Advertisement

ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ

10:34 AM Nov 22, 2018 | Team Udayavani |

ಕಲಬುರಗಿ: ಗುರುವಿನ ಮಾರ್ಗದರ್ಶನದಲ್ಲಿ ದೃಢ ಹೆಜ್ಜೆಯೊಂದಿಗೆ ನಡೆದರೆ ನಿಶ್ಚಿತ ಗುರಿ ತಲುಪಲು ಸಾಧ್ಯ ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

Advertisement

ಆಳಂದ ತಾಲೂಕಿನ ಚಿಂಚನಸೂರ ಬಾಣೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀಮಠದ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ, ನಂತರ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ಹಸಿವಾದ ಒಡಲಿನ ದಾಹ ಹಿಂಗಿಸಲು ಅನ್ನದಾತ, ಸನ್ಮಾರ್ಗದಲ್ಲಿ ಸಾಗಲು ಗುರು ಬೇಕು. ಆ ಗುರು ಎನ್ನುವ ಬೆಳಕಲ್ಲಿ ಜೀವನದ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು. ಬಾಣೇಶ್ವರ ಮಠದ ಉತ್ತರಾಧಿಕಾರಿ ಆಗಿರುವ ಬೀಡ ಜಿಲ್ಲೆಯ ಅಂಬಾ ಜೋಗದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಂಚನಸೂರ ಕಲ್ಮಠದ ಸಿದ್ಧಮಲ್ಲ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. 
 
ಕಡಗಂಚಿ ವೀರಭದ್ರ ಶಿವಾಚಾರ್ಯರು, ಮಹಾಗಾಂವದ ಗುರುಲಿಂಗ ಶಿವಾಚಾರ್ಯರು, ಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಸ್ವಾಮೀಜಿ, ನರೋಣಾದ ಚನ್ನಮಲ್ಲ ದೇವರು, ಮುದ್ದಡಗಾದ ಸಂಗಮೇಶ ಶಿವಾಚಾರ್ಯರು, ಮಲಕೂಡದ ಗುರುಲಿಂಗ ಶಿವಾಚಾರ್ಯರು ಹಾಜರಿದ್ದರು. ಪಾಳಾದ ಗುರುಮೂರ್ತಿ ಶಿವಾಚಾರ್ಯರು ನಿರೂಪಿಸಿದರು, ಮಲ್ಲಯ್ಯ ಶಾಸ್ತ್ರೀ ಐನಾಪುರ ಸಂಗೀತ ಸೇವೆ ಸಲ್ಲಿಸಿದರು ಎಂದು ವಿಶ್ವಾರಾಧ್ಯ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.