Advertisement
ಮೊದಲಿಗೆ ಪುರಸಭೆ ವ್ಯಾಪ್ತಿಯ ಇ ಖಾತೆಯಿಂದ ನಗರವಾಸಿಗರ ಜೋಬಿಗೆ ಕತ್ತರಿ ಬೀಳುತ್ತಿದೆ, ಹಲವುವಾರ್ಡ್‌ನಲ್ಲಿನ ಮೂಲ ನಿವಾಸಿಗಳ ಮನೆಗಳು ಇ ಖಾತೆಯಾಗಿಲ್ಲ, ಅವರು ದುಬಾರಿ ಹಣ ನೀಡಿ ಖಾತೆ ಮಾಡಿಸಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ನಿವೇಶನಹೊಂದಿರುವವರು ಬ್ಯಾಂಕ್‌ನಲ್ಲಿ ಸಾಲ ಪಡೆಯಲುಇ ಖಾತೆ ಮಾಡಿಸುತ್ತಿದ್ದಾರೆ. ಉಳಿದವರು ಹಾಗೆ ಮನೆ ಕಟ್ಟುತ್ತಿದ್ದಾರೆ.
Related Articles
Advertisement
ವಾಣಿಜ್ಯ ಸಂಕೀರ್ಣ ತೆರವು ಮಾಡಿ: ರಾಷ್ಟ್ರೀಯ ಹೆದ್ದಾರಿ ಮುತ್ತುತ್ತರಾಯ ದೇವಾಲಯ ಮುಂಭಾಗದ ಕುವೆಂಪು ವಾಣಿಜ್ಯ ಮಳಿಗೆ ತೆರವು ಮಾಡಲು ಈಗಾಗಲೇ 5 ವರ್ಷದ ಹಿಂದೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದರೂ ಅವುಗಳ ತೆರವು ಮಾಡಲಾಗಿಲ್ಲ, ವಿದ್ಯುತ್ ಸಂಪರ್ಕ ಕಡಿತಮಾಡಿದ್ದರೂ ವಾಣಿಜ್ಯ ಮಳಿಗೆಯಲ್ಲಿ ಅಕ್ರಮವಾಗಿ ಸೇರಿಕೊಂಡಿರುವವರು ಈವರೆಗೂ ಖಾಲಿ ಮಾಡಿಲ್ಲ.ಈ ಬಗ್ಗೆ ಅಧ್ಯಕ್ಷರು ಗಮನ ಹರಿಸಬೇಕಾಗಿದೆ.
ಭುವನೇಶ್ವರಿ ಮಾರುಕಟ್ಟೆ ನಿರ್ಮಿಸಿ: ಪುರಸಭೆ ಕಚೇರಿ ಮುಂಭಾಗದಲ್ಲಿನ ಭುವನೇಶ್ವರಿ ಮಾರುಕಟ್ಟೆಯಲ್ಲಿ ನೂರಕ್ಕೂ ಹೆಚ್ಚು ಮಳಿಗೆ ಇದ್ದು, ನಗರೋತ್ಥಾನ ಯೋಜನೆಯಲ್ಲಿ ನೂತನ ಮಳಿಗೆನಿರ್ಮಾಣ ಮಾಡುವ ಉದ್ದೇಶದಿಂದ ವರ್ತಕರನ್ನು ಖಾಲಿ ಮಾಡಿಸಿ, ಕಟ್ಟಡ ತೆರವು ಮಾಡಿ ವರ್ಷ ಕಳೆದರೂ, ಈ ಬಗ್ಗೆ ಪುರಸಭೆ ಗಮನ ಹರಿಸುತ್ತಿಲ್ಲ. ಇಲ್ಲಿ ಅಂಗಡಿ ಮಳಿಗೆ ಹೊಂದಿದ್ದ ವರ್ತಕರು ಬೀದಿ ಪಾಲಾಗಿದ್ದಾರೆ.
ಉದ್ಘಾಟಿಸಿ 3 ವರ್ಷವಾದ್ರೂ ನೀರು ಪೂರೈಸಿಲ್ಲ : ಮೂರನೇ ಹಂತದ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ಪುರಸಭೆಯ 23 ವಾರ್ಡ್‌ಗೆ ನೀರು ಸರಬರಾಜು ಮಾಡಿಲ್ಲ, ಇನ್ನು ಕಸದ ಸಮಸ್ಯೆ ಹೇಳತೀರದಾಗಿದೆ. ಮನೆ ಕಸ ಸರಿಯಾಗಿ ಸಂಗ್ರಹ ಮಾಡುತ್ತಿಲ್ಲ. ವಾರ್ಡ್‌ನಲ್ಲಿ, ರಸ್ತೆ ಬದಿ, ಕಸ ಶೇಖರಣೆಯಾಗಿ ರೋಗ ಭೀತಿ ಕಾಡುತ್ತಿದೆ. ಒಳಚರಂಡಿ ನೀರು ಗದ್ದೆರಾಮೇಶ್ವರ ದೇವಾಲಯದ ಸಮೀಪ ಶೇಖರಣೆ ಆಗುತ್ತಿದ್ದು, ವೈಜ್ಞಾನಿಕವಾಗಿ ಶುದ್ಧೀಕರಣ ಮಾಡಲಾಗುತ್ತಿಲ್ಲ. ಈ ಬಗ್ಗೆ ನೂತನ ಅಧ್ಯಕ್ಷರ ಮುಂದೆ ನೂರಾರು ಸಮಸ್ಯೆಗಳ ಸರಮಾಲೆ ಇದ್ದು, ಇವುಗಳನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಪಟ್ಟಣದ ಸಾರ್ವಜನಿಕರ ಪ್ರಶ್ನೆಯಾಗಿದೆ.
ಪಟ್ಟಣದಲ್ಲಿ ಸಾಕಷ್ಟು ಸಮಸ್ಯೆಗಳು ಇರುವುದು ಕಣ್ಣ ಮುಂದಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಮೂಲ ಕಾರಣ ತಿಳಿದು ಬಗೆ ಹರಿಸಲಾಗುವುದು, ಅಂಗಡಿ ಮಳಿಗೆ ಹರಾಜು ಸೂಸೂತ್ರವಾಗಿ ಮಾಡಲಾಗುವುದು, ಪ್ರತಿ ತಿಂಗಳು ಮಳಿಗೆಬಾಡಿಗೆ ವಸೂಲಿಗೆ ಪ್ರಾಮುಖ್ಯತೆ ನೀಡಲಾಗುವುದು, ದೀಪಾವಳಿ ಹಬ್ಬದ ನಂತರ ಹಂತವಾಗಿ ಸಮಸ್ಯೆಗಳ ಬಗೆಹರಿಸಲು ಮುಂದಾಗುತ್ತೇನೆ. –ಎಚ್.ಎನ್.ನವೀನ್, ಪುರಸಭೆ ನೂತನ ಅಧ್ಯಕ್ಷ
ಶಾಮಸುಂದರ್ ಕೆ.ಅಣ್ಣೇನಹಳ್ಳಿ