ನವದೆಹಲಿ: 2009ರಲ್ಲಿ ಜಗತ್ತಿನಾದ್ಯಂತ ತೆರೆ ಕಂಡ “ಅವತಾರ್’ ಇಂಗ್ಲಿಷ್ ಸಿನಿಮಾ ಇನ್ನು ಕನ್ನಡದಲ್ಲಿ ಕೂಡ ಲಭ್ಯವಾಗಲಿದೆ.
Advertisement
ಡಿ.16ರಂದು ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ವೀಕ್ಷಣೆಗೆ ಸಿಗಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕದ ಸಿನಿಮಾ ನಿರ್ಮಾಪಕ ಜಾನ್ ಲ್ಯಾನ್‌ಡೌ “ಭಾರತಕ್ಕೆ ನಮಸ್ತೆ. ನಿಮ್ಮಲ್ಲಿ ಇರುವ ವೈವಿಧ್ಯತೆಯನ್ನು ಕಂಡು ಬೆರಗುಗೊಂಡಿದ್ದೇನೆ. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಅವತಾರ್ ಸಿನಿಮಾದ ಅನುಭವ ಪಡೆಯಲಿದ್ದೀರಿ. ಡಿ.16ರಂದು ಈ ಅನುಭವ ಪಡೆದುಕೊಳ್ಳೋಣ’ ಎಂದು ಬರೆದುಕೊಂಡಿದ್ದಾರೆ.