮೇಶ್‌ ಭೂಸಧಿನೂರ, ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ, ಬಿ.ಎಸ್‌.ಪರಮಶಿವಯ್ಯ, ಕೆ.ಎನ್‌.ನಿಜಲಿಂಗಪ್ಪ, ಎ.ಪದ್ಮನಾಭ, ವಾಸುದೇವ ಅರಕಲ್‌ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next