Advertisement

ಪ್ರೊ.ಬಿ.ಕೆ.ರವಿ ಬೆಂವಿವಿ ಕುಲಸಚಿವ

11:46 AM Apr 28, 2017 | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಕೆ.ರವಿಯವರನ್ನು ವಿವಿಯ ನೂತನ ಕುಲಸಚಿವರನ್ನಾಗಿ(ಆಡಳಿತ) ನೇಮಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

Advertisement

ಪ್ರೊ. ಬಿ.ಕೆ.ರವಿಯವರು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಪತ್ರಿಕೋದ್ಯಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದ ನಂತರ ಕೆಲವರ್ಷ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಸೇವಾ ಹಿರಿತನದ ಆಧಾರದಲ್ಲಿ ವಿವಿಧ ಹುದ್ದೆಯನ್ನು ಅಲಂಕರಿಸಿರುವ ಅವರು, ಸದ್ಯ ಬೆಂವಿವಿ ಸಮೂಹ ಸಂವಾಹನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ದುಡಿದಿದ್ದಾರೆ ಹಾಗೂ ದುಡಿಯುತ್ತಿದ್ದಾರೆ.

ಸದ್ಯ ಬೆಂವಿವಿ ಕುಲಸಚಿವರಾಗಿರುವ ಪ್ರೊ.ಕೆ.ಎನ್‌.ನಿಂಗೇಗೌಡ ಅವರ ಸೇವಾವಧಿಯು ಏ.28ಕ್ಕೆ ಮುಗಿಯಲಿದ್ದು,  ನಿವೃತ್ತಿ ಹೊಂದಲಿದ್ದಾರೆ. ಕುಲಸಚಿವ(ಆಡಳಿತ) ಹುದ್ದೆ ಖಾಲಿ ಬಿಡುವುದರಿಂದ ವಿವಿಗೆ ಶೈಕ್ಷಣಕವಾಗಿ ಸಮಸ್ಯೆಯಾಗಬಹುದು ಎಂಬುದನ್ನು ಅರಿತ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಮೂಲಕ ಪ್ರೊ.ಬಿ.ಕೆ.ರವಿಯವರನ್ನು ಕುಲಸಚಿವ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ.

 “ಉದಯವಾಣಿ’ಯೊಂದಿಗೆ ಮಾತನಾಡಿದ ಪ್ರೊ.ಬಿ.ಕೆ.ರವಿಯವರು, ಕುಲಸಚಿವ ಸ್ಥಾನಕ್ಕೆ ಸರ್ಕಾರ ನನ್ನನ್ನು ನೇಮಿಸಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಆದರೆ, ಆದೇಶ ಪ್ರತಿ ಇನ್ನೂ ತಲುಪಿಲ್ಲ. ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕನಾಗಿ ಅನೇಕ ವರ್ಷಗಳಿಂದ ಬೆಂವಿವಿ ಬಗ್ಗೆ ತಿಳಿದಿದ್ದೇನೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಇದು ಒಂದಾಗಿದೆ. ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ವಿವಿಯ ಶೈಕ್ಷಣಿಕ ಉನ್ನತಿಗೆ ಶ್ರಮಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next