ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ಭಾನುವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
58 ರ ಹರೆಯದ ಆನೇಕಲ್ ಬಾಲರಾಜ್ ಇಂದು ಬೆಳಗ್ಗೆ ಜೆ.ಪಿ. ನಗರದ ನಿವಾಸದ ಬಳಿ ವಾಕಿಂಗ್ ಮುಗಿಸಿ ಬರುತ್ತಿರುವಾಗ ಅಪಘಾತಕ್ಕೆ ಗುರಿಯಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಆನೇಕಲ್ ಬಾಲರಾಜ್ ಕಳೆದ 20 ವರ್ಷಗಳಿಂದ ಚಿತ್ರ ನಿರ್ಮಾಪಕರಾಗಿ ಖ್ಯಾತಿ ಪಡೆದಿದ್ದರು. ಪುತ್ರ ಸಂತೋಷ್ ಅವರನ್ನೂ ಚಿತ್ರರಂಗಕ್ಕೆ ಪರಿಚಯ ಮಾಡಿದ್ದರು.
ಆನೇಕಲ್ ಬಾಲರಾಜ್ 1998 ರಲ್ಲಿ’ಹಲೋ ಯಮ’ ನಿರ್ಮಾಣದಿಂದ ಯಶಸ್ಸು ಪಡೆದರು. 2003 ರಲ್ಲಿ ದರ್ಶನ್ ಅಭಿನಯದ ಕರಿಯ ಚಿತ್ರದ ಮೂಲಕ ಯಶಸ್ಸು ಕಂಡಿದ್ದರು. ಪ್ರೇಮ್ ನಿರ್ದೇಶನದ ಚಿತ್ರ 100 ದಿನಗಳ ಪ್ರದರ್ಶನ ಕಂಡಿತ್ತು. ಆಹಾ, ಜಾಕ್ ಪಾಟ್ , ಪುತ್ರ ಸಂತೋಷ್ ಗಾಗಿ ಕೆಂಪ, ಜನ್ಮ, ಗಣಪ, ಕರಿಯ 2 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.