Advertisement
ಇದು ಶಿವಾಜಿನಗರದ ಶ್ರೀಮುತ್ಯಾಲಮ್ಮ ದೇವಿ ದೇವಸ್ಥಾನದ ಬಳಿ ಭಾನುವಾರ ಕಂಡು ಬಂದ ದೃಶ್ಯ. ಪ್ರತಿವರ್ಷದಂತೆ ಪುಲಕೇಶಿನಗರ, ಶಿವಾಜಿನಗರ ಸೇರಿದಂತೆ ಇಲ್ಲಿನ ಆಸು-ಪಾಸಿನಲ್ಲಿರುವ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಭಾನುವಾರ ಸಂಜೆ ಏಕಕಾಲದಲ್ಲಿ ವಿವಿಧ ಪ್ರದೇಶಗಳಿಂದ ನೂರಾರು ಗಣೇಶ ಮೂರ್ತಿಗಳನ್ನು ಟ್ರ್ಯಾಕ್ಟರ್, ಕ್ರೇನ್‌ಗಳ ಮೂಲಕ ಮೆರವಣಿಗೆಯಲ್ಲಿ ಹಲಸೂರು ಕೆರೆಯ ಕಲ್ಯಾಣಿಗೆ ತಂದು ವಿಸರ್ಜಿಸಲಾಯಿತು.
Related Articles
Advertisement
ಕ್ರೇನ್‌ಗಳಲ್ಲಿ ಗಣೇಶ ಮೂರ್ತಿ: 10 ಅಡಿಗೂ ಎತ್ತರದ ಗಣೇಶ ಮೂರ್ತಿಗಳನ್ನು ಹಲವಾರು ಕ್ರೇನ್‌ಗಳಲ್ಲಿ ಒಂದೊಂದಾಗಿ ಹಲಸೂರು ಕರೆಯತ್ತ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಪೊಲೀಸ್ ಚೌಕಿ ಮುಂಭಾಗದಲ್ಲಿದ್ದ ಖಾಲಿ ಜಾಗದಲ್ಲಿ ಕ್ರೇನ್‌ನಲ್ಲಿ ಬೃಹತ್ ಆಕಾರದ ಗಣೇಶ ಮೂರ್ತಿಗಳನ್ನು ಒಂದಾದ ಮೇಲೊಂದರಂತೆ ಎತ್ತರಕ್ಕೆ ಎತ್ತಿ, ನಂತರ ಕೆಳಗಿಳಿಸುವ ದೃಶ್ಯ ಮೈನವಿರೇಳಿಸುವಂತಿದ್ದವು. ಇನ್ನು ಬಹುತೇಕ ಗಣೇಶ ಮೂರ್ತಿಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಸಾಲಾಗಿ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂತು.
ಸರ್ವಧರ್ಮಗಳ ಸಮಾಗಮ: ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿಹಿಂದೂ ಮುಸಲ್ಮಾನರಲ್ಲದೆ ಬೇರೆ ಧರ್ಮಗಳ ಜನ ಸಹ ಸೇರಿದ್ದರು. ಇಲ್ಲಿನ ಗಣೇಶ ಚತುರ್ಥಿ ಮೆರವಣಿಗೆಯು ಸರ್ವಧರ್ಮಗಳ ಸಮಾಗಮಕ್ಕೆ ವೇದಿಕೆಯಾಗಿ ಗಣೇಶ ಉತ್ಸವದ ಮೆರಗು ಇನ್ನಷ್ಟು ಹೆಚ್ಚುವಂತೆ ಮಾಡಿತು. ದೊಡ್ಡ ದೊಡ್ಡ ಗಣಪತಿ ಮೂರ್ತಿಗಳ ಹೊತ್ತೂಯ್ಯುವ ರಸ್ತೆ ತುಂಬೆಲ್ಲಾ ಜನಸಾಗರ. ಮಹಿಳೆಯರು, ವಯಸ್ಕರು, ಮಕ್ಕಳು ಎನ್ನದೇ ಎಲ್ಲ ವಯೋಮಾನದ ಲಕ್ಷಾಂತರ ಭಕ್ತರು ಗಣೇಶೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ವಾರಾಂತ್ಯದ ಹಿನ್ನೆಲೆಯಲ್ಲಿ ಜನಸ್ತೋಮ ಅತ್ಯಧಿಕವಾಗಿತ್ತು. ಇನ್ನು ರಸ್ತೆಯುದ್ದಕ್ಕೂ ಅಲ್ಲಲ್ಲಿ ತಿಂಡಿ, ತಿನಿಸು, ಪಾನಿಯಗಳನ್ನು ನೀಡುತ್ತಿರುವ ದೃಶ್ಯವೂ ಕಂಡು ಬಂತು.