ನವದೆಹಲಿ: ದೇಶದಲ್ಲಿ ಎಂಟು ಮೂಲಸೌಕರ್ಯ ವಲಯದ ಉತ್ಪಾದನಾ ದರವು ಸೆಪ್ಟೆಂಬರ್‌ನಲ್ಲಿ ಶೇ.7.9ಕ್ಕೆ ಏರಿಕೆಯಾಗಿದೆ. ಇದು ಕಳೆದ ಮೂರು ತಿಂಗಳಲ್ಲಿ ಅತ್ಯಧಿಕವಾಗಿದೆ.
ಕಲ್ಲಿದ್ದಲು, ಗೊಬ್ಬರ, ಸಿಮೆಂಟ್ ಮತ್ತು ವಿದ್ಯುತ್ ವಲಯದಲ್ಲಿ ಉತ್ಪಾದನೆ ಅಧಿಕವಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೂಲಸೌಕರ್ಯ ವಲಯದ ಬೆಳವಣಿಗೆ ದರ ಶೇ. 5.4ರಷ್ಟಿತ್ತು.
ಈ ಹಣಕಾಸು ವರ್ಷದಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಒಟ್ಟಾರೆ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಗೊಬ್ಬರ, ಉಕ್ಕು, ಸಿಮೆಂಟ್, ತೈಲ ಸಂಸ್ಕರಣೆ ಮತ್ತು ವಿದ್ಯುತ್ ವಲಯದ ಉತ್ಪಾದನಾ ದರ ಶೇ.9.6ರಷ್ಟು ದಾಖಲಾಗಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.16.9ರಷ್ಟಿತ್ತು.
ವಿಶೇಷವಾಗಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕಲ್ಲಿದ್ದಲು, ಗೊಬ್ಬರ, ಸಿಮೆಂಟ್ ಮತ್ತು ವಿದ್ಯುತ್ ವಲಯದ ಉತ್ಪಾದನಾ ದರ ಶೇ.12ರಷ್ಟು ದಾಖಲಾಗಿದೆ.
Related Articles